ರಷ್ಯಾ ಯುವತಿಯ ಮೇಲೆ ಅತ್ಯಾಚಾರ: ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಮಥುರಾ, ಶನಿವಾರ, 4 ನವೆಂಬರ್ 2017 (17:54 IST)

Widgets Magazine

ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಾಗಿನಿಂದಲೂ ರಾಷ್ಟ್ರೀಕೃತ ಬ್ಯಾಂಕ್‌ನ ಮ್ಯಾನೇಜರ್ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ರಷ್ಯಾದ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.
ರಷ್ಯಾದ 20 ವರ್ಷದ ಯುವತಿ, ಪೊಲೀಸರಿಗೆ ದೂರು ನೀಡಿದ್ದು, ಫೇಸ್‌ಬುಕ್ ಫ್ರೆಂಡ್‌ ಆಗಿದ್ದ ಮ್ಯಾನೇಜರ್ ಗೆಳೆತನವನ್ನು ದುರುಪಯೋಗಪಡಿಸಿಕೊಂಡು ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿಸಿದ್ದಾಳೆ. 
 
ಶಾಖೆಯ ಯುಕೋ ಬ್ಯಾಂಕ್‌ ಮ್ಯಾನೇಜರ್ ಮಹೇಂದ್ರ ಪ್ರಸಾದ್ ಸಿಂಗ್‌ನನ್ನು ಯುವತಿಯ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಶಂಕರ್ ಮಿಶ್ರಾ ತಿಳಿಸಿದ್ದಾರೆ.  
 
ಆರೋಪಿ ಮಹೇಂದ್ರ ಪ್ರಸಾದ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಹಲವಾರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಆತನನ್ನು ನಾನು ವೃಂದಾವನದಲ್ಲಿ ಭೇಟಿಯಾಗಿದ್ದೆ. ಯಾರಿಗಾದರೂ ಮಾಹಿತಿ ನೀಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾಳೆ.
 
ಕಳೆದ 2016ರಲ್ಲಿ ರಷ್ಯಾದ ಯುವತಿ ಮತ್ತು ಬ್ಯಾಂಕ್ ಮ್ಯಾನೇಜರ್ ಫೇಸ್‌ಬುಕ್ ಗೆಳೆಯರಾಗಿದ್ದರು. ಆದನ ಆಹ್ವಾನದ ಮೇರೆಗೆ ಸೆಪ್ಟೆಂಬರ್ 17 ರಂದು ಯುವತಿ ಭಾರತಕ್ಕೆ ಬಂದು. ದೇವಾಲಯಗಳ ನಗರವಾದ ವೃಂದಾವನದಲ್ಲಿ ವಾಸ್ತವ್ಯ ಹೂಡಿದ್ದಳು.
 
ಸೆಪ್ಟೆಂಬರ್ 22 ರಂದು ನನ್ನನ್ನು ಯಾವುದೋ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ. ನಂತರ ಇದೇ ಮುಂದುವರಿದಿದೆ. ಮತ್ತೊಬ್ಬ ರಷ್ಯಾದ ಮಹಿಳೆಯೊಬ್ಬಳ ಸಲಹೆ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾಳೆ. 
 
ಏತನ್ಮಧ್ಯೆ, ಕಳೆದ ಒಂದು ವರ್ಷದಿಂದ ರಷ್ಯಾದ ಯುವತಿಯೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ. ಆಕೆ ನನಗೆ ಹಣ ಕೇಳಿದ್ದಾಳೆ. ಹಣ ನೀಡದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಆರೋಪಿ ಮಹೇಂದ್ರ ಪ್ರಸಾದ್ ಉಲ್ಟಾ ಹೊಡೆದಿದ್ದಾನೆ. 
 
ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಸೆಮಣೆ ಏರಬೇಕಿದ್ದ ಜೋಡಿ ಮಸಣ ಸೇರಿತು…

ಬೀದರ್: ಕಾರು ಪಲ್ಟಿಯಾದ ಪರಿಣಾಮ ಹಸೆಮಣೆ ಏರಬೇಕಿದ್ದ ಜೋಡಿ ಸೇರಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ...

news

ಯುವತಿಯರ ಮೇಲೆ ಆ್ಯಸಿಡ್ ಎರಚುವವರು ಅಲ್ಲಾವುದ್ದೀನ್ ಖಿಲ್ಜಿಯಂತವರು: ಉಮಾಭಾರತಿ

ಜೈಪುರ್: ಯುವತಿಯರ ಮೇಲೆ ಆ್ಯಸಿಡ್ ಎರಚುವವರು ಅಲ್ಲಾವುದ್ದೀನ್ ಖಿಲ್ಜಿ ವಂಶಸ್ಥರು ಎಂದು ಕೇಂದ್ರ ಸಚಿವೆ ...

news

224 ಕ್ಷೇತ್ರದ ಪೈಕಿ ಟಿಕೆಟ್ ಗಾಗಿ ಅರ್ಜಿ ಹಾಕಿದ್ದು 10 ಮಹಿಳೆಯರು ಮಾತ್ರ..!

ಬೆಂಗಳೂರು: ಮಹಿಳೆಯರಿಗೆ ಟಿಕೆಟ್ ನೀಡಲು ಪಕ್ಷ ಸಿದ್ಧವಿದೆ. ಆದರೆ ನೀವು ಅರ್ಜಿ ಹಾಕಿ ಟಿಕೆಟ್ ಕೇಳುವ ಧೈರ್ಯ ...

news

ಪಿಎಫ್ಐ ಮಾತ್ರವಲ್ಲ ಆರೆಸ್ಸೆಸ್ ಸಹ ಬ್ಯಾನ್ ಆಗಬೇಕು: ದಿನೇಶ್ ಗುಂಡೂರಾವ್

ಬೆಂಗಳೂರು: ಪಿಎಫ್ಐ ಸಂಘಟನೆ ಬ್ಯಾನ್ ಮಾಡಬೇಕು ಎಂದು ಟ್ವೀಟ್ ಮಾಡಿದ್ದ ತಮ್ಮ ನಡೆಯನ್ನ ಕೆಪಿಸಿಸಿ ...

Widgets Magazine