Widgets Magazine
Widgets Magazine

ಮದ್ಯದ ಬ್ರಾಂಡ್‌ಗಳಿಗೆ ಮಹಿಳೆಯರ ಹೆಸರಿಟ್ರೆ ಮಾರಾಟದಲ್ಲಿ ಹೆಚ್ಚಳ : ಬಿಜೆಪಿ ಸಚಿವ

ಮುಂಬೈ, ಸೋಮವಾರ, 6 ನವೆಂಬರ್ 2017 (14:56 IST)

Widgets Magazine

ಮದ್ಯದ ಬ್ರಾಂಡ್‌ಗಳಿಗೆ ಮಹಿಳೆಯರ ಹೆಸರಿಡಿ, ಆವಾಗ ನೋಡಿ ಹೇಗೆ ಮಾರಾಟವಾಗುತ್ತೆ ಎಂದು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಮಹಾರಾಷ್ಟ್ರದ ನಂದೂರ್‌ಬರ್ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ  ಮಾತನಾಡಿ, ಮದ್ಯದ ಬಾಟಲಿಗಳಿಗೆ ಮಹಿಳೆಯರ ಹೆಸರಿಟ್ಟಲ್ಲಿ ವೇಗವಾಗಿ ಮಾರಟವಾಗುತ್ತವೆ ಎನ್ನುವ ಸೆಕ್ಸಿ ಹೇಳಿಕೆ ನೀಡಿದ್ದರು.
 
ಒಂದು ಬ್ರ್ಯಾಂಡ್‌ಗೆ ಭಿಂಗಾರಿ, ಮತ್ತೊಂದು ಬ್ರ್ಯಾಂಡ್‌ಗೆ ಬಾಬ್ಬಿ, ತದನಂತರ ಮತ್ತೊಂದು ಬ್ರ್ಯಾಂಡ್‌ಗೆ ಜ್ಯೂಲಿ ಎಂದು ಹೆಸರಿಡಿ ಮದ್ಯ ನೋಡು ನೋಡುತ್ತಲೇ ಮಾರಾಟವಾಗುತ್ತದೆ. ನಾನು ನಿಮಗೆ ನಿಮ್ಮ ಮದ್ಯದ ಬ್ರಾಂಡ್ ಯಾವುದು ಎಂದು ಕೇಳಿದೆ. ಅದಕ್ಕೆ ನೀವು ಮಹಾರಾಜ ಎಂದು ಹೇಳಿದಿರಿ. ಹಾಗಾದ್ರೆ ಹೇಗೆ ಮಾರಟವಾಗುತ್ತದೆ? ಮಹಾರಾಜಾ ಬದಲಿಗೆ ಮಹಾರಾಣಿ ಎಂದು ಹೆಸರಿಸಿ. ಆವಾಗ ನೋಡಿ ಮದ್ಯ ಹೇಗೆ ಮಾರಾಟವಾಗುತ್ತದೆ ಎಂದು ಸಚಿವರು ತಮ್ಮ ಜಾಣತನವನ್ನು ಪ್ರದರ್ಶಿಸಿದ್ದಾರೆ. 
 
ಈ ದಿನಗಳಲ್ಲಿ ಮದ್ಯದ ಬ್ರ್ಯಾಂಡ್‌ಗಳಿಗೆ ಮಹಿಳೆಯರ ಹೆಸರಿಡುವ ಪ್ರವೃತ್ತಿಯುಲ್ಲಿ ಹೆಚ್ಚಳವಾಗುತ್ತಿದೆ.ತಂಬಾಕು ಬ್ರ್ಯಾಂಡ್‌‍ಗಳು ಕೂಡಾ ಕಮಲ್, ವಿಮಲ್, ಸುಮನ್ ಎಂದು ಹೆಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ ನಾನು ಜೋಕ್ ಮಾಡಿದ್ದೆ, ನನಗೆ ಮಹಿಳೆಯರ ಬಗ್ಗೆ ತುಂಬಾ ಗೌರವವಿದೆ ಎಂದು ಸಚಿವ ಗಿರೀಶ್ ಮಹಾಜನ್ ಉಲ್ಟಾ ಹೊಡೆದಿದ್ದಾರೆ.
 
ಸಚಿವರು ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಯನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಚಿವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹೊಸ ಬಾಂಬ್ ಸಿಡಿಸಿದ ಸಚಿವ ಎಂ.ಬಿ.ಪಾಟೀಲ್

ವಿಜಯಪುರ: ಕೇಂದ್ರ ಸರಕಾರ ನನ್ನ ಮತ್ತು ನನ್ನ ಪತ್ನಿ ಹಾಗೂ ಪುತ್ರನ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ...

news

ಸೊಗಡು ಶಿವಣ್ಣ ಕಾಂಗ್ರೆಸ್‌ಗೆ ಬರೋದಾದ್ರೆ ಸ್ವಾಗತ: ಸಚಿವ ಜಯಚಂದ್ರ

ಬೆಂಗಳೂರು: ಬಿಜೆಪಿ ಮುಖಂಡ ಸೊಗಡು ಶಿವಣ್ಣ ಕಾಂಗ್ರೆಸ್ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ...

news

ಪ್ರಿಯಾಂಕಾ ಖರ್ಗೆ ವಿರುದ್ಧ ಮಾಲೀಕಯ್ಯಾ ಗುತ್ತೇದಾರ್ ವಾಗ್ದಾಳಿ

ಅಫಜಲಪುರ್: ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕಾ ಖರ್ಗೆ ವಿರುದ್ಧ ಹಿರಿಯ ಶಾಸಕ ಮಾಲೀಕಯ್ಯ ಗುತ್ತೇದಾರ್ ...

news

ಮುಂದಿನ ವರ್ಷದಿಂದ ಟಿಪ್ಪು ಬದಲಿಗೆ ಒಡೆಯರ್ ಜಯಂತಿ: ಪ್ರತಾಪ್ ಸಿಂಹ

ಮೈಸೂರು: ಮುಂದಿನ ವರ್ಷದಿಂದ ಟಿಪ್ಪು ಬದಲಿಗೆ ಒಡೆಯರ್ ಜಯಂತಿ ಆಚರಿಸಲಾಗುವುದು ಎಂದು ಬಿಜೆಪಿ ಸಂಸದ ಪ್ರತಾಪ್ ...

Widgets Magazine Widgets Magazine Widgets Magazine