Widgets Magazine
Widgets Magazine

ವಿದ್ಯಾರ್ಥಿನಿಯೊಂದಿಗೆ ಗೆಳೆತನ ಬೆಳೆಸಿ ರೇಪ್‌ ಮಾಡಲು ಸ್ನೇಹಿತರನ್ನು ಕರೆದ ಕಾಮುಕ

ಶಿಮ್ಲಾ, ಭಾನುವಾರ, 16 ಜುಲೈ 2017 (13:55 IST)

Widgets Magazine

ಶಾಲಾ ವಿದ್ಯಾರ್ಥಿನಿಯೊಂದಿಗೆ ಗೆಳೆತನ ಬೆಳೆಸಿದ ಪರಿಚಿತ ಕಾಮುಕನೊಬ್ಬ ತನ್ನ ಐವರು ಸ್ನೇಹಿತರೊಂದಿಗೆ ಆಕೆಯ ಮೇಲೆ ಗ್ಯಾಂಗ್ ರೇಪ್ ಎಸಗಿ ಭೀಕರವಾಗಿ ಹತ್ಯೆಗೈದು ಪರಾರಿಯಾದ ಘಟನೆ ವರದಿಯಾಗಿದೆ. 
 
15 ವರ್ಷದ ಶಾಲಾ ಬಾಲಕಿಯ ಶವ ದೊರೆಯುತ್ತಿದ್ದಂತೆ ಆಕ್ರೋಶಗೊಂಡ ಸಾರ್ವಜನಿಕರು ಬಾಲಕಿಗೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ನಗರದಲ್ಲಿ ಕೋಲಾಹಲ ಸೃಷ್ಟಿಸಿದ್ದರು.  
 
ಬಾಲಕಿಯ ಕುಟುಂಬಕ್ಕೆ ಆತ್ಮಿಯನಾಗಿದ್ದ ಮುಖ್ಯ ಆರೋಪಿ ರಾಜೀಂದರ್ ಸಿಂಗ್, ಬಾಲಕಿಯನ್ನು ಫುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ನಂತರ ತನ್ನ ಐವರು ಗೆಳೆಯರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಎಲ್ಲರು ಸೇರಿ ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಬಾಲಕಿ ಯಾರಿಗಾದರೂ ಮಾಹಿತಿ ನೀಡಬಹುದು ಎನ್ನುವ ಆತಂಕದಿಂದ ಆರೋಪಿಗಳು ಆಕೆಯನ್ನು ಹತ್ಯೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ. ಶಾಲೆಯಿಂದ ಬಾಲಕಿ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಘಟನೆಯಾದ ಎರಡು ದಿನಗಳ ನಂತರ ಹಲಿಯಾಲಾ ಅರಣ್ಯ ಪ್ರದೇಶದಲ್ಲಿ ನಗ್ನಳಾಗಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದೆ.
 
ಒಂದು ವಾರದ ನಂತರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ  ಇಬ್ಬರು ಆರೋಪಿಗಳು ನೇಪಾಳಿಗರಾಗಿದ್ದು, ಮತ್ತಿಬ್ಬರು ಆರೋಪಿಗಳು ಉತ್ತರಾಖಂಡ್ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಐತಿಹಾಸಿಕ ಕೆಂಪುಕೋಟೆ ಸ್ಫೋಟಿಸುವ ಬೆದರಿಕೆಯೊಡ್ಡಿದ್ದ ಆರೋಪಿ ಅರೆಸ್ಟ್

ನವದೆಹಲಿ: ಐತಿಹಾಸಿಕ ಕೆಂಪುಕೋಟೆಯನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಪೊಲೀಸರು ...

news

ಅಮರನಾಥ ಯಾತ್ರಿಕರ ಮೇಲೆ ಉಗ್ರರ ದಾಳಿ: ಗಾಯಾಳು ಮಹಿಳೆ ಸಾವು

ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯಾತ್ರಾರ್ಥಿ ...

news

ಡಿಐಜಿ ರೂಪಾ ಪರವಾಗಿದ್ದ 40 ಕೈದಿಗಳು ಬಳ್ಳಾರಿಗೆ ಶಿಪ್ಟ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆಯಲು ಎಐಎಡಿಎಂಕೆ ನಾಯಕಿ ಶಶಿಕಲಾ 2 ಕೋಟಿ ...

news

ರಾಷ್ಟ್ರಧ್ವಜ ಹಾರಾಟ ಮಾಡುವ ಕಂಬದಲ್ಲಿ ಬಿಜೆಪಿ ಬಾವುಟ?

ವಿಜಯಪುರ: ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಾಟ ಮಾಡುವ ಕಂಬದಲ್ಲಿ ಬಿಜೆಪಿ ಪಕ್ಷದ ಬಾವುಟ ಹಾರಿಸಿರುವುದು ...

Widgets Magazine Widgets Magazine Widgets Magazine