‘ರಾಷ್ಟ್ರಗೀತೆ ಹಾಡಲಾಗದಿದ್ದರೆ, ಪಾಕಿಸ್ತಾನಕ್ಕೆ ಹೋಗಿ’

ನವದೆಹಲಿ, ಬುಧವಾರ, 1 ನವೆಂಬರ್ 2017 (10:29 IST)

ನವದೆಹಲಿ: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಬೇಕೋ ಬೇಡವೋ ಎಂಬ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಜೈಪುರ ಮಹಾನಗರ ಪಾಲಿಕೆ ಮೇಯರ್ ತಮ್ಮ ಅಧಿಕಾರಿಗಳಿಗೆ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದಾರೆ.


 
ರಾಷ್ಟ್ರಗೀತೆ ಹಾಡಲು ಆಗದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಮೇಯರ್ ಅಶೋಕ್ ಲೆಹೋಟಿ ಖಡಕ್ ಆದೇಶ ನೀಡಿದ್ದಾರೆ. ಅದರಂತೆ ಕಚೇರಿಯಲ್ಲಿ ಪ್ರತಿ ದಿನ 9.50 ಕ್ಕೆ ರಾಷ್ಟ್ರಗೀತೆ ಮತ್ತು ಸಂಜೆ 5.55 ಕ್ಕೆ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿದ್ದಾರೆ.
 
ಆದರೆ ಪಾಕಿಸ್ತಾನಕ್ಕೆ ಹೋಗಿ ಎಂದು ನೇರವಾಗಿ ನಾನು ಹೇಳಿಲ್ಲ ಎಂದು ಮೇಯರ್ ಹೇಳಿದ್ದಾರೆ. ಯಾರೋ ಒಬ್ಬರು ತಮಾಷೆಗೆ ಆದೇಶ ಪಾಲಿಸದಿದ್ದರೆ ಏನು ಮಾಡುತ್ತೀರಿ ಎಂದು ಕೇಳಿದಾಗ ಇದು ಪಾಕಿಸ್ತಾನವಲ್ಲ ಎಂದಿದ್ದೇನಷ್ಟೇ ಎಂದಿದ್ದಾರೆ. ಈ ರೀತಿ ರಾಷ್ಟ್ರಗೀತೆ ಹಾಡುವುದರಿಂದ ಶಿಸ್ತು ಬೆಳೆಯುತ್ತದೆ ಎಂಬುದು ಮೇಯರ್ ಉದ್ದೇಶವಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ರಾಹುಲ್ ಗಾಂಧಿ ಏನು ಮಾತಾಡ್ತಿದ್ದಾರೆ ಎಂದು ಕಾಂಗ್ರೆಸ್ ನವರಿಗೇ ಅರ್ಥವಾಗುತ್ತಿಲ್ಲ’

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ನಿತಿನ್ ...

news

ಕನ್ನಡ ರಾಜ್ಯೋತ್ಸವ: ಸಿಎಂ ಸಿದ್ದರಾಮಯ್ಯರಿಂದ ಧ್ವಜಾರೋಹಣ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಕಂಠೀರವ ಸ್ಟೇಡಿಯಂನಲ್ಲಿ ...

news

ಪ್ರೇಯಸಿಗಾಗಿ ವಿಮಾನದಲ್ಲಿ ಬಾಂಬ್ ಬೆದರಿಕೆ ಹಾಕಿದ ಭೂಪ!

ನವದೆಹಲಿ: ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲೆ ಎಂದು ಕೆಲವರು ಡೈಲಾಗ್ ಬಿಡುತ್ತಾರೆ. ಆದರೆ ಈ ಭೂಪ ...

news

ಕನ್ನಡದಲ್ಲೇ ಟ್ವೀಟ್ ಮಾಡಿ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ರಾಜ್ಯದ ...

Widgets Magazine
Widgets Magazine