ಜಿಸ್‌ಟಿ ಅಂದ್ರೆ ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್: ಮಮತಾ ಬ್ಯಾನರ್ಜಿ

ಕೋಲ್ಕತಾ, ಸೋಮವಾರ, 6 ನವೆಂಬರ್ 2017 (20:05 IST)

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ನರೇಂದ್ರ ಮೋದಿ ಸರಕಾರವನ್ನು ಸರಕು ಮತ್ತು ಸೇವೆಗಳ ತೆರಿಗೆಯನ್ನು "ಜನರಿಗೆ ಕಿರುಕುಳ ನೀಡಲು ಮತ್ತು ಆರ್ಥಿಕತೆಯನ್ನು ಮುಗಿಸಲು ಗ್ರೇಟ್ ಸೆಲಿಷ್ ಟ್ಯಾಕ್ಸ್" ಎಂದು ಹೇಳಿದ್ದಾರೆ.
ದೇಶದ ಜನತೆಗೆ ಕಿರುಕುಳ ನೀಡಲು ಮತ್ತು ಆರ್ಥಿಕತೆಯನ್ನು ಅಂತ್ಯಗೊಳಿಸಲು ಪ್ರಧಾನಿ ಮೋದಿ ಸರಕಾರ ಜಿಎಸ್‌ಟಿ(  ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್) ಜಾರಿಗೊಳಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
 
ನೋಟು ನಿಷೇಧ ದೇಶದ ಆರ್ಥಿಕತೆಗೆ ವಿನಾಶಕಾರಿಯಾಗಿದೆ. ಸಾಮಾಜಿಕ ಜಾಲ ತಾಣ ಬಳಕೆ ಮಾಡುವವರು ನವೆಂಬರ್ 8 ರಂದು ತಮ್ಮ ಪ್ರೊಫೈಲ್‌ನ್ನು ಕಪ್ಪು ಸ್ಕೈರ್‌ ಆಗಿ ಬದಲಿಸಿ ಕಪ್ಪು ದಿನವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದ್ದಾರೆ.
 
ಜಿಎಸ್‌ಟಿ( ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್) ಜಾರಿಗೆ ತಂದಿರುವುದೇ ಜನತೆಗೆ ಕಿರುಕುಳ ನೀಡಲು,ನಿರುದ್ಯೋಗ ಹೆಚ್ಚಿಸಲು, ಉದ್ಯಮವನ್ನು ಸಂಕಷ್ಟಕ್ಕೀಡು ಮಾಡಲು, ದೇಶದ ಆರ್ಥಿಕತೆಯನ್ನು ಅಂತ್ಯಗೊಳಿಸುವುದಾಗಿದೆ ಎಂದು ಕಿಡಿಕಾರಿದ್ದಾರೆ.
 
ಪಶ್ಚಿಮ ಬಂಗಾಳದಾದ್ಯಂತ ನವೆಂಬರ್ 8 ರಂದು 'ಕಪ್ಪು ದಿನ'ವನ್ನು ಆಚರಿಸುವುದಾಗಿ ತೃಣಮೂಲ ಕಾಂಗ್ರೆಸ್ ಘೋಷಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಮಮತಾ ಬ್ಯಾನರ್ಜಿ ಜಿಎಸ್‌ಟಿ ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್ ಆರ್ಥಿಕತೆ ಕಪ್ಪು ದಿನ Gst Economy November 8 Black Day Mamata Banerjee Great Selfish Tax

ಸುದ್ದಿಗಳು

news

ಪರಿವರ್ತನಾ ಯಾತ್ರೆ ವಿಫಲಕ್ಕೆ ಅಶೋಕ್ ಕಾರಣ: ವರದಿ ಕೇಳಿದ ಅಮಿತ್ ಷಾ

ಬೆಂಗಳೂರು: ಬಿಜೆಪಿಯ ಮಹತ್ವಾಕಾಂಕ್ಷಿ ಪರಿವರ್ತನಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಾದ ಗೊಂದಲಗಳಿಗೆ ಮಾಜಿ ...

news

ಕಾಂಗ್ರೆಸ್ಸಿಗರು ಮನೆ ಮುರಿಯುವವರಲ್ಲ, ಬಿಜೆಪಿಯವರಂತೆ: ಎಚ್.ಅಂಜನೇಯ

ಚಿತ್ರದುರ್ಗ: ಕಾಂಗ್ರೆಸ್ಸಿಗರು ಮನೆ ಮುರಿಯುವವರಲ್ಲ ಬಿಜೆಪಿಯವರಂತೆ. ಕಾಂಗ್ರೆಸ್ಸಿಗರು ಮನೆ ಮತ್ತು ಮನಸು ...

news

ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ: ಶೆಟ್ಟರ್

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ...

news

ಬಿಜೆಪಿ ಯಾವ ಯಾತ್ರೆ ಮಾಡಿದ್ರೂ ಕಾಂಗ್ರೆಸ್‍ಗೆ ಜಯ ಖಚಿತ: ಕೆ.ಸಿ.ವೇಣುಗೋಪಾಲ್

ಉಡುಪಿ: ಬಿಜೆಪಿ ಯಾವ ಯಾತ್ರೆ ಮಾಡಿದ್ರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಜಯ ಖಚಿತ ಎಂದು ...

Widgets Magazine
Widgets Magazine