ಪ್ರೇಯಸಿಗಾಗಿ ವಿಮಾನದಲ್ಲಿ ಬಾಂಬ್ ಬೆದರಿಕೆ ಹಾಕಿದ ಭೂಪ!

ನವದೆಹಲಿ, ಬುಧವಾರ, 1 ನವೆಂಬರ್ 2017 (08:44 IST)

ನವದೆಹಲಿ: ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲೆ ಎಂದು ಕೆಲವರು ಡೈಲಾಗ್ ಬಿಡುತ್ತಾರೆ. ಆದರೆ ಈ ಭೂಪ ಮಾತಿನಲ್ಲಿ ಮಾತ್ರವಲ್ಲ, ದುಸ್ಸಾಹಸವನ್ನೇ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.


 
ಮುಂಬೈ ಮೂಲದ ಚಿನ್ನದ ವ್ಯಾಪಾರಿಯಾಗಿರುವ ಈತ ಕೋಟ್ಯಾಧಿಪತಿ. ಆತ ಪ್ರೀತಿಸುತ್ತಿದ್ದ ಹುಡುಗಿ ಜೆಟ್ ಏರ್ ವೇಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಕೆಲಸ ಬಿಟ್ಟು ತನ್ನೊಂದಿಗೆ ಮುಂಬೈನಲ್ಲಿ ಬಂದು ನೆಲೆಸುವಂತೆ ಮಾಡಲು ಈ ವ್ಯಕ್ತಿ ನಾಟಕವನ್ನೇ ಮಾಡಿದ.
 
ಭಾನುವಾರ ಮುಂಬೈನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದ ವಿಮಾನದ ಟಾಯ್ಲೆಟ್ ನಲ್ಲಿ ಬಾಂಬ್ ಬೆದರಿಕೆ ಚೀಟಿ ಇಟ್ಟು ವಿಮಾನ ತುರ್ತು ಭೂ ಸ್ಪರ್ಶ ಮಾಡುವಂತೆ ಮಾಡಿದ್ದ. ಹಾಗಾದರೂ ತನ್ನ ಪ್ರೇಯಸಿ ಕೆಲಸ ಬಿಟ್ಟು ಬರಲಿ ಎನ್ನುವುದು ಈತನ ಉದ್ದೇಶವಾಗಿತ್ತಂತೆ. ಆದರೆ ಏನೋ ಮಾಡಲು ಹೋಗಿ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕನ್ನಡದಲ್ಲೇ ಟ್ವೀಟ್ ಮಾಡಿ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ರಾಜ್ಯದ ...

news

ಚಳಿಯಿಂದ ನಲುಗುತ್ತಿರುವ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಎರಡು ದಿನದಿಂದ ಚಳಿಯ ಅಬ್ಬರಕ್ಕೆ ನಲುಗಿ ಹೋಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ...

news

ಗೌರಿ ಲಂಕೇಶ್ ಹಂತಕರು ಯಾರು ಎಂದು ತಿಳಿದಿದೆ: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ಬಹುತೇಕ ಮುಗಿದಿದ್ದು, ಸದ್ಯದಲ್ಲೇ ...

news

ಬಿಎಸ್‌ವೈ 84 ದಿನಗಳ ಯಾತ್ರೆಗೆ ಚಾಲನೆ ನೀಡಲಿರುವ ಅಮಿತ್ ಶಾ

ಬೆಂಗಳೂರು: ಮುಂದಿನ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ...

Widgets Magazine
Widgets Magazine