ಎಣ್ಣೆ ಹೊಡೆಯೋರ ಕಿಕ್ ಇಳಿಸೋ ಸುದ್ದಿ ಕೊಟ್ಟಿದೆ ಗೋವಾ

ಪಣಜಿ, ಸೋಮವಾರ, 18 ಸೆಪ್ಟಂಬರ್ 2017 (10:24 IST)

ಪಣಜಿ: ಗೋವಾ ಪ್ರವಾಸ ಮಾಡುವುದೇ ಎಣ್ಣೆ ಹೊಡೆಯೋಕೆ ಎನ್ನುವವರು ಇದ್ದಾರೆ. ಆದರೆ ಇನ್ನು ಮುಂದೆ ಗೋವಾದಲ್ಲಿ ಸಿಕ್ಕ ಸಿಕ್ಕಲ್ಲಿ ಮಾಡಿ ಮತ್ತಿನಲ್ಲಿ ತೂರಾಡುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.


 
ಕಂಠಪೂರ್ತಿ ಕುಡಿದು ಇತರರಿಗೆ ತೊಂದರೆ ಮಾಡುವುದನ್ನು ತಪ್ಪಿಸಲು ರಾಜ್ಯದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ನಿಷೇಧಿಸಲಾಗುವುದು ಎಂದು ಸಿಎಂ ಮನೋಹರ್ ಪರಿಕ್ಕರ್ ಆದೇಶ ಹೊರಡಿಸಿದ್ದಾರೆ.
 
ಇದಕ್ಕಿಂತ ಮೊದಲು ರಾಜ್ಯ ಸರ್ಕಾರ ಗೋವಾ ಸಮುದ್ರ ತೀರದಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿತ್ತು. ಇದೀಗ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ನಿಷೇಧಿಸಿದೆ. ಆದೇಶ ಉಲ್ಲಂಘಿಸಿ ಸಮಸ್ಯೆ ಉಂಟು ಮಾಡಿದರೆ ಅಂತಹವರನ್ನು ಬಂಧಿಸಲೂ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಹೀಗಾಗಿ ಇನ್ನು ಮುಂದೆ ಇಲ್ಲಿ ಮದ್ಯಪಾನ ಮಾಡುವವರಿದ್ದರೆ ತಮ್ಮ ಮನೆಯೊಳಗೆ ಅಥವಾ ನಾಲ್ಕು ಗೋಡೆಯ ಮಧ್ಯೆ ಯಾರಿಗೂ ತೊಂದರೆಯಾಗದಂತೆ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.
 
ಇದನ್ನೂ ಓದಿ… ದಿಗ್ವಿಜಯ್ ಸಿಂಗ್ ಬಳಿಕ ಇನ್ನೊಬ್ಬ ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ವಿರುದ್ಧ  ಆಕ್ಷೇಪಾರ್ಹ ಟೀಕೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದಿಗ್ವಿಜಯ್ ಸಿಂಗ್ ಬಳಿಕ ಇನ್ನೊಬ್ಬ ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟೀಕೆ

ನವದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅಸಭ್ಯ ಪದ ಬಳಸಿ ...

news

ದಕ್ಷಿಣ ಭಾರತದಲ್ಲೀಗ ಹುಯ್ಯೋ ಹುಯ್ಯೋ ಮಳೆರಾಯ!

ಬೆಂಗಳೂರು: ಇದುವರೆಗೆ ಮಳೆಯಿಲ್ಲ.. ಬರ.. ಎಂದು ವರುಣ ದೇವನಿಗೆ ಹಿಡಿಶಾಪ ಹಾಕುತ್ತಿದ್ದ ಮಂದಿಗೆ ಇದೀಗ ...

news

ಲಂಚದ ವಿಡಿಯೋ ವೈರಲ್: ಸಂಚಾರಿ ಪೊಲೀಸರಿಗೆ ರಾಮಲಿಂಗಾರೆಡ್ಡಿ ತರಾಟೆ

ಬೆಂಗಳೂರು: ಸಂಚಾರಿ ಪೊಲೀಸರು ಲಂಚ ಪಡೆಯುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗೃಹಸಚಿವ ...

news

ದಲಿತ ಮುಖಂಡ, ಬಿಜೆಪಿ ಲೀಡರ್ ಪುತ್ರನಿಂದ ಪೊಲೀಸರ ಮೇಲೆ ಹಲ್ಲೆ..?

ಬೆಂಗಳೂರು: ದಲಿತ ಸಂಘಟನೆ ಮುಖಂಡ ಮತ್ತು ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ...

Widgets Magazine