ಪ್ರಧಾನಿ ಮೋದಿಗೆ ಸಮಸ್ಯೆ ಪರಿಹರಿಸಲಾಗದಿದ್ರೆ ಕಾಂಗ್ರೆಸ್ ಮೊರೆ ಹೋಗಲಿ: ರಾಹುಲ್ ಗಾಂಧಿ

ಅಮೇಥಿ, ಬುಧವಾರ, 4 ಅಕ್ಟೋಬರ್ 2017 (20:09 IST)

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
 ಅಮೇಥಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ, ಒಂದು ವೇಳೆ ರೈತರ ಮತ್ತು ಯುವಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಮೋದಿಗೆ ಸಾಧ್ಯವಾಗದಿದ್ದಲ್ಲಿ ಅದನ್ನು ಬಹಿರಂಗವಾಗಿ ಹೇಳಲಿ. ಕಾಂಗ್ರೆಸ್ ಪಕ್ಷ ಕೇವಲ ಆರು ತಿಂಗಳುಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಿದ್ದವಿದೆ ಎಂದು ತಿರುಗೇಟು ನೀಡಿದ್ದಾರೆ.
 
ಯುಪಿಎ ಸರಕಾರ ಜಾರಿಗೆ ತಂದ ನರೇಗಾ ಯೋಜನೆಯನ್ನು ಪ್ರಧಾನಿ ಮೋದಿ ವಿರೋದಿಸಿದ್ದರು. ಅದೊಂದು ಅಪ್ರಯೋಜಕ ಯೋಜನೆ ಎಂದು ಟೀಕಿಸಿದ್ದರು. ಕೆಲ ತಿಂಗಳುಗಳ ನಂತರ ನರೇಗಾ ಯೋಜನೆ ಅತ್ಯುಪಯುಕ್ತ ಎಂದು ಹೇಳುತ್ತಿದ್ದಾರೆಂದು ಲೇವಡಿ ಮಾಡಿದರು.
 
ರಾಹುಲ್ ಗಾಂಧಿಯವರು ಯಾವುದೇ ವಿಷಯದ ಬಗ್ಗೆ ಪಾಲ್ಗೊಳ್ಳುವವರ ಅಭಿಪ್ರಾಯವನ್ನು ಪರಿಗಣಿಸದೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದ್ದಾರೆ. ಅವರು ಹೇಳಿದರು, "ಕಾಂಗ್ರೆಸ್ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಜನರು ಸಲಹೆ, ಆದರೆ ಬಿಜೆಪಿ ತನ್ನದೇ ಆದ ಕೆಲಸ."
 
ಕಾಂಗ್ರೆಸ್ ನೇತೃತ್ವದ ಸರಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜನತೆಯ ಅಭಿಪ್ರಾಯಪಡೆದು ನಂತರ ತೀರ್ಮಾನ ತೆಗೆದುಕೊಳ್ಳುತ್ತಿತ್ತು. ಆದರೆ, ಬಿಜೆಪಿ ಯಾವುದೇ ಸಮಸ್ಯೆಯ ಬಗ್ಗೆ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಿಡಿಕಾರಿದರು.
 
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಲವರಿಗೆ ನಮ್ಮ ಸರ್ಕಾರ ಟೀಕಿಸದಿದ್ರೆ ನಿದ್ದೆ ಬರೋಲ್ಲ: ಪ್ರಧಾನಿ ಮೋದಿ

ನವದೆಹಲಿ: ಕೆಲವರಿಗೆ ನಮ್ಮ ಸರ್ಕಾರವನ್ನು ಟೀಕಿಸದಿದ್ರೆ ನಿದ್ದೆ ಬರೋಲ್ಲ. ಸರಕಾರವನ್ನು ಟೀಕಿಸುವುದೇ ...

news

ಆರೆಸ್ಸೆಸ್ ಸಂಘಟನೆ ಗೋಡ್ಸೆ ಸಂತಾನ: ಸಚಿವ ವಿನಯ್ ಕುಲಕರ್ಣಿ

ಧಾರವಾಡ: ದೇಶಭಕ್ತ ಎಂದು ಬಿಂಬಿಸಿಕೊಳ್ಳುವ ಆರೆಸ್ಸೆಸ್ ಸಂಘಟನೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ಗೋಡ್ಸೆ ...

news

ಸಿಎಂ ಕಾರ್ಯವೈಖರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಶ್ಲಾಘನೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಉತ್ತಮವಾಗಿ ಜನಪರ ಸರಕಾರ ನಡೆಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ...

news

ಜನ್ಮದಿನದಂದೇ ನಟ ಕಮಲ್‌ಹಾಸನ್ ಹೊಸ ಪಕ್ಷ ಘೋಷಣೆ

ಚೆನ್ನೈ: ತಮ್ಮ ಜನ್ಮದಿನದಂದೇ ಬಹುಭಾಷಾ ನಟ ಕಮಲ್‌ಹಾಸನ್ ಹೊಸ ಪಕ್ಷ ಘೋಷಿಸುವುದಾಗಿ ಹೇಳಿದ್ದಾರೆ.

Widgets Magazine
Widgets Magazine