20 ವರ್ಷಗಳಿಂದ ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದ ಮಹಿಳೆಯನ್ನ ರಕ್ಷಿಸಿದ ಪೊಲೀಸರು..!

ಪಣಜಿ, ಬುಧವಾರ, 12 ಜುಲೈ 2017 (10:59 IST)

20 ವರ್ಷಗಳಿಂದ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿದ್ದ 50 ವರ್ಷದ ಮಹಿಳೆಯನ್ನ ಪೊಲೀಸರು ರಕ್ಷಿಸಿರುವ ಘಟನೆ ಗೋವಾದ ಪಣಜಿ ಸಮೀಪದ ಕ್ಯಾಂಡೊಲಿಮ್ ಹಳ್ಳಿಯಲ್ಲಿ ನಡೆದಿದೆ.
 


ಮಹಿಳೆಯ ಅಸಹಜ ವರ್ತನೆ ಹಿನ್ನೆಲೆಯಲ್ಲಿ ಪೋಷಕರೇ ಈಕೆಯನ್ನ ಬಂದಿಯಾಗಿಸಿದ್ದರೆಂದು ತಿಳಿದುಬಂದಿದೆ. ಮಹಿಳೆಯನ್ನ ಕೂಡಿ ಹಾಕಿರುವ ಬಗ್ಗೆ ಎನ್`ಜಿಓ ನೀಡಿದ ಮಾಹಿತಿ ಮೇರೆಗೆ ಕಾರ್ಯೋನ್ಮುಖರಾದ ಪೊಲೀಸರು, ಮನೆ ಮೇಲೆ ದಾಳಿ ನಡೆಸಿ ಮಹಿಳೆಯನ್ನ ರಕ್ಷಿಸಿದ್ದಾರೆ.
 
ಸಹೋದರರು, ಕುಟುಂಬ ಸದಸ್ಯರೆಲ್ಲ ಅದೇ ಮನೆಯಲ್ಲಿದ್ದು, ಈ ಮಹಿಳೆಯನ್ನ ಮಾತ್ರ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಕಿಟಕಿ ಮೂಲಕವೇ ಆಹಾರ, ನೀರು ಪೂರೈಸುತ್ತಿದ್ದರು ಎಂದು ತಿಳಿದುಬಂದಿದೆ. ಮಹಿಳಾ ಪೊಲೀಸರು ರೇಡ್ ಮಾಡಿದಾಗ ಕೊಠಡಿಯಲ್ಲಿದ್ದ ಮಹಿಳೆ ಬೆತ್ತಲಾಗಿ, ತೆವಳಲು ಸಾಧ್ಯವಾಗದೇ ಇದ್ದದ್ದನ್ನ ಗಮನಿಸಿದ್ದಾರೆ. ಬಳಿಕ ಚಿಕಿತ್ಸೆಗೆ ಕೊಂಡೊಯ್ಯಲಾಗಿದೆ.
 
ಮುಂಬೈ ಮೂಲದ ವ್ಯಕ್ತಿ ಜೊತೆ ಈಕೆಯ ಮದುವೆ ನಡೆದಿತ್ತು. ಆದರೆ, ಆ ವ್ಯಕ್ತಿಗೆ ಮತ್ತೊಂದು ಮದುವೆಯಾಗಿರುವ ಬಗ್ಗೆ ಅರಿತು ಬೇಸರಗೊಂಡು ತವರಿಗೆ ವಾಪಾಸ್ಸಾಗಿದ್ದಳಂತೆ. ಆನಂತರ ಮಹಿಳೆಯ ವರ್ತನೆ ವಿಚಿತ್ರವಾಗಿದ್ದರಿಂದ ಕುಟುಂಬ ಸದಸ್ಯರು ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ವಿಚಾರಣೆ ನಡೆಸುತ್ತಿರುವ ಪೊಲೀಸರು ಸದ್ಯ ಯಾರನ್ನೂ ಬಂಧಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾರತದ ವಿದ್ಯಾರ್ಥಿಗಳ ಜೊತೆ ಬಾಸ್ಕೆಟ್ ಬಾಲ್ ಆಡಿ ಸಂಭ್ರಮಪಟ್ಟ ಅಮೆರಿಕದ ನಾವಿಕರು

ಮಲಬಾರ್-2017 ಸಮರಾಭ್ಯಾಸದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಅಮೆರಿಕದ ನೌಕಾಪಡೆಯ ನಾವಿಕರು ಮಂಗಳವಾರ ...

news

ಅಮರನಾಥ್ ಯಾತ್ರಿಗಳ ಮೇಲೆ ಮತ್ತಷ್ಟು ದಾಳಿ ಸಾಧ್ಯತೆ...!

ಕಾಶ್ಮಿರ: ಅಮರನಾಥ್ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಮಾಸುವ ಮುನ್ನವೇ ಉಗ್ರರು ಮತ್ತಷ್ಟು ದಾಳಿ ನಡೆಸುವ ...

news

ಐಸಿಸ್ ಯುಗಾಂತ್ಯ: ಅಲ್‌ಕೈದಾ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಹತ್ಯೆ

ಮೊಸೂಲ್: ಜಾಗತಿಕ ಉಗ್ರಗಾಮಿ ಅಲ್‌ಕೈದಾ ಸಂಘಟನೆಯ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿಯನ್ನು ಹತ್ಯೆ ...

news

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆಗೆ ಗಡುವು

ಪಾಟ್ನಾ: ಭ್ರಷ್ಟಾಚಾರ ಆರೋಪದಡಿ ಸಿಲುಕಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಾಲ್ಕು ದಿನಗಳೊಳಗೆ ...

Widgets Magazine