ದಲಿತ ಮಹಿಳೆ ದೇಶದ ಮೊದಲ ರಾಷ್ಟ್ರಪತಿಯಾಗಲಿ ಎಂದು ಬಯಸಿದ್ದ ಮಹಾತ್ಮ ಗಾಂಧಿ

ನವದೆಹಲಿ, ಗುರುವಾರ, 11 ಮೇ 2017 (20:39 IST)

Widgets Magazine

ರಾಷ್ಟ್ರಪತಿ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಸೂಕ್ತ ಅಭ್ಯರ್ಥಿ ಹುಡುಕಾಟ ನಡೆಸುತ್ತಿರುವ ಸಂದರ್ಭದಲ್ಲಿಯೇ,ರಾಷ್ಟ್ರಪಿತ ಮಹಾತ್ಮಾ ಗಾಂಧಿ ದಲಿತ ಮಹಿಳೆ ಭಾರತದ ಮೊದಲ ರಾಷ್ಟ್ರಪತಿಯಾಗಬೇಕು ಎಂದು ಬಯಸಿದ್ದರು. ಆದರೆ, ಅವರ "ಮೂಲಭೂತ ಸಲಹೆ" ಯನ್ನು ತಿರಸ್ಕರಿಸಲಾಗಿತ್ತು ಎನ್ನುವ ಸಂಗತಿ ಬಹಿರಂಗವಾಗಿದೆ.   
 
ರಾಷ್ಟ್ರಪತಿ ಮತ್ತು ಶಿಕ್ಷಣತಜ್ಞ ಮಹಾತ್ಮ ಗಾಂಧಿ ಅವರ ಮೊಮ್ಮಗ ರಾಜ್‌ಮೋಹನ್ ಗಾಂಧಿ ಜೂನ್ 1947 ರಲ್ಲಿ ಗಾಂಧಿಯವರು ಎರಡು ಸಂಭಾಷಣೆಗಳನ್ನು ಬಹಿರಂಗಪಡಿಸಿದ ನಂತರವೂ ದಲಿತ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅಧಿಕಾರ ಸ್ವೀಕರಿಸಲು 1997ರವರೆಗೆ ದೇಶ ಕಾಯಬೇಕಾಯಿತು.  
 
ಜಾರ್ಖಂಡ್ ಗವರ್ನರ್ ದ್ರೌಪದಿ ಮುರುಮು ಮತ್ತು ಮಾಜಿ ಲೋಕಸಭೆಯ ಸ್ಪೀಕರ್ ಮೀರಾ ಕುಮಾರ್ ಅವರ ಹೆಸರುಗಳು ಕ್ರಮವಾಗಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ಪೈಕಿ ಸಂಭವನೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಯದಲ್ಲಿ 'ವೈ ಗಾಂಧಿ ಸ್ಟಿಲ್ ಮ್ಯಾಟರ್ಸ್: ಆನ್ ಅಪ್ರೇಸಲ್ ಆಫ್ ದಿ ಮಹಾತ್ಮಸ್ ಲೆಗಸಿ' ಪುಸ್ತಕದ ವಿವರಗಳು ಪ್ರಸ್ತುತವೆನಿಸುತ್ತವೆ.
 
ಗಾಂಧಿಯವರ ಮತ್ತೊಬ್ಬ ಮೊಮ್ಮಗ ಗೋಪಾಲ್ ಕೃಷ್ಣ  ಗಾಂಧಿಯವರನ್ನು ವಿರೋಧ ಪಕ್ಷದ ಅಭ್ಯರ್ಥಿಯಾಗಿ ಸಕ್ರಿಯವಾಗಿ ಪರಿಗಣಿಸಲಾಗುತ್ತಿದೆ. ಇದು ಬಿಜೆಪಿ ನೇತೃತ್ವದ ಎನ್ಡಿಎಯನ್ನು ಹಣಿಯಲು ವಿಪಕ್ಷಗಳು ಜಂಟಿ ನಾಮನಿರ್ದೇಶನವನ್ನು ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅವರನ್ನು 2012 ರಲ್ಲಿ ಉಪಾಧ್ಯಕ್ಷ ಅಭ್ಯರ್ಥಿಯೆಂದು ಬಿಂಬಿಸಲಾಗಿತ್ತು.
 
ಮಹಾತ್ಮಾ ಗಾಂಧಿಯವರ ಸೇವಾಗ್ರಾಮ ಆಶ್ರಮದಲ್ಲಿದ್ದ ಆಂಧ್ರಪ್ರದೇಶ ಮೂಲದ ದಲಿತ ಪ್ರತಿಭಾನ್ವಿತ ಯುವಕ ಚಕ್ರಯ್ಯ ಸಾವನ್ನಪ್ಪಿದ್ದರಿಂದ, ದೇಶದ ಮೊದಲ ರಾಷ್ಟ್ರಪತಿ ದಲಿತರಾಗಬೇಕು ಎಂದು ಗಾಂಧಿ ಬಯಸಿದ್ದಾಗಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.   
 
1947ರ ಜೂನ್ 2 ರಂದು ಚಕ್ರಯ್ಯ ನೆನಪಿಗಾಗಿ ಆಯೋಜಿಸಲಾಗಿದ್ದ ಪ್ರಾರ್ಥನಾ ಸಭೆಯಲ್ಲಿ ಗಾಂಧಿಯವರು, ಒಂದು ವೇಳೆ ಚಕ್ರಯ್ಯ ಬದುಕಿದ್ದಲ್ಲಿ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಪ್ರಸ್ತಾಪಿಸುತ್ತಿದ್ದೆ ಎಂದು ಹೇಳಿರುವುದು ಪುಸ್ತಕದಲ್ಲಿ ಬಹಿರಂಗವಾಗಿದೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಯುವಕನ ರುಂಡ ಕತ್ತರಿಸಿ ಪೊಲೀಸ್ ಠಾಣೆಯಲ್ಲಿ ಎಸೆದು ಪರಾರಿಯಾದ ಆರೋಪಿಗಳು

ಕಡಲೂರು: ಆಘಾತಕಾರಿ ಘಟನೆಯೊಂದರಲ್ಲಿ, ಹದಿಹರೆಯದ ಯುವಕನನ್ನು ಹತ್ಯೆಗೈದು ಅವನ ಶಿರಚ್ಛೇದಿತ ತಲೆಯನ್ನು ...

news

ಇದೀಗ, ರೌಡಿಶೀಟರ್ ನಾಗ ಪತ್ನಿ ಲಕ್ಷ್ಮಿ ಪರಾರಿ

ಬೆಂಗಳೂರು: ರೌಡಿಶೀಟರ್ ನಾಗ ಮತ್ತು ಆತನ ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿ ಬಂಧನದ ಸುದ್ದಿ ...

news

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು

ತುಮಕೂರು: ಬಿಸಲಿನ ಬೇಗೆಯಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿದೆ ಎಂದು ಮಠದ ಮೂಲಗಳು ...

news

ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಕಿಡ್ನಾಪ್‌ಗೆ ವಿಫಲ ಯತ್ನ

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪಿಎ ವಿನಯ್ ಎನ್ನುವವರನ್ನು ಕೆಲ ...

Widgets Magazine