ನಾನು ಕಾರ್ಮಿಕ ನಂ 1: ನರೇಂದ್ರ ಮೋದಿ

ವಡೋದರಾ, ಶನಿವಾರ, 17 ಮೇ 2014 (18:51 IST)

Widgets Magazine

ತಾವು ಕಣಕ್ಕಿಳಿದು ಜಯಿಸಿದ ಕ್ಷೇತ್ರಗಳಲ್ಲೊಂದಾದ ವಡೋದರಾದಲ್ಲಿ ತಮ್ಮ ವಿಜಯದ ಭಾಷಣವನ್ನು ಮಾಡಿದ ಭಾವಿ ಪ್ರಧಾನಿ ಮೋದಿ "ನಾನು ಕಾರ್ಮಿಕ ನಂ 1 " ಎಂದು ಹೇಳಿದ್ದಾರೆ. 
 
ತಮ್ಮ ಪಕ್ಷ ಅಭೂತಪೂರ್ವ ಗೆಲುವನ್ನು ದಾಖಲಿಸಿದ ತರುವಾಯ ಗೆಲುವಿನ ಮಾತುಗಳನ್ನು  ಪ್ರಸ್ತುತ ಪಡಿಸಲು ಮೋದಿ ತಾವು ಗೆದ್ದ ಸಂಸದೀಯ ಕ್ಷೇತ್ರವನ್ನೇ ಆಯ್ದುಕೊಂಡರು. ವಡೋದರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರನ್ನು,  ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಬಿಜೆಪಿಯ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಪ್ರದರ್ಶಿಸುವುದರ ಮೂಲಕ ಅವರನ್ನು ಉಲ್ಲಸಿತಗೊಳಿಸಿದರು.
 
"ಬೆಳಿಗ್ಗೆಯಿಂದ ಮಾಧ್ಯಮಗಳು ನನ್ನ ಜತೆ ಮಾತನಾಡಲು ಪ್ರಯತ್ನಿಸುತ್ತಿದ್ದವು.ಆದರೆ ನಾನು ವಡೋದರಾದಿಂದ ಮಾತುಗಳನ್ನಾರಂಭಿಸ ಬೇಕೆಂದು ಬಯಸಿದ್ದೆ" ಎಂದಾಗ ನೆರೆದಿದ್ದ ಜನ ಕಿವಿಗಡಚಿಕ್ಕುವಂತೆ ಕಿರಿಚಾಡುತ್ತಾ ಅವರ ಮಾತಿಗೆ ಅನುಮೋದನೆ ನೀಡಿದರು. 
 
ತಮ್ಮ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅವರು ಸ್ವಾತಂತ್ರ್ಯಾ ನಂತರ "ಇದೇ ಪ್ರಥಮ ಬಾರಿ ಜನರಿಂದ ರಚಿತವಾದ ಸರಕಾರ ಅಸ್ತಿತ್ವಕ್ಕೆ ಬರುತ್ತಿದೆ ಎಂದರು.  ತಮ್ಮ ಮತಾಧಿಕಾರ ಚಲಾಯಿಸಲು ದಾಖಲೆ ಸಂಖ್ಯೆಯಲ್ಲಿ ಬಂದ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ ಮೋದಿ ಬಿಜೆಪಿಗಾಗಿ ಜನರು ಮತ ಚಲಾಯಿಸಿದರು ಎಂದು ಹೇಳಿದ್ದಾರೆ. 
 
"ಸ್ಪರ್ಧಿಯಾಗಿ ನನ್ನ ಜತೆ ಎರಡು ಘಟನೆಗಳು ನಡೆದಿವೆ. ನಾಮಪತ್ರವನ್ನು ಸಲ್ಲಿಸಿದ ನಂತರ ನಾನು ನಿಮಗೆ ಕೇವಲ 50 ನಿಮಿಷಗಳನ್ನು ನೀಡಿದೆ. ಆದರೆ ನೀವು ನನಗೆ 5, 70.000 ಮತಗಳನ್ನು ನೀಡಿದಿರಿ. ವಾರಣಾಸಿಯಲ್ಲಿ ನನ್ನ ಯೋಚನೆಗಳನ್ನು ವ್ಯಕ್ತಪಡಿಸಲು ನನಗೆ ಅವಕಾಶ ಸಿಗಲಿಲ್ಲ. ಆದರೂ ವಾರಣಾಸಿ ನನಗೆ ಬೆಂಬಲ ನೀಡಿತು. ಈ ಎರಡು ವಿಷಯಗಳು ನನ್ನನ್ನು ಅತಿಯಾಗಿ ಕಾಡುತ್ತಿವೆ" ಎಂದು ಮೋದಿ ಹೇಳಿಕೊಂಡರು. 
 
63 ವರ್ಷದ ನಮೋ ತಮ್ಮ ತನ್ನ ವಿಜಯದ ಭಾಷಣವನ್ನು  ಪ್ರಾರಂಭಿಸಿದ ಕೂಡಲೇ ನೆರೆದಿದ್ದ ಜನ  'ಹರ್ ಹರ್ ಮೋದಿ ಎಂದು ಕೂಗಲು ಪ್ರಾರಂಭಿಸಿದರು. ಎಂದಿನಂತೆ ಮೋದಿ ತಾಯಿನಾಡಿಗೆ ಸೆಲ್ಯೂಟ್ ಮಾಡಿ ತಮ್ಮ ಭಾಷಣವನ್ನು ಆರಂಭಿಸಿದರು. ಅವರು "ಭಾರತ್ ಮಾತಾ ಕಿ," ಎಂದಾಗ  ಜನರೆಲ್ಲ 'ಜೈ' ಎಂದು ಪ್ರತಿಕ್ರಿಯಿಸಿದರು. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಜತೆ ಕುಮಾರಸ್ವಾಮಿ ಒಳಒಪ್ಪಂದ: ಬಚ್ಚೇಗೌಡ ಆರೋಪ

ಬೆಂಗಳೂರು: ಕಾಂಗ್ರೆಸ್‌ನೊಂದಿಗೆ ಕುಮಾರಸ್ವಾಮಿ ಒಳಒಪ್ಪಂದ ಮಾಡಿಕೊಂಡಿದ್ದರಿಂದ ನನಗೆ ಚಿಕ್ಕಬಳ್ಳಾಪುರ ...

news

ದೇಶಕ್ಕಾಗಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ: ಮನಮೋಹನ್ ಸಿಂಗ್

ದೇಶದ ಜನತೆಯನ್ನು ಉದ್ದೇಶಿಸಿ ತಮ್ಮ ಕೊನೆಯ ಭಾಷಣ ಮಾಡಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, "ದೇಶಕ್ಕೆ ಸೇವೆ ...

ಪ್ರತಾಪ್ ಸಿಂಹ ಅವರಿಗೆ ಸಿಕ್ಕಿರುವುದು ಜೆಡಿಎಸ್ ಮತಗಳು: ವಿಶ್ವನಾಥ್

ಮೈಸೂರು: ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಸಿಕ್ಕಿರುವುದು ಜೆಡಿಎಸ್‌ಗೆ ...

ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ: ಯಡ್ಡಿಗೆ ಡಿವಿಎಸ್ ಟಾಂಗ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ನಾನೂ ಕೂಡಾ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದೇನೆ ...

Widgets Magazine