ಮೇವು ಹಗರಣ; ಇಂದು ಮಧ್ಯಾಹ್ನ 3ಕ್ಕೆ ಹೊರಬರಲಿದೆ ಮಹತ್ತರ ತೀರ್ಪು

ರಾಂಚಿ, ಶನಿವಾರ, 23 ಡಿಸೆಂಬರ್ 2017 (12:52 IST)

ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಎದುರಿಸುತ್ತಿರುವ ಮೇವು ಹಗರಣದ  ಆರು ಪ್ರಕರಣಗಳಲ್ಲಿ ಒಂದು ಪ್ರಕರಣದ ತೀರ್ಪನ್ನು ಇಂದು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ. ಇಂದು ಮಧ್ಯಾಹ್ನ 3 ಗಂಟೆಗೆ ರಾಂಚಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಶಿವಪಾಲ್ ಸಿಂಗ್ ಅವರಿಂದ ಈ ತೀರ್ಪು ಪ್ರಕಟವಾಗಲಿದೆ.


1994 ಮತ್ತು 1996 ರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ , ಜಗನ್ನಾಥ್  ಮಿಶ್ರಾ ಸೇರಿದಂತೆ 34 ಮಂದಿ ಮೇವು ಖರೀದಿಗೆ ಮೀಸಲಿರಿಸಿದ್ದ ಹಣದಲ್ಲಿ 89.27ಕೋಟಿ ರೂ.ಗಳನ್ನು ದೇವಗಢ ಖಜಾನೆಯಿಂದ ಅಕ್ರಮವಾಗಿ ಪಡೆದ ಆರೋಪವನ್ನು ಎದುರಿಸುತ್ತಿದ್ದು, ಒಂದು ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರೇ ದೋಷಿಯೆಂದು 2013ರಲ್ಲಿ ತೀರ್ಪು ಹೊರಬಿದ್ದಿತ್ತು. ಅದರ ಪ್ರಕಾರ ಅವರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗು 25 ಲಕ್ಷ ದಂಡ ವಿಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ ನೀಡಿದ ಜಾಮೀನಿನ ಮೇಲೆ ಅವರು ಹೊರಬಂದಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಲಾಲಿ ಪ್ರಸಾದ್ ಯಾದವ್ ಜಗನ್ನಾಥ್ ಮಿಶ್ರಾ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆ ಜಾಮೀನು Jail Punishment Bail Supreem Court Jagnath Mishra Lalu Prasad Yadav

ಸುದ್ದಿಗಳು

news

ಸಿನೆಮಾ ನಟಿ ನಯನತಾರಾಳಂತೆ ನಟಿಸಿ ಅಪರಾಧಿಯನ್ನು ಸೆರೆಹಿಡಿದ ಪೊಲೀಸ್ ಅಧಿಕಾರಿ

ಪಾಟ್ನಾ: ಬಿಜೆಪಿ ಸಚಿವರೊಬ್ಬರ ಕದ್ದ ಮೊಬೈಲ್ ಬಳಸುತ್ತಿದ್ದ ಕುಖ್ಯಾತ ಅಪರಾಧಿಯನ್ನು ಸೆರೆಹಿಡಿಯಲು ಮಹಿಳಾ ...

news

ಮಮತಾ ಬ್ಯಾನರ್ಜಿ ಗರಂ ಆಗಿದ್ದು ಯಾಕೆ ಗೊತ್ತಾ?

ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಮೆರವಣಿಗೆಗಳನ್ನು ಮಾಡುವುದರ ಜೊತೆಗೆ ...

news

ಪ್ರಥಮ ದರ್ಜೆ ಸಹಾಯಕಿಯನ್ನು ಹಾಸಿಗೆಗೆ ಕರೆದ ಮುಖ್ಯಶಿಕ್ಷಕ

ಪ್ರಥಮ ದರ್ಜೆ ಸಹಾಯಕಿಯನ್ನು ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪೋಲಿ ಮಾತುಗಳ ಮೂಲಕ ಲೈಂಗಿಕ ಕಿರುಕುಳ ನೀಡಿ ...

news

‘ಕಾಂಗ್ರೆಸ್ ನವರು ಹೇಳಿದ್ದಕ್ಕೇ ಗೋವಾ ಸಿಎಂ ಜತೆ ಮಾತುಕತೆ ನಡೆಸಿದ್ದೆ’

ಬೆಂಗಳೂರು: ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಜತೆ ಮಾತುಕತೆ ...

Widgets Magazine