Widgets Magazine
Widgets Magazine

ವಿವಾಹವಾದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾದ ನವದಂಪತಿ

ಪ್ರಕಾಶಂ(ಆಂಧ್ರಪ್ರದೇಶ), ಬುಧವಾರ, 20 ಸೆಪ್ಟಂಬರ್ 2017 (16:57 IST)

Widgets Magazine

ಪ್ರಕಾಶಂ(ಆಂಧ್ರಪ್ರದೇಶ): ಮದುವೆಗಳು ಸಾಮಾನ್ಯವಾಗಿ ಜೊತೆಯಾಗಿ ಜೀವನ ನಡೆಸುವ ಭರವಸೆಯೊಂದಿಗೆ ನೆರವೇರಿಸಲಾಗುತ್ತದೆ, ಆದರೆ ಒಂದಾಗಿ ಸಾಯುವ ಭರವಸೆಯ ಮೇರೆಗೆ ನೆರವೇರಿಸಲಾಗುವುದಿಲ್ಲ. ಆದರೆ, ಇಲ್ಲೊಂದು ನವ ಜೋಡಿಯೊಂದು ವಿವಾಹವಾದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನವವಿವಾಹಿತರು ವಿವಾಹವಾದ ಕೆಲವೇ ಗಂಟೆಗಳಲ್ಲಿ ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಹ ಘಟನೆ ವರದಿಯಾಗಿದೆ.
 
ಪ್ರೇಮಿಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು. ವಿಜಯವಾಡದಲ್ಲಿ ಮದುವೆಯಾಗಲು ಮಂಗಳವಾರ ಅವರು ತಮ್ಮ ಮನೆಗಳನ್ನು ತೊರೆದರು. ವೆಟಪಾಲೆಮ್ ರೈಲ್ವೆ ನಿಲ್ದಾಣದ ಬಳಿ ಬುಧವಾರ ರೈಲ್ವೆ ಜಾಡುಗಳಲ್ಲಿ ಅವರ ದೇಹಗಳನ್ನು ಪತ್ತೆ ಮಾಡಲಾಯಿತು.
 
ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ 22 ವರ್ಷ ವಯಸ್ಸಿನ ಬೆಟ್ಟುಲ್ಲಾ ಸಂದೀಪ್ ಮತ್ತು 20 ವರ್ಷ ವಯಸ್ಸಿನ ಭೋಗಿರೆಡ್ಡಿ ಮೌನಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೀತಿಗೆ ಮನೆಯಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ವಿಜಯವಾಡಾ ನಗರದಲ್ಲಿ ವಿವಾಹ ಮಾಡಿಕೊಳ್ಳಲು ನಗರಕ್ಕೆ ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ.  
 
ಮೃತ ಜೋಡಿಯ ಸ್ನೇಹಿತರ ಪ್ರಕಾರ ಮಂಗಳವಾರ ವಿಜಯವಾಡದಲ್ಲಿ ಅವರು ವಿವಾಹವಾದರು. ಅದೇ ರಾತ್ರಿ, ದಂಪತಿಗಳು ತಮ್ಮ ಸ್ನೇಹಿತರನ್ನು ತಮ್ಮ ಜೀವನಕ್ಕೆ ಅಂತ್ಯಗೊಳಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
 
ವಿಜಯವಾಡಾದಲ್ಲಿ ನಿನ್ನೆ ರಾತ್ರಿ ವಿವಾಹವಾದ ನಂತರ ದಂಪತಿ ತಮ್ಮ ತಮ್ಮ ಗೆಳೆಯರಿಗೆ ತಾವು ಜೀವನ ಅಂತ್ಯಗೊಳಿಸಲು ನಿರ್ಧರಿಸಿದ್ದಾಗಿ ಮೊಬೈಲ್ ಸಂದೇಶ ರವಾನಿಸಿದ್ದಾರೆ.
 
ವಿವಾಹವಾದ ಕೆಲವೇ ಗಂಟೆಗಳ ನಂತರ ದಂಪತಿ ಪರಸ್ಪರ ಕೈಹಿಡಿದು ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಮನೆಯವರ ವಿರೋಧ ಎದುರಿಸಲು ಧೈರ್ಯವಿಲ್ಲದಿರುವುದರಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ: ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಶ್ರೀಗಳನ್ನ ...

news

ಪ್ರಧಾನಿ ಮೋದಿ ಸರ್ಕಾರ ಭಾರತದ ಮಾನ ಹರಾಜು ಹಾಕುತ್ತಿದೆ: ರಾಹುಲ್ ಗಾಂಧಿ

ನವದೆಹಲಿ: ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಮೋದಿ ...

news

ಬೆಳ್ಳಂ ಬೆಳಗ್ಗೆ ಎಸ್.ಎಂ. ಕೃಷ್ಣ ಅಳಿಯನಿಗೆ ಐಟಿ ಶಾಕ್

ಮಾಜಿ ಮುಖ್ಯಮಂತ್ರಿ ಎಸ್`.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಒಡೆತನದ ಎಬಿಸಿ ಕಂಪನಿಗೆ ಸೇರಿದ ಕಾಫಿ ಡೇಗಳ ...

news

ಅಮೆರಿಕಾ ಅಧ್ಯಕ್ಷರ ಹೇಳಿಕೆ ನಾಯಿ ಬೊಗಳಿದಂತೆ ಎಂದ ಉತ್ತರ ಕೊರಿಯಾ

ನವದೆಹಲಿ: ಅಮೆರಿಕಾ ಮತ್ತು ಉತ್ತರ ಕೊರಿಯಾ ನಡುವೆ ಮಾತಿನ ಯುದ್ಧ ಜೋರಾಗಿದೆ. ಉತ್ತರ ಕೊರಿಯಾವನ್ನು ನಾಶ ...

Widgets Magazine