1,590 ರೂ. ಮೊಬೈಲ್ EMI ಪಾವತಿಸಿ 1 ಕೋಟಿ ರೂ. ಗೆದ್ದ ವಿದ್ಯಾರ್ಥಿನಿ

ನವದೆಹಲಿ, ಶನಿವಾರ, 15 ಏಪ್ರಿಲ್ 2017 (11:03 IST)

Widgets Magazine

ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಲಕ್ಕಿ ಗ್ರಾಹಕ್ ಯೋಜನೆಯ ಲಕ್ಕಿ ಡ್ರಾನಲ್ಲಿ ಮಹಾರಾಷ್ಟ್ರದ ಲಾತೂರ್`ನ ವಿದ್ಯಾರ್ಥಿನಿ ಕೋಟಿ ಗೆದ್ದಿದ್ದಾರೆ. ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಓದುತ್ತಿರುವ ಶ್ರದ್ಧಾ ಮೋಹನ್ ಮೆಂಗ್ ಶೆಟ್ಟೆ ನಿನ್ನೆಯ ಲಕ್ಕಿ ಡ್ರಾನಲ್ಲಿ 1 ಕೋಟಿ ರೂಪಾಯಿ ಗೆದ್ದಿದ್ದಾರೆ.
 


ಶ್ರದ್ದಾ ತಮ್ಮ ರೂಪೇ ಕಾರ್ಡ್ ಮೂಲಕ  ಹೊಸ ಮೊಬೈಲ್ ಫೋನ್ ಇಎಂಐ  ವಹಿವಾಟು 1590 ರೂ, ಪಾವತಿಸಿದ್ದರು.  ಈ ವಹಿವಾಟೇ ಶ್ರದ್ಧಾಳನ್ನ ಕೋಟ್ಯಾಧೀಶೆಯನ್ನಾಗಿ ಮಾಡಿದೆ.
 
ಗುಜರಾತಿನ ಖಾಂಭಟ್`ನ ಪ್ರಾಥಮಿಕ ಶಾಲೆ ಶಿಕ್ಷಕ ಹಾರ್ದಿಕ್ ಕುಮಾರ್, 2ನೇ ಬಹುಮಾನ 50 ಲಕ್ಷ ರೂಪಾಯಿ ಗೆದ್ದಿದ್ಧಾರೆ. ಕೇವಲ 100 ರೂ. ವಹಿವಾಟು ನಡೆಸಿದ್ದ ಉತ್ತರಾಖಂಡ್`ನ ಶೇರ್ ಪುರ್ ಹಳ್ಳಿಯ ಭರತ್ ಸಿಂಗ್ 3ನೇ ಬಹುಮಾನ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.

ಇತ್ತ, ಡಿಜಿ ಧನ್ ಯೋಜನೆಯಡಿ ತಮಿಳುನಾಡಿನ ತಂಬರಮ್ ಜುವೆಲರಿ ಉದ್ಯಮಿ ಪದ್ಮನಾಭನ್ 50 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. 300 ರೂ. ಪೇಮೆಂಟ್ ಪಡೆದಿದ್ದ ಪದ್ಮನಾಭನ್`ಗೆ ಈ ಅದೃಷ್ಟ ಒಲಿದಿದೆ.
 
ಥಾಣೆಯ ಬ್ಯೂಟಿ ಪಾರ್ಲರ್ ಮಾಲಿಕರಾದ ರಾಗಿಣಿ ರಾಜೇಂದ್ರ ಉಟ್ಟೇಕರ್ 2 ನೇ ಬಹುಮಾನ 25 ಲಕ್ಷ ರೂ. ಮತ್ತು ತೆಲಂಗಾಣದ ಅಮೀರ್ ಪೇಟೆಯಲ್ಲಿ ಜವಳಿ ಅಂಗಡಿ ಇಟ್ಟಿರುವ ಶೇಖ್ ರಫಿ 12 ಲಕ್ಷ ರೂ. 3ನೇ ಬಹುಮಾನ ಗೆದ್ದಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಜ್ಯ ಕಾಂಗ್ರೆಸ್ ಗೆ ಕೆಎಚ್ ಮುನಿಯಪ್ಪ ಸಾರಥ್ಯ?

ಬೆಂಗಳೂರು: ಉಪಚುನಾವಣೆ ಗೆಲುವಿನ ಸಂಭ್ರಮದಲ್ಲಿರುವ ರಾಜ್ಯ ಕಾಂಗ್ರೆಸ್ ಗೆ ನೂತನ ಸಾರಥಿ ಯಾರು ಎಂದು ಇಂದು ...

news

ಪೊಲೀಸರಿಗೆ ಬಾಂಬ್ ನಾಗನ ಮನೆಯಲ್ಲಿದ್ದ ಹಣದ ಸುಳಿವು ನೀಡಿದ್ದು ಯಾರು ಗೊತ್ತೇ..?

ಶ್ರೀರಾಂಪುರದಲ್ಲಿ ಬಾಂಬ್ ನಾಗನ ಮನೆ ಮೇಲೆ ನಿನ್ನೆ ದಾಳಿ ನಡೆಸಿದ್ದ ಪೊಲೀಸರು ಸುಮಾರು 14.8 ಕೋಟಿ ರೂ, ...

news

ಉಡುಪಿ ಪೊಲೀಸ್ ಪೇದೆ ಅಮಾನತು ವಾಪಸ್

ಮಂಗಳೂರು: ಪತ್ನಿಗೆ ಕಿರುಕುಳ ನೀಡಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸಿದ್ದ ಉಡುಪಿ ಜಿಲ್ಲೆಯ ...

news

ಉತ್ತರ ಪ್ರದೇಶದಲ್ಲಿನ್ನು ಸಾಧಕರ ಜನ್ಮ ದಿನಾಚರಣೆಗೆಲ್ಲಾ ರಜವಿಲ್ಲ!

ಲಕ್ನೊ: ದಿನಕ್ಕೊಂದು ಹೊಸ ನಿಯಮ ಜಾರಿಗೆ ತರುತ್ತಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಇಂದು ಹೊಸ ...

Widgets Magazine Widgets Magazine