ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ನೇಣಿಗೆ ಶರಣು

ಮುಂಬೈ, ಭಾನುವಾರ, 15 ಅಕ್ಟೋಬರ್ 2017 (11:07 IST)

ಮುಂಬೈ: ಕಾಂಗ್ರೆಸ್‌‌ನ ಹಿರಿಯ ಮುಖಂಡ ನೇಣಿಗೆ ಶರಣಾಗಿರುವ ಘಟನೆ ಮುಲುಂದ್‌‌ ನಲ್ಲಿ ನಡೆದಿದೆ. ಮಹದೇವ್‌ ಶೆಲರ್‌(64) ಆತ್ಮಹತ್ಯೆಗೆ ಶರಣಾದ ಮುಖಂಡ.


ತೀವ್ರ ಅನಾರೋಗ್ಯ ಬಳಲುತ್ತಿದ್ದ ಮಹದೇವ್, ಇದೇ ಕಾರಣಕ್ಕೆ ತಮ್ಮ ಮನೆಯಲ್ಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ಮಹದೇವ್‌ ಮಹಾರಾಷ್ಟ್ರದ ಕಾಂಗ್ರೆಸ್‌ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ನಿನ್ನೆ ಪತ್ನಿ ಮಾರ್ಕೆಟ್‌ ಗೆ ಹೋಗಿದ್ದ ವೇಳೆ ಮಹದೇವ್‌ ಸಾವಿಗೆ ಶರಣಾಗಿದ್ದಾರೆ. ನಂತರ ಮನೆಗೆ ಬಂದ ಪತ್ನಿಗೆ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಷ್ಟೊತ್ತಿಗಾಗಲೆ ಮಹದೇವ್‌ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಹದೇವ್‌ ಮನೆಯಲ್ಲಿ ಡೆತ್‌ ನೋಟು ಪತ್ತೆಯಾಗಿದ್ದು, ಅನಾರೋಗ್ಯದಿಂದ ಸಾವಿಗೆ ಶರಣಾಗಿರುವುದಾಗಿ ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಸ್ನೇಹಿತನ ಮನೆಯ ಫ್ರಿಡ್ಜ್ ನಲ್ಲಿ ಪತ್ತೆ….!

ನವದೆಹಲಿ: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿರುವ ಘಟನೆ ದೆಹಲಿಯ ...

news

ಬೆಂಗಳೂರಿನಲ್ಲಿ ಗುಂಡಿಗಳಿಗೆ ಸವಾರರು ಬಲಿ: ವರದಿ ಕೇಳಿದ ರಾಹುಲ್ ಗಾಂಧಿ

ಬೆಂಗಳೂರು: ಭಾರೀ ಮಳೆಯಿಂದ ನಗರದ ಹಲವು ರಸ್ತೆಗಳು ಗುಂಡಿಮಯವಾಗಿವೆ. ಹೀಗಾಗಿ ಇದರಿಂದ ಸಾವನ್ನಪ್ಪಿರುವ ಹಾಗೂ ...

news

ರಾಹುಲ್ ಗಾಂಧಿಗೆ ಸಚಿವೆ ಸ್ಮೃತಿ ಇರಾನಿಯ ವಿಶಿಷ್ಟ ತಿರುಗೇಟು

ನವದೆಹಲಿ: ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತ ಶೋಚನೀಯ ಪರಿಸ್ಥಿತಿಗೆ ತಲುಪಿದ ಹಿನ್ನಲೆಯಲ್ಲಿ ...

news

ಸಚಿವ ರೋಷನ್ ಬೇಗ್ ಮೇಲೆ ನಟ ಜಗ್ಗೇಶ್ ಕಿಡಿ

ಬೆಂಗಳೂರು: ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಕೊನೆಗೆ ಕ್ಷಮೆ ಯಾಚಿಸಿದ ಸಚಿವ ರೋಷನ್ ...

Widgets Magazine
Widgets Magazine