ಹೆಂಡತಿಗಾಗಿ ಸೀರೆ ಕದ್ದು ಸಿಕ್ಕಿಬಿದ್ದ!

ನವದೆಹಲಿ, ಮಂಗಳವಾರ, 1 ಆಗಸ್ಟ್ 2017 (09:49 IST)

ನವದೆಹಲಿ: ಹೆಂಡತಿ ಬೇಡಿಕೆಯಿಟ್ಟರೆ ಮುಗಿಯಿತು. ಈ ಬಗ್ಗೆ ಹಲವು ಜೋಕ್ ಗಳಿವೆ. ಆದರೆ ಇಲ್ಲೊಬ್ಬ ಭೂಪ ಹೆಂಡತಿಯ ಸೀರೆ ಬೇಡಿಕೆ ಪೂರೈಸಲು ಬೇರೆ ದಾರಿಯಿಲ್ಲದೆ ಕದ್ದು ಸಿಕ್ಕಿಬಿದ್ದಿದ್ದಾನೆ.


 
ಛತ್ತೀಸ್ ಘಡದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಹೆಂಡತಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆಯಾಗಿದೆ. ಆದರೆ ಸೌಂದರ್ಯ ಸ್ಪರ್ಧೆಗೆ ತೊಡುವಂತಹ ಡಿಸೈನರ್ ಸೀರೆ ತಂದುಕೊಡಲು ಜೇಬಿನಲ್ಲಿ ದುಡ್ಡಿರಲಿಲ್ಲ. ಏನು ಮಾಡೋದು?
 
ವೃತ್ತಿಯಲ್ಲಿ ಶಿಕ್ಷಕನಾಗಿರುವ ಈತ ಹೆಂಡತಿಯ ಆಸೆ ಪೂರೈಸಲು ಸ್ಥಳೀಯ ಬಟ್ಟೆ ಅಂಗಡಿಯೊಂದಕ್ಕೆ ಕನ್ನ ಹಾಕಿದ್ದಾನೆ. ಅಲ್ಲದೆ 50 ಸಾವಿರ ರೂ. ಮೌಲ್ಯದ ಸೀರೆ ಕದ್ದಿದ್ದಾನೆ. ಬಳಿಕ ತಗೋ ನಿನಗೆ ಗಿಫ್ಟ್ ಎಂದು ಹೆಂಡತಿಗೆ ಕೊಟ್ಟಿದ್ದಾನೆ. ಆಕೆಗೆ ಖುಷಿಯೋ ಖುಷಿ. ಆ ಸೀರೆ ತೊಟ್ಟುಕೊಂಡು ಮಿಂಚಿದ್ದೇ ಮಿಂಚಿದ್ದು.
 
ಆದರೆ ಅವರ ದುರಾದೃಷ್ಟ ನೋಡಿ, ಆ ಕಾರ್ಯಕ್ರಮದಲ್ಲಿ ಆ ಅಂಗಡಿಯ ನೌಕರನೂ ಒಬ್ಬ ಇದ್ದ. ಆತನಿಗೆ ಇದು ತಮ್ಮ ಅಂಗಡಿಯಿಂದ ಕಳ್ಳತನವಾದ ಸೀರೆ ಎಂದು ಗೊತ್ತಾಯಿತು. ತಕ್ಷಣ ಪೊಲೀಸರಿಗೆ ದೂರು ನೀಡಿದ. ವಿಚಾರಣೆ ವೇಳೆ ಎಲ್ಲಾ ಸಂಗತಿ ಬಯಲಾಗಿದೆ.
 
ಇದನ್ನೂ ಓದಿ..  ಬಾಲಿವುಡ್ ನಟರನ್ನು ಕರೆಸಿ ತೊಡೆತಟ್ಟಲಿರುವ ಜಮೀರ್ ಅಹಮ್ಮದ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸೌಂದರ್ಯ ಸ್ಪರ್ಧೆ ಸೀರೆ ಗಂಡ-ಹೆಂಡತಿ Husband-wife Saree Beauty Competition

ಸುದ್ದಿಗಳು

news

ಬಾಲಿವುಡ್ ನಟರನ್ನು ಕರೆಸಿ ತೊಡೆತಟ್ಟಲಿರುವ ಜಮೀರ್ ಅಹಮ್ಮದ್

ಬೆಂಗಳೂರು: ಜೆಡಿಎಸ್ ನಿಂದ ಉಚ್ಛಾಟನೆಗೊಂಡು ದೇವೇಗೌಡರ ವಿರುದ್ಧ ತೊಡೆ ತಟ್ಟಿರುವ ಶಾಸಕ ಜಮೀರ್ ಅಹಮ್ಮದ್ ...

news

‘ಎಲ್ಲಾ ಗೊತ್ತಿದ್ದೂ ರಾಹುಲ್ ಗಾಂಧಿ ಸುಮ್ಮನಿದ್ದುದೇಕೆ?’

ನವದೆಹಲಿ: ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಗೆ ಕೈ ಕೊಟ್ಟು ನಿತೀಶ್ ಕುಮಾರ್ ಬಿಜೆಪಿ ಜತೆ ಕೈ ...

news

ಬೆಂಗಳೂರಿಗೆ ನೂತನ ಪೊಲೀಸ್ ಕಮೀಷನರ್

ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರನ್ನ ವರ್ಗಾವಣೆ ಮಾಡಲಾಗಿದ್ದು, ...

news

ಪ್ರಧಾನಿ ಸ್ವಾತಂತ್ರ್ಯ ದಿನಕ್ಕೆ ಏನು ಭಾಷಣ ಮಾಡಬೇಕು? ನೀವೇ ಐಡಿಯಾ ಕೊಡಿ!

ನವದೆಹಲಿ: ಆಗಸ್ಟ್ 15 ರಂದು ದೇಶದ ಪ್ರಧಾನಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾಡುವ ಭಾಷಣ ಅತ್ಯಂತ ...

Widgets Magazine