ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯನ್ನು ರೈಲಿನಿಂದ ತಳ್ಳಿದ ಯುವಕ

ಮುಂಬೈ| Krishnaveni K| Last Modified ಭಾನುವಾರ, 21 ಫೆಬ್ರವರಿ 2021 (09:39 IST)
ಮುಂಬೈ: ಮದುವೆಯಾಗಲು ಒಪ್ಪದಿದ್ದ ಕಾರಣಕ್ಕೆ ಯುವತಿಯನ್ನು ಪಾಗಲ್ ಪ್ರೇಮಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಘಟನೆ ಮುಂಬೈನಲ್ಲಿ ನಡೆದಿದೆ.

 
ಇದರ ಪರಿಣಾಮ ಯುವತಿ ತಲೆಗೆ ಗಂಭೀರ ಗಾಯವಾಗಿದೆ. ಎರಡು ವರ್ಷಗಳಿಂದ ಇಬ್ಬರೂ ಸ್ನೇಹಿತರಾಗಿದ್ದರು. ಆದರೆ ಆತನ ಕುಡಿತದ ಚಟದಿಂದ ಬೇಸತ್ತ ಯುವತಿ ದೂರವಾಗಿದ್ದಳು. ಆದರೆ ಯುವಕ ಮಾತ್ರ ಆಕೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆಕೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದು ಈ ಹೀನಾಯ ಕೃತ್ಯವೆಸಗಿದ್ದಾನೆ.
ಇದರಲ್ಲಿ ಇನ್ನಷ್ಟು ಓದಿ :