ಟಿಟಿವಿ ದಿನಕರನ್ ವಿರುದ್ಧ ಲುಕೌಟ್ ನೋಟಿಸ್ ಜಾರಿ

ಚೆನ್ನೈ, ಬುಧವಾರ, 19 ಏಪ್ರಿಲ್ 2017 (08:51 IST)

Widgets Magazine

ಅಣ್ಣಾಡಿಎಂಕೆ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚದ ಆಮಿಷವೊಡ್ಡಿದ ಆರೋಪ ಎದುರಿಸುತ್ತಿರುವ ಆಣ್ಣಾಡಿಎಂಕೆ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ಬಂಧನಕ್ಕೆ  ದೆಹಲಿ ಪೊಲೀಸರು ಮುಂದಾಗಿದ್ದು, ಲುಕೌಟ್ ನೋಟಿಸ್ ಹೊರಡಿಸಲಾಗಿದೆ.


ದಿನಕರನ್ ದೇಶ ಬಿಟ್ಟು ತೆರಳುವ ಸಂಶಯದ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ನೀಡಲಾಗಿದ್ದು, ಚೆನ್ನೇಗೆ ಬಂದಿಳಿದಿರುವ ದೆಹಲಿ ಪೊಲೀಸ್ ತಂಡ ಯಾವುದೇ ಕ್ಷಣದಲ್ಲಿ ದಿನಕರನ್ ಅವರನ್ನ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪನ್ನೀರ್ ಸೆಲ್ವಂ ಬಣ ಮತ್ತು ಶಶಿಕಲಾ ಬಣಗಳ ನಡುವೆ ಅಣ್ಣಾಡಿಎಂಕೆಯ ಎರಡು ಎಲೆ ಚಿಹ್ನೆಗಾಗಿ ತಿಕ್ಕಾಟ ಏರ್ಪಟ್ಟ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಚಿಹ್ನೆಯನ್ನ ಸ್ಥಗಿತಗೊಳಿಸಿತ್ತು. ಹೀಗಾಗಿ, ಏನಾದರೂ ಮಾಡಿ ಆ ಚಿಹ್ನೆಯನ್ನ ಪಡೆಯಲು ಮುಂದಾಗಿದ್ದ ದಿನಕರನ್ 60 ಕೋಟಿ ಹಣದ ಆಮಿಷ ಇಟ್ಟಿದ್ದರು ಎಂಬುದು ಆರೋಪ. ದೆಹಲಿ ಹೋಟೆಲ್ ಒಂದರಲ್ಲಿ ಮಧ್ಯವರ್ತಿ ಸುಖೇಶ್ ಚಂದರ್ ಎಂಬಾತನನ್ನ ಬಂಧಿಸಿದ್ದ ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಸುಖೇಶ್ ಬಳಿ 1.5 ಕೋಟಿ ರೂ. ಹಣವನ್ನೂ ವಶಪಡಿಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಇಫೆಕ್ಟ್? ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆಯಿತೊಂದು ಘಟನೆ

ನವದೆಹಲಿ: ಪ್ರಧಾನಿ ಮೋದಿ ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಕೆಲವು ...

news

ಶಶಿಕಲಾ, ದಿನಕರನ್ ಪಕ್ಷದಿಂದ ಹೊರಕ್ಕೆ: ಜಯಕುಮಾರ್ ಘೋಷಣೆ

ತಮಿಳುನಾಡಿನ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಮತ್ತು ಸೋದರಳಿಯ ಟಿಟಿವಿ ದಿನಕರನ್ ...

news

41 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ಸಿಎಂ ಆದಿತ್ಯನಾಥ್

ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳಂಕಿತ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ...

news

ಇರಾಕಿ ಸೇನಾಪಡೆಗಳಿಂದ 60 ಐಸಿಸ್ ಉಗ್ರರ ನರಮೇಧ

ಬಾಗ್ದಾದ್: ಮೊಸುಲ್‌‌ನಲ್ಲಿ ಇರಾಕಿ ಸೇನಾಪಡೆಗಳು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ 60 ಮಂದಿ ಐಎಸ್‌ಐಎಸ್ ...