ನಾಳೆಯಿಂದ ಪೆಟ್ರೋಲ್, ಡೀಸೆಲ್ ಸರಬರಾಜು ವಾಹನಗಳು ಸ್ಥಗಿತ

ಬೆಂಗಳೂರು, ಮಂಗಳವಾರ, 4 ಏಪ್ರಿಲ್ 2017 (14:14 IST)

Widgets Magazine

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನ ಮತ್ತಷ್ಟು ತೀವ್ರಗೊಳಿಸಲು ಲಾರಿ ಮಾಲೀಕರು  ನಿರ್ಧರಿಸಿದ್ದಾರೆ. ಏಪ್ರಿಲ್ 8ರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಲಾರಿ ಮಾಲೀಕರು ಘೋಷಿಸಿದ್ದಾರೆ.


ನಾಳೆಯಿಂದಲೇ ಪೆಟ್ರೋಲ್, ಡೀಸೆಲ್ ಸರಬರಾಜು ವಾಹನಗಳ ಸಂಚಾರ ಸ್ಥಗಿತಗೊಳಿಸುವುದಾಗಿ ಲಾರಿ ಮಾಲೀಕರು ಘೊಷಿಸಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಲಾರಿ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ 3 ದಿನ ಗಡುವು ನೀಡಿರುವ ಲಾರಿ ಮಾಲೀಕರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ 6 ದಿನಗಳಿಂದ 22 ಲಕ್ಷ ಲಾರಿಗಳು ಬಂದ್`ನಲ್ಲಿ ಪಾಲ್ಗೊಂಡಿದ್ದು, ಇನ್ನೂ 7 ಲಕ್ಷ ಲಾರಿಗಳು ಮುಷ್ಕರಕ್ಕೆ ಸಾಥ್ ನೀಡಲಿವೆ. ಲಾರಿಗಳ ವಿಮೆ ಕಂತು ಹೆಚ್ಚಳ, 15 ವರ್ಷಗಳ ಹಳೆಯ ವಾಹನಗಳ ನಿಷೇಧ, ಆರ್`ಟಿಓ ಶುಲ್ಕ ಹೆಚ್ಚಳ ಇವೇ ಮುಂತಾದ ಕೇಂದ್ರಗಳ ಕ್ರಮಗಳನ್ನ ವಿರೋಧಿಸಿ ಬಂದ್ ನಡೆಸಲಾಗುತ್ತಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಡುಗಿ ಮೇಲೆ ಹಣ ಚೆಲ್ಲಿ ಕುಣಿದು ಕುಪ್ಪಳಿಸಿದ ಸ್ಟೇಶನ್ ಮಾಸ್ಟರ್

ಕುಡಿದ ಮತ್ತಿನಲ್ಲಿ ಸ್ಟೇಜ್ ಹತ್ತಿದ ಸ್ಟೇಶನ್ ಮಾಸ್ಟರ್ ಹುಡುಗಿಯರ ಜೊತೆ ಕುಣಿದು ಕೈಯಲ್ಲಿದ್ದ ಹಣ ಚೆಲ್ಲಿದ ...

news

ಪ್ರಚಾರ ಮುಗಿಸಿ ಬಂದು ದನದ ಕೊಟ್ಟಿಗೆಯಲ್ಲೇ ಮಲಗುವ ಸುರೇಶ್ ಕುಮಾರ್

ಸರಳ, ಸಜ್ಜನಿಕೆಗೆ ಹೆಸರಾದ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಉಪಚುನಾವಣಾ ಪ್ರಚಾರ ಕಣದಲ್ಲೂ ತಮ್ಮ ಸರಳ ಜೀವನ ...

news

140 ಶಾಸಕರ ಸಂಖ್ಯೆ 65ಕ್ಕಿಳಿದಾಗ ಕೃಷ್ಣಗೆ ದೂರಾಲೋಚನೆ ಇರಲಿಲ್ಲವೇ: ಸಿದ್ದರಾಮಯ್ಯ ಪ್ರಶ್ನೆ

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ 4 ದಿನ ಬಾಕಿ ಉಳಿದಿರುವಂತೆ ಪರಸ್ಪರ ವಾಕ್ಸಮರ ಸಹ ಜೋರಾಗಿದೆ. ...

news

ಮಾನನಷ್ದ ಮೊಕದ್ದಮೆಗೆ ಸರ್ಕಾರದ ಹಣ ದುರ್ಬಳಕೆ ಮಾಡಿದ ಆರೋಪದಲ್ಲಿ ಸಿಎಂ ಕೇಜ್ರಿವಾಲ್

ನವದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್ ರ ಮೇಲೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾನ ನಷ್ಟ ಮೊಕದ್ದಮೆ ಪ್ರಕರಣ ...

Widgets Magazine Widgets Magazine