Widgets Magazine
Widgets Magazine

ಸಿಎಂ ಯೋಗಿ ಹೋದ ಮೇಲೆ ಯೋಧನ ಮನೆಯಿಂದ ಸೋಫಾವೂ ಹೋಯ್ತು!

Luknow, ಸೋಮವಾರ, 15 ಮೇ 2017 (09:30 IST)

Widgets Magazine

ಲಕ್ನೋ: ನಮ್ಮ ದೇಶದಲ್ಲಿ ಇದು ಹೊಸದಲ್ಲ. ವಿಐಪಿಗಳು ಬರುವಾಗ ಅವರ ಕಣ್ಣಿಗೆ ಮಣ್ಣೆರಚಲು ಅಧಿಕಾರಿಗಳು ರಸ್ತೆ ರಿಪೇರಿ ಮಾಡಿಸುವುದು, ಗುಡಿಸಲನ್ನು ಅರಮನೆಯಾಗಿ ಮಾಡುವುದೆಲ್ಲಾ ಮಾಮೂಲಿ. ಅಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


 
ಸಿಎಂ ಯೋಗಿ ಆದಿತ್ಯನಾಥ್ ಪಾಕ್ ಯೋಧರಿಂದ ಶಿರಚ್ಛೇದಕ್ಕೊಳಗಾದ ಪ್ರೇಮ್ ಸಾಗರ್ ಮನೆಗೆ ಭೇಟಿ ನೀಡುವವರಿದ್ದರು. ಅವರು ಬರುವ ಸುದ್ದಿ ತಿಳಿದ ಅಧಿಕಾರಿಗಳು ಯೋಧನ ಮನೆಗೆ ಸೋಫಾ, ಎಸಿ ವ್ಯವಸ್ಥೆ, ಟವೆಲ್, ಫ್ಯಾನ್ ಎಲ್ಲಾ ವ್ಯವಸ್ಥೆ ಮಾಡಿದ್ದರು.
 
ಸಿಎಂ ಹತ್ತು ನಿಮಿಷ ಕುಟುಂಬದವರೊಂದಿಗೆ ಕಳೆದು ಮರಳಿದ ಮೇಲೆ ಅಧಿಕಾರಿಗಳು ತಾವು ಫಿಟ್ ಮಾಡಿದ್ದ ವಸ್ತುಗಳನ್ನೆಲ್ಲಾ ಹೊತ್ತೊಯ್ದರು. ಈ ರೀತಿ ದೇಶಕ್ಕಾಗಿ ಪ್ರಾಣ ತೆತ್ತ ಯೋಧನ ಕುಟುಂಬಕ್ಕೆ ಅಕ್ಷರಶಃ ಅವಮಾನ ಮಾಡಲಾಗಿದೆ.
 
ಹುತಾತ್ಮ ಯೋಧನ ಶವ ಸಂಸ್ಕಾರಕ್ಕೆ ಮುಖ್ಯಮಂತ್ರಿಗಳು ಬರಲೇಬೇಕೆಂದು ಯೋಧನ ಕುಟುಂಬ ಹಠ ಹಿಡಿದಿತ್ತು. ಆದರೆ ಆಗ ಸಿಎಂ ಕುಟುಂಬದವರ ಜತೆ ದೂರವಾಣಿಯಲ್ಲಿ ಮಾತನಾಡಿ ಮುಂದೊಂದು ದಿನ ಖಂಡಿತಾ ನಿಮ್ಮನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

18 ವರ್ಷಗಳ ನಂತರ ಭಾರತ-ಪಾಕ್ ಜಟಾಪಟಿ

ನವದೆಹಲಿ: 18 ವರ್ಷಗಳ ನಂತರ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾದಾಡಲಿವೆ. ಭಾರತೀಯ ...

news

ಕುಪ್ವಾರದಲ್ಲಿ ದಾಳಿ ನಡೆಸಿದ್ದ ಉಗ್ರರನ್ನ ಕೊಂದು ಸೇಡು ತೀರಿಸಿಕೊಂಡ ಭಾರತೀಯಸೇನೆ

ಜಮ್ಮು ಮತ್ತು ಕಾಶ್ಮೀರದ ಹಂದ್ವಾರದ ವರಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಲಷ್ಕರ್ ಇ ತೊಯಿಬಾ ...

news

ಮಲತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ: ಮಗಳು ಗರ್ಭಿಣಿಯಾದಾಗ ಸತ್ಯ ಬಯಲು

ಹರ್ಯಾಣದಲ್ಲಿ 23 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿ ಮರ್ಮಾಂಗ ಛಿದ್ರಗೊಳಿಸಿದ ಆಘಾತಕಾರಿ ಸುದ್ದಿ ...

news

ರಾಷ್ಟ್ರಪತಿ ಚುನಾವಣೆ ನಂತರ ರಾಜೀನಾಮೆ ನೀಡಲಿರುವ ಗೋವಾ, ಯುಪಿ ಸಿಎಂ!

ನವದೆಹಲಿ: ರಾಷ್ಟ್ರಪತಿ ಚುನಾವಣೆ ನಂತರ ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ...

Widgets Magazine Widgets Magazine Widgets Magazine