Widgets Magazine
Widgets Magazine

ಬದರಿನಾಥ ಹೆದ್ದಾರಿಯಲ್ಲಿ ಭೂಕುಸಿತ: ಸಂಕಷ್ಟಕ್ಕೆ ಸಿಲುಕಿದ 14 ಸಾವಿರ ಯಾತ್ರಾರ್ತಿಗಳು

ಡೆಹ್ರಾಡೂನ್, ಶನಿವಾರ, 20 ಮೇ 2017 (11:49 IST)

Widgets Magazine

ಬದರಿನಾಥ್ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಸಂಭವಿಸಿದ ಪರಿಣಾಮ ಸುಮಾರು 14 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳು ಅಪಾಯಕ್ಕೆ ಸಿಲುಕಿದ್ದಾರೆ.
 
ಬದರೀನಾಥ್-ಚಾರ್'ದಾಮ್ ಯಾತ್ರಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಚಮೋಲಿ ಜಿಲ್ಲೆಯ ವಿಷ್ಣು ಪ್ರಯಾಗದ ಹಾಥಿ ಪರ್ವತ್ ನಲ್ಲಿ ಭೂಕುಸಿತ ಉಂಟಾಗಿದೆ. ಹೃಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ 60 ಮೀಟರ್ ರಸ್ತೆ ಹಾಗೂ ಭೂಕುಸಿತವುಂಟಾದ ಸ್ಥಳದ 150 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ  ಯಾವೊಬ್ಬ ಯಾತ್ರಾರ್ಥಿಗೂ ಗಾಯಗಳಾಗಿಲ್ಲ.
 
ಭಾರಿ ಬಂಡೆಗಳು ಮತ್ತು ಮಣ್ಣು ರಸ್ತೆಗೆ ಬಿದ್ದಿವೆ. ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಸಿಬ್ಬಂದಿಯು ಹೆದ್ದಾರಿಯಲ್ಲಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.
 
ಇನ್ನು ಭುಕುಸಿತದಿಂದ ತೊಂದರೆಗೆ ಸಿಲುಕಿರುವವರಲ್ಲಿ ಕರ್ನಾಟಕದ 70 ಮಂದಿ ಇದ್ದು, ಅಪಾಯಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕುಲಭೂಷಣ್ ಎಲ್ಲಿದ್ದಾರೆಂದೇ ಪಾಕ್ ಮಾಹಿತಿ ನೀಡಿಲ್ಲ: ಭಾರತ

ನವದೆಹಲಿ: ಐಸಿಜೆ ತೀರ್ಪಿನಿಂದಾಗಿ ಪಾಕಿಸ್ತಾನದ ಗಲ್ಲು ಶಿಕ್ಷೆಯಿಂದ ಪಾರಾದ ಭಾರತದ ಮಾಜಿ ನೌಕಾ ಪಡೆ ...

news

ರಾಜಕೀಯ ಪಕ್ಷಗಳ ಚಾಲೆಂಜ್ ಗೆ ಇಂದು ಚುನಾವಣಾ ಆಯೋಗದಿಂದ ದಿನ ನಿಗದಿ

ನವದೆಹಲಿ: ದೇಶದ ವಿವಿಧ ರಾಜಕೀಯ ಪಕ್ಷಗಳಿಗೆ ಮತಯಂತ್ರಗಳನ್ನು ತಿರುಚುವ ಚಾಲೆಂಜ್ ಗೆ ಇಂದು ಚುನಾವಣಾ ಆಯೋಗ ...

news

ಕುಮಾರಸ್ವಾಮಿ ಆಯ್ತು, ಇನ್ನು ಬಿಎಸ್ ವೈ ಜೀವನಚರಿತ್ರೆಯೂ ಸಿನಿಮಾ!

ಬೆಂಗಳೂರು: ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಖ್ಯಾತ ನಿರ್ದೇಶಕ ಎಸ್. ...

news

ನಾವು ಏಳು ಜನ ಶಾಸಕರು ಕೈ ಸೇರೋದು ನಿಶ್ಚಿತ: ಚಲುವರಾಯ ಸ್ವಾಮಿ

ಬೆಂಗಳೂರು: ನಾವು ಏಳು ಜನ ಶಾಸಕರು ಕೈ ಸೇರೋದು ನಿಶ್ಚಿತ ಎಂದು ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ...

Widgets Magazine Widgets Magazine Widgets Magazine