ನೋಡ ನೋಡುತ್ತಿದ್ದಂತೆ ಕಲ್ಯಾಣಿಯಲ್ಲಿ ಮುಳುಗಿದ ವ್ಯಕ್ತಿ.. ಸಹಾಯಕ್ಕೆ ಬರದೇ ವಿಡಿಯೋ ತೆಗೆಯುತ್ತಿದ್ದ ಜನ

ಕೋಲಾರ, ಗುರುವಾರ, 20 ಏಪ್ರಿಲ್ 2017 (19:38 IST)

Widgets Magazine

ಯಾವುದೇ ಅಪಘಾತದ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡಬೇಕೆಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮಾತ್ರ ಆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇತ್ತೀಚೆಗೆ ಚಿತ್ರದುರ್ಗದಲ್ಲಿ ಅಪಘಾತ ನಡೆದು ಗಾಯಾಳುಗಳು ನರಳುತ್ತಿದ್ದರೂ ಜನ ನೆರವಿಗೆ ಬಂದಿರಲಿಲ್ಲ. ನೆರವು ನೀಡುವ ಬದಲು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇಂಥದ್ದೇ ಒಂದು ಘಟನೆ ಕೋಲಾರದಲ್ಲಿ ನಡೆದಿದೆ.


ವ್ಯಕ್ತಿಯೊಬ್ಬ ಕಲ್ಯಾಣಿಯಲ್ಲಿ ಮುಳುಗುತ್ತಿದ್ದರೂ ನೆರವಿಗೆ ಬಾರದೇ ಸಮೀಪವೇ ನಿಂತು ವಿಡಿಯೋ ಮಾಡುತ್ತಿದ್ದ ಘಟನೆ ಕೋಲಾರದ ಟೇಕಲ್ ರಸ್ತೆಯಲ್ಲಿರುವ ಕಲ್ಯಾಣಿಯಲ್ಲಿ ನಡೆದಿದೆ. ಮೃತವ್ಯಕ್ತಿಯನ್ನ 70 ವರ್ಷದ ಹಾರೋಹಳ್ಳಿ ನಿವಾಸಿ ನಂಜಪ್ಪ ಎಂದು ಗುರ್ತಿಸಲಾಗಿದೆ.

ಸಹಾಯಕ್ಕಾಗಿ ಈ ವ್ಯಕ್ತಿ ಎಷ್ಟೇ ಕೈಚಾಚಿದರೂ ಸಮೀಪವಿದ್ದ ಜನ ನೆರವಿಗೆ ಬರಲಿಲ್ಲ. ಅದರ ಬದಲು ಮೊಬೈಲ್`ಗಳಲ್ಲಿ ವಿಡಿಯೋ ತೆಗೆಯುತ್ತಿದ್ದರು. ಪಾಪ ಬಡ ಜೀಬ ನೀರಿನಲ್ಲೆ ಪ್ರಾಣ ಬಿಟ್ಟಿತು. ಅಗ್ನಿಶಾಮಕ ನೀರಿನಲ್ಲಿ ಶವಕ್ಕಾಗಿ ಹುಡುಕಾಟ ನಡೆಸಿದೆ.
 
 
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ ಈಶ್ವರಪ್ಪ

ಬೆಂಗಳೂರು: ಬಿಜೆಪಿಯಲ್ಲಿ ಕೆಲವರಿಗೆ ತುಂಬಾ ನೋವು ಕಾಡುತ್ತಿದೆ ಎಂದು ಯಡಿಯೂರಪ್ಪ ವಿರುದ್ಧ ಬಿಜೆಪಿ ಹಿರಿಯ ...

news

ಭಾರಿ ಮಳೆಗೆ ಸಿಲುಕಿದ ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ಮೈಸೂರು: ಮೂವರು ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾರಿ ಮಳೆಯಿಂದಾಗಿ ಹಾರಾಟ ಸಾಧ್ಯವಾಗದೆ ಮತ್ತೆ ...

news

ರೌಡಿ ನಾಗರಾಜ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ

ಬೆಂಗಳೂರು: ರೌಡಿ ನಾಗರಾಜ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮುಂದೂಡಿ ಆದೇಶ ...

news

ನಾನು ರೈತರ ಸಾಲ ಮನ್ನಾ ಮಾಡೋಕೆ ರೆಡಿ: ಸಿಎಂ ಸಿದ್ದರಾಮಯ್ಯ

ಮಂಡ್ಯ: ನಾನು ರೈತರ ಸಾಲ ಮನ್ನಾ ಮಾಡೋಕೆ ರೆಡಿಯಾಗಿದ್ದೇನೆ. ಆದರೆ, ಕೇಂದ್ರ ಸರಕಾರ ಮುಂದೆ ಬರುತ್ತಿಲ್ಲ ...

Widgets Magazine