ಗೋ ರಕ್ಷಕರ ಹೆಸರಲ್ಲಿ ಗೂಂಡಾಗಿರಿ: ಕೇಂದ್ರದ ಪರೋಕ್ಷ ಬೆಂಬಲ: ಖರ್ಗೆ ವಾಗ್ದಾಳಿ

ನವದೆಹಲಿ, ಸೋಮವಾರ, 31 ಜುಲೈ 2017 (15:05 IST)

Widgets Magazine

ನವದೆಹಲಿ: ಗೋ ರಕ್ಷಕರ ಹೆಸರಲ್ಲಿ  ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ದೇಶದಲ್ಲಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
 
ಲೋಕಸಭೆ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋರಕ್ಷಣೆ ಹೆಸರಲ್ಲಿ ದೇಶದಲ್ಲಿ ಗೂಂಡಾಗಿರಿ ನಡೆಸಲಾಗುತ್ತಿದ್ದು, ಆಡಳಿತಾರೂಢ ಎನ್ ಡಿಎ ಸರ್ಕಾರ ಪರೋಕ್ಷವಾಗಿ ಬಲಪಂಥೀಯ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ ಕಳೆದ ಮೂರು ವರ್ಷಗಳಲ್ಲಿ ನಡೆದ ಸರಣಿ ದಾಳಿ ಕುರಿತ ಪಟ್ಟಿಯನ್ನು ಕಲಾಪದಲ್ಲಿ ಓದಿದರು.
 
ಇಂದು ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲೆ ದಾಳಿ ನಡೆಸಲಾಗುತ್ತಿದೆ. ಹಿಂದುಗಳೇ ಹಿಂದುವನ್ನು ಕೊಲ್ಲುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರೇ ಮುಸ್ಲಿಮರನ್ನು ಹತ್ಯೆಗೈಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಬಿಜೆಪಿ ತಮ್ಮ ಸಿದ್ದಾಂತವನ್ನು ಹೇರಲು ಯತ್ನಿಸುತ್ತಿದೆ. ಇದರಿಂದಾಗಿ ಇಂಥಹ ಘಟನೆಗಳು ಹೆಚ್ಚುತ್ತಿವೆ. ಈ ಘಟನೆಗಳ ಹಿಂದೆ ವಿಎಚ್ ಪಿ, ಬಜರಂಗದಳ ಕಾರ್ಯಕರ್ತರೇ ಇದ್ದಾರೆ ಎಂದು ಆರೋಪಿಸಿದರು.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗೋರಕ್ಷಣೆ ಬಿಜೆಪಿ ಗೂಂಡಾಗಿರಿ ಮಲ್ಲಿಕಾರ್ಜುನ ಖರ್ಗೆ Lok-sabha Mallikarjun Kharge Accuses Centre

Widgets Magazine

ಸುದ್ದಿಗಳು

news

ತಾಳಿ ಕಿತ್ತು ವರನ ಕೈಗಿಟ್ಟು ಬಾಯ್`ಫ್ರೆಂಡ್ ಜೊತೆ ವಧು ಎಸ್ಕೇಪ್..!

ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಧು ತಾಳಿ ಕಿತ್ತು ವರನ ಕೈಯಲ್ಲಿಟ್ಟು ಲವರ್ ಜೊತೆ ಹೋಗಿರುವ ಘಟನೆ ಕೇರಳದ ...

news

ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ: ಮಠಾಧೀಶರಿಗೆ ಶೆಟ್ಟರ ಸಲಹೆ

ಹುಬ್ಬಳ್ಳಿ: ಲಿಂಗಾಯುತ ಪ್ರತ್ಯೇಕ ಧರ್ಮ ಕುರಿತಂತೆ ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ ಎಂದು ...

news

ವೀರಶೈವ ಲಿಂಗಾಯುತ ಪ್ರತ್ಯೇಕ ಧರ್ಮ ಬೇಡ: ಸಚಿವ ಪಾಟೀಲ್

ಬೆಂಗಳೂರು: ವೀರಶೈವ ಲಿಂಗಾಯುತ ಪ್ರತ್ಯೇಕ ಧರ್ಮ ಬೇಡ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ...

news

ವಿಮಾನ ಹತ್ತಿದ್ದು 191 ಮಂದಿ ಇಳಿದಾಗ 192 ಪ್ರಯಾಣಿಕರಿದ್ದರು..!

ಕೊಲಂಬಿಯಾ ರಾಜಧಾನಿ ಬೊಗೋಟಾದಿಂದ ಹೊರಟ ವಿಮಾನದಲ್ಲಿ 191 ಮಂದಿ ಪ್ರಯಾಣಿಕರು ಹತ್ತಿದ್ದರು. ...

Widgets Magazine