ನಿರಾಶ್ರಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ

ನವದೆಹಲಿ, ಸೋಮವಾರ, 10 ಜುಲೈ 2017 (15:46 IST)

ನಗರದ ಕನ್ನಾಟ್ ಪ್ರದೇಶದಲ್ಲಿ ತನ್ನ ಪೋಷಕರೊಂದಿಗೆ ಮಲಗಿದ್ದ 8 ವರ್ಷ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಕಸಗುಡಿಸುವ ಕಾರ್ಮಿಕನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಜುಲೈ 8 ರಂದು ಮಧ್ಯರಾತ್ರಿ ಸಮಯದಲ್ಲಿ ಆರೋಪಿ ಬಾಲಕಿಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿ ಅದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಬಾಲಕಿಗೆ ಪರಿಚಿತನಾಗಿದ್ದನು. ರಾತ್ರಿ ಸಮಯದಲ್ಲಿ ಪೋಷಕರೊಂದಿಗೆ ಮಲಗಿದ್ದ ಬಾಲಕಿಯನ್ನು ಎಬ್ಬಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ನಂತರ ಆಕೆಯನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾನೆ.
 
ಬಾಲಕಿ ತನ್ನ ಪೋಷಕರ ಬಳಿ ತೆರಳಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಪೋಷಕರು ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅಪ್ರಾಪ್ತ ಬಾಲಕಿ ನಿರಾಶ್ರಿತ ಬಾಲಕಿ ರೇಪ್ Minor Rape Sweeper Homeless Girl

ಸುದ್ದಿಗಳು

news

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಬಸವರಾಜ್ ಪಾಟೀಲ್ ಸೇಡಂ?

ಬೆಂಗಳೂರು: ಬಿಜೆಪಿ ರಾಜ್ಯಸಭೆ ಸದಸ್ಯರಾಗಿರುವ ಬಸವರಾಜ್ ಪಾಟೀಲ್ ಸೇಡಂ ಎನ್‌ಡಿಎ ಉಪರಾಷ್ಟ್ರಪತಿ ...

news

ಬಿಜೆಪಿ ಸುಮ್ಮನಿದ್ರೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ: ಜಿ.ಪರಮೇಶ್ವರ್

ಬೆಂಗಳೂರು: ಬಿಜೆಪಿ ಮತ್ತವರ ಸಂಘಟನೆಗಳು ಸುಮ್ಮನಿದ್ರೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ ಎಂದು ಕೆಪಿಸಿಸಿ ...

news

ಸಿಎಂ ರಾಜೀನಾಮೆ ನೀಡಿದ್ರೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತೆ: ಈಶ್ವರಪ್ಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ ರಾಜ್ಯದಲ್ಲಿ ಶಾಂತಿ ...

news

ಕೋಪದ ಆವೇಶದಲ್ಲಿ ಮಗಳನ್ನು ಕತ್ತುಹಿಸುಕಿ ಕೊಂದ ಅಪ್ಪ

ಕೋಪದ ಆವೇಶದಲ್ಲಿ ವ್ಯಕ್ತಿಯೊಬ್ಬ ತನ್ನ 16ರ ವರ್ಷದ ಮಗಳನ್ನು ಹಾಗೂ ಆಕೆಯ ಪ್ರಿಯಕರನನ್ನು ಬರ್ಬರವಾಗಿ ...

Widgets Magazine