ಹೆರಿಗೆ ವೇಳೆ ಪುರುಷ ನರ್ಸ್ ನಿಂದ ಎಡವಟ್ಟು; ಎರಡು ತುಂಡಾದ ಮಗು, ತಾಯಿ ಸ್ಥಿತಿ ಗಂಭೀರ

ಜೈಪುರ, ಶನಿವಾರ, 12 ಜನವರಿ 2019 (06:41 IST)

: ಹೆರಿಗೆ ಮಾಡಿಸುತ್ತಿದ್ದ ಸಮಯದಲ್ಲಿ ಪುರುಷ ನರ್ಸ್ ಮಾಡಿದ ಎಡವಟ್ಟಿನಿಂದ ಮಗು ಎರಡು ತುಂಡಾಗಿದ್ದು, ಪರಿಣಾಮ ತಾಯಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ರಾಜಸ್ಥಾನದ ಜಿಲ್ಲೆಯಲ್ಲಿ ನಡೆದಿದೆ.


ಗರ್ಭಿಣಿಯೊಬ್ಬಳು ಹೆರಿಗೆಗಾಗಿ ರಾಮಗಢ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ವೇಳೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಪುರುಷ ನರ್ಸ್ ಮಗುವನ್ನು ಜೋರಾಗಿ ಎಳೆದಿದ್ದಾನೆ. ಪರಿಣಾಮ ಮಗು ಎರಡು ತುಂಡಾಗಿ ಕಾಲು ಮಾತ್ರ ಹೊರಬಂದಿದ್ದು, ತಲೆ ಹೊಟ್ಟೆಯಲ್ಲಿ ಉಳಿದುಕೊಂಡಿದೆ.


ಆಗ ಈ ವಿಚಾರವನ್ನು ಆಕೆಯ ಮನೆಯವರಿಗೆ ತಿಳಿಸದೆ ಆತನ ಸಹೋದ್ಯೋಗಿಗಳು ಮಗುವಿನ ಅರ್ಧ ಭಾಗವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟು, ಹೆಚ್ಚಿನ ಚಿಕಿತ್ಸೆಗಾಗಿ ತಾಯಿಯನ್ನು ಬೇರೆ ಆಸ್ಪತ್ರೆಗೆ ಶಿಪ್ಟ್ ಮಾಡಿದ್ದಾರೆ. ಅಲ್ಲಿ ವೈದ್ಯರ ತಂಡ ಮಹಿಳೆಗೆ ಚಿಕಿತ್ಸೆ ನೀಡಿ ಮಗುವಿನ ತಲೆಯನ್ನು ಹೊರ ತೆಗೆದಿದ್ದು, ಈ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾರೆ.


ಸದ್ಯಕ್ಕೆ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಈ ಘಟನೆಗೆ ಸಂಬಂಧಿಸಿದಂತೆ  ಮಹಿಳೆಯ ಪತಿ ರಾಮಗಢ ಆಸ್ಪತ್ರೆಗೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗ್ಯಾಸ್ ಲೈನ್ ಲೀಕೇಜ್ ಆಗಿದ್ದೆಲ್ಲಿ ಗೊತ್ತಾ?

ಮತ್ತೊಂದು ಗ್ಯಾಸ್ ಲೈನ್ ಲೀಕೇಜ್ ಆಗಿರುವ ಘಟನೆ ನಡೆದಿದ್ದು, ಸುತ್ತಲಿನ ಜನರಲ್ಲಿ ಕೆಲಕಾಲ ಆತಂಕ ...

news

ಡಿವೈಡರ್​ಗೆ ಕಾರು ಢಿಕ್ಕಿ: ತಂದೆ, ಮಗ ಸ್ಥಳದಲ್ಲೇ ಸಾವು

ಡಿವೈಡರ್​ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಂದೆ, ಮಗನ ಸಾವ್ನಪ್ಪಿರುವ ಘಟನೆ ಸಂಭವಿಸಿದೆ.

news

ಸಂಪುಟ ಉಪಸಮಿತಿ ನಡೆಗೆ ಸಚಿವ ಅಸಮಧಾನ!

ಸಚಿವ ಸಂಪುಟ ಉಪ ಸಮಿತಿಯ ನಡೆಗೆ ಸಚಿವರೊಬ್ಬರು ಅಸಮಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

news

ಗಡಿನಾಡಿಗೆ ಕ್ರಿಕೆಟರ್ಸ್ ಭೇಟಿ

ಗಡಿನಾಡಿಗೆ ಕ್ರಿಕೆಟರ್ಸ್ ಭೇಟಿ ನೀಡಿದರು. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರನ್ನು ಕಂಡು ...