ಮೊಬೈಲ್ ಕಳ್ಳರನ್ನು ಸೆರೆಹಿಡಿದು ಬೆತ್ತಲೆ ಮೆರವಣಿಗೆ: 9 ಮಂದಿ ವಿರುದ್ಧ ದೂರು ದಾಖಲು

ಮುಂಬೈ| Krishnaveni K| Last Modified ಭಾನುವಾರ, 10 ಜನವರಿ 2021 (09:42 IST)
ಮುಂಬೈ: ಮೊಬೈಲ್ ಕಳ್ಳರನ್ನು ಸೆರೆಹಿಡಿದು ಬೀದಿಯಲ್ಲಿ ಬೆತ್ತಲಾಗಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ 9 ಮಂದಿ ವಿರುದ್ಧ ದೂರು ದಾಖಲಾಗಿದೆ.

 
ಈ ಪೈಕಿ ಐವರನ್ನು ಬಂಧಿಸಲಾಗಿದೆ. ಸ್ಥಳೀಯರೇ ಇಬ್ಬರು ಮೊಬೈಲ್ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದರು. ಬಳಿಕ ಬ್ಯಾಂಡ್, ವಾದ್ಯ ಬಾರಿಸುತ್ತಾ ಬಟ್ಟೆ ಬಿಚ್ಚಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದಾರೆ.  ಅಷ್ಟೇ ಅಲ್ಲದೆ, ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :