Widgets Magazine
Widgets Magazine

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ: 13 ಮಂದಿ ದುರ್ಮರಣ

ತಿರುಪತಿ, ಶುಕ್ರವಾರ, 21 ಏಪ್ರಿಲ್ 2017 (20:10 IST)

Widgets Magazine

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಿರುಪತಿಯಿಂದ 25 ಕಿ.ಮೀ ದೂರದ ಯೆರ್ಪೇಡುವಿನ ಶ್ರೀಕಾಳಹಸ್ಥಿ ಹೆದ್ದಾರಿಯಲ್ಲಿ ನಡೆದಿದೆ.
 


ಯೆರ್ಪೇಡು ಪೊಲೀಸ್ ಠಾಣೆ ಮುಂದೆಯೇ ಈ ಘಟನೆ ನಡೆದಿದ್ದು, ಶ್ರೀಕಾಳಹಸ್ಥಿಯಿಂದ ತಿರುಪತಿ ಕಡೆಗೆ ತೆರಳುತ್ತಿದ್ದ ಲಾರಿ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬಿ ಬಿದ್ದು 7 ಮಂದಿ ಮೃತಪಟ್ಟಿದ್ದಾರೆ. ಬಳಿಕ ಻ದೇ ಲಾರಿ ಸಮೀಪದ ಅಂಗಡಿಗೂ ನುಗ್ಗಿದ್ದು ಅಲ್ಲಿಯೂ 6 ಮಂದಿಯನ್ನ ಬಲಿ ಪಡೆದಿದೆ.

ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ವಿಪರ್ಯಾಸವೆಂದರೆ ಅಪಘಾತದ ಸಂದರ್ಭ ನೆರವಿಗೆ ಮುಂದಾದ ಕೆಲ ಸ್ಥಳೀಯರು ಕರೆಂಟ್ ಶಾಕ್`ನಿಂದ ಅಸುನೀಗಿದ್ದಾರೆ. ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಯಲಲಿತಾ ಸಾವಿಗೆ ಹೊಸ ಟ್ವಿಸ್ಟ್ ನೀಡಿದ ಶಶಿಕಲಾ ಸಂಬಂಧಿ!

ಚೆನ್ನೈ: ತಮಿಳುನಾಡಿನಲ್ಲಿ ಈಗ ಶಶಿಕಲಾ ನಟರಾಜನ್ ವಿರೋಧಿ ಅಲೆ ಹೆಚ್ಚಾಗುತ್ತಿರುವಂತೆ ಶಶಿಕಲಾ ...

news

ಸೋನು ನಿಗಂ ಬೆಂಬಲಿಸಿ ಮಾತನಾಡಿದ್ದಕ್ಕೆ ಕೊಲೆ!

ಮುಂಬೈ: ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಇಟ್ಟು ಪ್ರಾರ್ಥನೆ ಮಾಡಿ ತೊಂದರೆ ಕೊಡಬಾರದು ಎಂದು ಟ್ವೀಟ್ ಮಾಡಿದ್ದ ...

news

ಮಂಜು ಗಡ್ಡೆ ನೋಡಲು ಮುಗಿಬಿದ್ದ ಜನ! ಅಂತಹದ್ದೇನಿತ್ತು ಅಲ್ಲಿ?!

ನವದೆಹಲಿ: ಸಾಮಾನ್ಯವಾಗಿ ನಾವೆಲ್ಲರೂ ಐಸ್ ತುಂಡನ್ನು ನೋಡಿದ್ದೇವೆ. ಆದರೆ ಇಲ್ಲಿ ಮಾತ್ರ ಐಸ್ ಗಟ್ಟಿಯನ್ನು ...

news

ನೀವು ವಾಟ್ಸಪ್ ಗ್ರೂಪ್ ಅಡ್ಮಿನ್ ಗಳೇ? ಹಾಗಿದ್ದರೆ ಈ ಸುದ್ದಿ ಓದಿ!

ನವದೆಹಲಿ: ಜನಪ್ರಿಯ ಆಪ್ ವಾಟ್ಸಪ್ ನಲ್ಲಿ ಏನೇನೋ ಗ್ರೂಪ್ ಕಟ್ಟಿಕೊಂಡು ಆಡ್ಮಿನ್ ಗಳೆಂದು ...

Widgets Magazine Widgets Magazine Widgets Magazine