ಬೆಂಗಳೂರು-ಮಂಗಳೂರು ನೇರ ರೈಲು ಹಗಲು ಸಂಚಾರಕ್ಕೆ ನಾಳೆ ಚಾಲನೆ

ಬೆಂಗಳೂರು, ಶನಿವಾರ, 8 ಏಪ್ರಿಲ್ 2017 (07:50 IST)

Widgets Magazine

ಹಾಸನ-ಯಶವಂತಪುರ ರೈಲು ಸಂಚಾರ ಆರಂಭವಾದ ಬಳಿಕ ಬೆಂಗಳೂರು ಮತ್ತು ಮಂಗಳೂರು ನೇರ ರೈಲು ಸಂಚಾರಕ್ಕೆ ಕಾಲ ಕೂಡಿ ಬಂದಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಸಂಚರಿಸುವ ಕುಡ್ಲ ಎಕ್ಸ್`ಪ್ರೆಸ್`ಗೆ ನಾಳೆ ರೈಲ್ವೆ ಸಚಿವ ಸುರೇಶ್ ಪ್ರಭು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.


ನೆಲಮಂಗಲ-ಶ್ರವಣಬೆಳಗೊಳ-ಹಾಸನ ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಭಾನುವಾರ, ಮಂಗಳವಾರ ಮತ್ತು ಗುರುವಾರ ಬೆಂಗಳೂರಿಂದ ಮಂಗಳೂರಿಗೆ(ಬೆಳಗ್ಗೆ 7ಕ್ಕೆ ಯಶವಂತಪುರದಿಂದ ಹೊರಟು ಸಂಜೆ 5.45ಕ್ಕೆ ಮಂಗಳೂರು ತಲುಪಲಿದೆ) ಮತ್ತು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರಿನಿಂದ ಬೆಂಗಳೂರಿಗೆ(ಬೆಳಗ್ಗೆ 11.15ಕ್ಕೆ ಹೊರಟು ರಾತ್ರಿ10ಕ್ಕೆ ಸೇರಲಿದೆ) ಸಂಚರಿಸಲಿದೆ.

ಈ ರೈಲು ಮಾರ್ಗ ಆರಂಭವಾದ ಬಳಿಕ  ಮಂಗಳೂರು ಮತ್ತು ಬೆಂಗಳೂರು ನಡುವೆ 87 ಕಿ.ಮೀನಷ್ಟು ಸಂಚಾರ ಕಡಿಮೆಯಾಗಲಿದ್ದು, 3 ಗಂಟೆ ಪ್ರಯಾಣದ ಸಮಯ ತಗ್ಗಲಿದೆ. ರಾತ್ರಿ ಸಂಚರಿಸುವ ಮಂಗಳೂರು ಮತ್ತು ಬೆಂಗಳೂರು ರೈಲು ಮೈಸೂರು ಮಾರ್ಗವಾಗಿ ಹೂಗುವುದರಿಂದ ಹೆಚ್ಚುವರಿ ಸುತ್ತಾಗುತ್ತಿದೆ.

ಬೆಳಗಿನ ರೈಲು: ಸದ್ಯ ಮಂಗಳೂರಿಗೆ ರಾತ್ರಿ ರೈಲು ಸಂಚಾರ ಮಾತ್ರವಿದ್ದು, ನಾಳೆಯಿಂದ ಆರಂಭವಾಗಲಿರುವ ಕುಡ್ಲ ಎಕ್ಸ್`ಪ್ರೆಸ್ ರೈಲು ಬೆಳಗಿನ ಹೊತ್ತು ಸಂಚರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಲವು ದಿನಗಳ ಕನಸು ನನಸಾಗಿದೆ.
ರೈಲು ಬೆಳಗಿನ ಸಂಚಾರದಿಂದ ಮಾರ್ಗಮಧ್ಯೆ ಸಿಗುವ ಪ್ರಾಕೃತಿಕ ಸೌಂದರ್ಯ ಸವಿಯುವ ಅವಕಾಶ ಪ್ರಯಾಣಿಕರಿಗೆ ಸಿಗಲಿದೆ. ಬೆಟ್ಟಗುಡ್ಡ, ಗುಹೆಗಳು, ಕಾಡು, ಝರಿಗಳನ್ನ ನೋಡುವ ಭಾಗ್ಯ ಸಿಗಲಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಿನ್ನೆಸ್ ದಾಖಲೆ ಮಾಡಿದ ನ್ಯಾಯಾಧೀಶರು! ಅದೇನು ಓದಿ!

ನವದೆಹಲಿ: ನ್ಯಾಯಾಲಯದಲ್ಲಿ ನ್ಯಾಯ ತೀರ್ಮಾನ ಮಾಡುವ ನ್ಯಾಯಾಧೀಶರು ಏನು ತಾನೇ ರೆಕಾರ್ಡ್ ಮಾಡಲು ಸಾಧ್ಯ? ...

news

ಅಮೆರಿಕಾದಲ್ಲಿ ಭಾರತೀಯನ ಕೊಲೆ: ನೆರವಿಗೆ ಧಾವಿಸಿದ ಸುಷ್ಮಾ ಸ್ವರಾಜ್

ನವದೆಹಲಿ: ಅಮೆರಿಕಾದ ವಾಷಿಂಗ್ಟನ್ ನಲ್ಲಿ ಭಾರತೀಯ ವ್ಯಕ್ತಿ ಕೊಲೆಗೀಡಾಗಿದ್ದು, ವಿದೇಶಾಂಗ ಸಚಿವೆ ಸುಷ್ಮಾ ...

news

ನಾಳೆ ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣಾ ಮತದಾನ

ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ನಾಳೆ ...

news

ಇಂದಿನಿಂದ ಲಾರಿ ಮುಷ್ಕರ ಮತ್ತಷ್ಟು ತೀವ್ರ

ವಿಮೆ ಕಂತಿನ ಪ್ರಮಾಣ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ...

Widgets Magazine Widgets Magazine