ಮಹಾರಾಷ್ಟ್ರ ಸಿಎಂ ಗದ್ದುಗೆ ಬಿಟ್ಟು ಕೇಂದ್ರದತ್ತ ದೇವೇಂದ್ರ ಫಡ್ನಿವಿಸ್?

Mumbai, ಬುಧವಾರ, 15 ಮಾರ್ಚ್ 2017 (05:51 IST)

Widgets Magazine

ಮುಂಬೈ: ಬಿಜೆಪಿಯಲ್ಲಿ ಈಗ ಭಾರೀ ವಿದ್ಯಮಾನಗಳು ನಡೆಯುತ್ತಿವೆ. ಕೇಂದ್ರ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ರಾಜೀನಾಮೆ ನೀಡಿ ಗೋವಾ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದರೆ, ಅತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೇಂದ್ರಕ್ಕೆ ಪ್ರಮೋಟ್ ಆಗುವ ಸಾಧ್ಯತೆ ದಟ್ಟವಾಗಿದೆ.


 
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಫಡ್ನವಿಸ್ ಕೇಂದ್ರ ಸರ್ಕಾರಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಆದರೆ ಕೇಂದ್ರದಲ್ಲಿ ಅವರ ಸ್ಥಾನವೇನು ಎಂಬುದು ಖಚಿತವಾಗಿಲ್ಲ.
 
ಇತ್ತೀಚೆಗೆ ನಡೆದ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಫಡ್ನವಿಸ್ ಗೆ ಕೇಂದ್ರ ಸರ್ಕಾರದ ಸ್ಥಾನ ಮಾನ ನೀಡಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ. ಫಡ್ನವಿಸ್ ಸ್ಥಾನಕ್ಕೆ ಸದ್ಯಕ್ಕೆ ಮಹಾರಾಷ್ಟ್ರದ ಕಂದಾಯ ಸಚಿವರಾದ ಚಂದ್ರಕಾಂತ್ ಪಾಟೀಲ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಇದೆಲ್ಲಾ ಎಷ್ಟು ಸತ್ಯ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಣಿಪುರದಲ್ಲೂ ಅರಳಿದ ಕಮಲ ಸರ್ಕಾರ

ನವದೆಹಲಿ: ಗೋವಾದಲ್ಲಿ ಬಿಜೆಪಿ ಪಕ್ಷೇತರರ ಸಹಾಯದೊಂದಿಗೆ ಸರ್ಕಾರ ರಚನೆ ನಡೆಸಿದ್ದಾಯ್ತು. ಇದೀಗ ಮಣಿಪುರ ...

news

ಜೂನ್ 30 ರೊಳಗೆ ಶಾಸಕರು ಆಸ್ತಿಯ ವಿವರ ಸಲ್ಲಿಸುವುದು ಕಡ್ಡಾಯ: ಲೋಕಾಯುಕ್ತ

ಬೆಂಗಳೂರು: ಶಾಸಕರು ಜೂನ್ 30 ರೊಳಗೆ ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂದು ...

news

ಅನೈತಿಕ ಸಂಬಂಧಕ್ಕೆ ಅಡ್ಡಿ: ಹೆತ್ತ ಮಗನನ್ನೇ ಹತ್ಯೆಗೈದ ತಾಯಿ

ಕಾಗವಾಡ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎನ್ನುವ ಆಕ್ರೋಶದಿಂದಾಗಿ ಹೆತ್ತಮಗನನ್ನೇ ಹತ್ಯೆಗೈದ ...

news

ಮತ್ತೆ ಪಠಾನ್‌ಕೋಟ್ ವಾಯುನೆಲೆಯ ಮೇಲೆ ದಾಳಿಗೆ ಉಗ್ರರ ಯತ್ನ

ಪಠಾನ್‌ಕೋಟ್: ಪಠಾನ್‌ಕೋಟ್ ವಾಯುನೆಲೆಯ ಮೇಲೆ ಮತ್ತೆ ಉಗ್ರರು ದಾಳಿಗೆ ಯತ್ನಿಸಿದ್ದಾರೆ ಎನ್ನುವ ಅನುಮಾನಗಳ ...

Widgets Magazine Widgets Magazine