ಇಂದಿನಿಂದ ಲಾರಿ ಮುಷ್ಕರ ಮತ್ತಷ್ಟು ತೀವ್ರ

ಬೆಂಗಳೂರು, ಶನಿವಾರ, 8 ಏಪ್ರಿಲ್ 2017 (07:50 IST)

Widgets Magazine

ವಿಮೆ ಕಂತಿನ ಪ್ರಮಾಣ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ. ನಿನ್ನೆ ಲಾರಿ ಮಾಲೀಕರು ಮತ್ತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ನಡೆಸಿದ ಸಂಧಾನ ವಿಫಲಗೊಂಡಿದೆ. ಹೀಗಾಗಿ, ಮಧ್ಯರಾತ್ರಿಯಿಂದ ಲಾರಿ ಮಾಲೀಕರು ತಮ್ಮ ಪ್ರತಿಭಟನೆಯನ್ನ ದೇಶವ್ಯಾಪಿ ವಿಸ್ತರಿಸಿದ್ದಾರೆ. ಹೀಗಾಗಿ, ದೇಶಾದ್ಯಂತ ಸರಕು ಮತ್ತು ಸಾಗಣೆ, ದಿನನಿತ್ಯ ವಸ್ತುಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.


ವಿತ್ತ ಸಚಿವ ಅರುಣ್ ಜೇಟ್ಲಿ ಜೊತೆಯೂ ಲಾರಿ ಮಾಲೀಕರು ನಡೆಸಿದ ಸಂಧಾನ ಫಲಿಸಿಲ್ಲ. ಹಿಂದೆ ದಿನನಿತ್ಯ ಬಳಕೆ ವಸ್ತುಗಳ ಸರಬರಾಜಿಗೆ ವಿನಾಯ್ತಿ ನೀಡಿದ್ದ ಲಾರಿ ಮಾಲೀಕರು ಇವತ್ತು ಅದಕ್ಕೂ ಕಡಿವಾಣ ಹಾಕುವ ಸಾಧ್ಯತೆ ಇದೆ. ಇದರ ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಕಳೆದ ಕೆಲ ದಿನಗಳಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್`ಗಳಲ್ಲೇ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಎಕೆ ನಡೆಸಲಾಗಿತ್ತು. ಲಾರಿಗಳನ್ನೇ ನಂಬಿಕೊಂಡಿರುವ ಎಪಿಎಂಸಿ ಮಾರುಕಟ್ಟೆಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರು-ಮಂಗಳೂರು ನೇರ ರೈಲು ಹಗಲು ಸಂಚಾರಕ್ಕೆ ನಾಳೆ ಚಾಲನೆ

ಹಾಸನ-ಯಶವಂತಪುರ ರೈಲು ಸಂಚಾರ ಆರಂಭವಾದ ಬಳಿಕ ಬೆಂಗಳೂರು ಮತ್ತು ಮಂಗಳೂರು ನೇರ ರೈಲು ಸಂಚಾರದ ಭಾಗ್ಯ ಒದಗಿ ...

news

ಕೊನೆಗೂ ಕ್ಷಮೆ ಕೇಳಿದ ರವೀಂದ್ರ ಗಾಯಕ್ವಾಡ್ ಮೇಲಿನ ನಿಷೇಧ ತೆರವು

ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವಿಮಾನ ಯಾನ ಹಾರಾಟಕ್ಕೆ ನಿಷೇಧ ಪಡೆದಿದ್ದ ಶಿವಸೇನೆ ...

news

ಸ್ವೀಡನ್: ಜನರ ಮೇಲೆ ಟ್ರಕ್ ನುಗ್ಗಿಸಿ ಮೂವರ ಹತ್ಯೆಗೈದ ಭಯೋತ್ಪಾದಕ

ಸ್ಟಾಕ್‌ಹೋಮ್‌: ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನ ಜನನಿಬಿಡ ಪ್ರದೇಶವಾದ ಕ್ವೀನ್ ಸ್ಟ್ರೀಟ್‌ನಲ್ಲಿ ...

news

ಹಣ ಸಾಗಿಸುತ್ತಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾರು ಜಪ್ತಿ?

ನಂಜನಗೂಡು: ಉಪಚುನಾವಣೆಯಲ್ಲಿ ಹಣ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಮಾಜಿ ಸಚಿವ ರೇಣುಕಾಚಾರ್ಯ ...

Widgets Magazine Widgets Magazine