ರಮಾನಾಥ್ ರೈ ಕೆಲ ಗುಂಪುಗಳ ಸಚಿವನಂತೆ ವರ್ತನೆ: ಸುರೇಶ್ ಕುಮಾರ್

ಬೆಂಗಳೂರು, ಬುಧವಾರ, 19 ಜುಲೈ 2017 (13:46 IST)

ಸಚಿವ ರಮಾನಾಥ್ ರೈ ಕರಾವಳಿ ಪ್ರದೇಶದ ಕೆಲ ಗುಂಪುಗಳ ಸಚಿವನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಆರೋಪಿಸಿದ್ದಾರೆ.
 
ಕರಾವಳಿ ಪ್ರದೇಶದ ಕೋಮುಗಲಭೆಗಳಿಗೆ ಕಾಂಗ್ರೆಸ್ ಸರಕಾರವೇ ನೇರ ಹೊಣೆಯಾಗಿದೆ. ಒಂದು ಸಮುದಾಯವನ್ನು ಓಲೈಸುವ ಪ್ರಯತ್ನ ಮಾಡುತ್ತಿದೆ. ದುಷ್ಟಶಕ್ತಿಗಳು ಹಿಂದುಗಳ ಮೇಲೆ ಹಲ್ಲೆ ಮಾಡುತ್ತಿದ್ದರೂ ಸರಕಾರ ಮೌನವಾಗಿದೆ ಎಂದು ಟೀಕಿಸಿದರು.
 
ಹಿಂದು ಮುಖಂಡರ ಹತ್ಯೆಗಳ ಹಿಂದಿನ ಕೊಲೆಗಡುಕರನ್ನು ಸರಕಾರ ಬಂಧಿಸಿಲ್ಲ. ಕೆಟ್ಟವರನ್ನು ರಕ್ಷಿಸಿ ಒಳ್ಳೆಯವರನ್ನು ಶಿಕ್ಷಿಸುವುದೇ ಸರಕಾರದ ಮೂಲಮಂತ್ರವಾಗಿದೆ ಎಂದು ಆರೋಪಿಸಿದರು.
 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವ್ಯವಹಾರ ನಡೆಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಸರಕಾರ, ಸತ್ಯಸಂಗತಿಯನ್ನು ವರದಿ ಮಾಡಿದ ಡಿಐಜಿ ರೂಪಾ ಅವರನ್ನು ವರ್ಗಾವಣೆಗೊಳಿಸಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಾಂಗ್ರೆಸ್ ಸರಕಾರದ ವಿರುದ್ಧ ಗುಡುಗಿದ್ದಾರೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ರಮಾನಾಥ್ ರೈ ಸುರೇಶ್ ಕುಮಾರ್ ಸಿಎಂ ಸಿದ್ದರಾಮಯ್ಯ Ramnath Rai Suresh Kumar Cm Siddaramaiah

ಸುದ್ದಿಗಳು

news

ಡಿಐಜಿ ರೂಪಾ ವರ್ಗಾವಣೆ ವಿರೋಧಿಸಿ ಬಿಎಸ್‌ವೈ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಐಪಿಗಳಿಗೆ ಕಾನೂನುಬಾಹಿರವಾಗಿ ರಾಜಾತಿಥ್ಯ ನೀಡಲಾಗುತ್ತಿದೆ ...

news

‘ಶೋಭಾ ವಿಚಾರವನ್ನು ನೋಡುವುದನ್ನೇ ಬಿಟ್ಟಿದ್ದೇನೆ’

ಬೆಂಗಳೂರು: ಕೋಮುಗಲಭೆಯಿಂದ ಸಾವನ್ನಪ್ಪಿದ ಹಿಂದೂ ಕಾರ್ಯಕರ್ತರ ಹೆಸರನ್ನು ಕೇಂದ್ರ ಗೃಹ ಖಾತೆಗೆ ಕಳುಹಿಸುವಾಗ ...

news

ಶೋಭಾ ಕರಂದ್ಲಾಜೆ ಬೇಜವಾಬ್ದಾರಿ ರಾಜಕಾರಣಿ: ವಿ.ಎಸ್.ಉಗ್ರಪ್ಪ

ಬೆಂಗಳೂರು: ರಾಜ್ಯದಲ್ಲಿನ ಕೋಮುಘರ್ಷಣೆಯ ವೇಳೆ ಬಲಿಯಾದವರ ಪಟ್ಟಿಯಲ್ಲಿ ಬದುಕಿದ್ದವರನ್ನು ಸೇರಿಸಿರುವ ಸಂಸದೆ ...

news

ಕೇಂದ್ರ ಸರ್ಕಾರಕ್ಕೆ ಸುಳ್ಳು ವರದಿ ಕೊಟ್ಟರಾ ಶೋಭಾ ಕರಂದ್ಲಾಜೆ..?

ಕೋಮು ಗಲಭೆಯಲ್ಲಿ ಹತ್ಯೆಗೀಡಾದವರ ಪಟ್ಟಿಯನ್ನ ಕೇಂದ್ರ ಸರ್ಕಾರಕ್ಕೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ಬೇರೆ ...

Widgets Magazine