ಅಪರೂಪದ ಶಸ್ತ್ರಚಿಕಿತ್ಸೆ: ರೋಗಿ ಹೊಟ್ಟೆಯಲ್ಲಿತ್ತು 600 ಮೊಳೆ..!

ಪಶ್ಚಿಮ ಬಂಗಾಳ, ಮಂಗಳವಾರ, 31 ಅಕ್ಟೋಬರ್ 2017 (14:51 IST)

ಪಶ್ಚಿಮ ಬಂಗಾಳ: ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ವ್ಯಕ್ತಿಯ ಹೊಟ್ಟೆಯಲ್ಲಿದ್ದ ಕ್ಕೂ ಹೆಚ್ಚು ಕಬ್ಬಿಣದ ಮೊಳೆ ಹೊರತೆಗೆದಿರುವ ಘಟನೆ ಕೊಲ್ಕತ್ತಾದ ಮೆಡಿಕಲ್ ಕಾಲೇಜ್ ವೊಂದರಲ್ಲಿ ನಡೆದಿದೆ.


ರೋಗಿಗೆ ಕಳೆದ ತಿಂಗಳು ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆತನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ರೋಗಿಗೆ ಯುಎಸ್‍ ಜಿ ಟೆಸ್ಟ್ ಮಾಡಿಸಿದಾಗ ರೋಗಿ ಹೊಟ್ಟೆಯಲ್ಲಿ ಮೊಳೆ ಇರುವುದು ತಿಳಿದು ಬಂದಿದೆ.

ಮಾನಸಿಕ ಅಸ್ವಸ್ಥನಾಗಿದ್ದ ರೋಗಿ, ಕೈಗೆ ಸಿಕ್ಕ ವಸ್ತುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದ. ಆದರೆ ಇಷ್ಟೊಂದು ಮೊಳೆ ಇರಬಹುದೆಂದು ಊಹಿಸಿಯೂ ಇರಲಿಲ್ಲ ಎಂದು ರೋಗಿಯ ಸಂಬಂಧಿಕರು ಹೇಳಿದ್ದಾರೆ.

ಈ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಅಪಾಯಕಾರಿಯಾಗಿತ್ತು. ಆದರೂ ನಾವು ರಿಸ್ಕ್ ತೆಗೆದುಕೊಂಡು ಯಶಸ್ವಿಯಾಗಿ ಆಪರೇಷನ್ ಮಾಡಿದ್ದೇವೆ. ಈಗ ರೋಗಿ ಆರೋಗ್ಯವಾಗಿದ್ದಾರೆ. ಆದರೆ ಅಚ್ಚರಿ ಎಂದರೆ ತುಂಬಾ ದಿನ ಮೊಳೆಗಳು ಹೊಟ್ಟೆಯಲ್ಲಿದ್ದರೂ ಸಹ ರೋಗಿಗೆ ಒಂದು ಸಣ್ಣ ಗಾಯವೂ ಆಗಿಲ್ಲ. ಜೊತೆಗೆ ಮೊಳೆಗಳು ಚುಚ್ಚಿಕೊಂಡಿಲ್ಲ ಎಂದು ಶಸ್ತ್ರಚಿಕಿತ್ಸೆ ನೇತೃತ್ವ ವಹಿಸಿದ್ದ ವೈದ್ಯ ಸಿದ್ಧಾರ್ಥ್ ಬಿಸ್ವಾಸ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದ್ಯ ಸೇವಿಸಲು ಹಣವಿಲ್ಲದ ಹೆಡ್ ಮಾಸ್ಟರ್ ಮಾಡಿದ್ದೇನ್ ಗೊತ್ತಾ..?

ಮೈಸೂರು: ಸರ್ಕಾರಿ ಶಾಲೆ ಮುಖ್ಯ ಶಿಕ್ಷಕನೊಬ್ಬ ಮದ್ಯಕ್ಕಾಗಿ ಬಿಸಿಯೂಟದ ಅಕ್ಕಿ ಮಾರಲು ಯತ್ನಿಸಿರುವ ಘಟನೆ ...

news

2019ರ ಲೋಕಸಭೆ ಚುನಾವಣೆಯಲ್ಲಿ ಕನ್ಹಯ್ಯಾ ಕುಮಾರ್ ಕಣಕ್ಕೆ

ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷಗಳು ದೂರವಿದೆ. ಆದರೆ, ಈಗಾಗಲೇ ಬಿಹಾರ್‌ದಲ್ಲಿರುವ ...

news

ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ ಅಪಹರಿಸಿ 4 ತಿಂಗಳುಗಳವರೆಗೆ ಅತ್ಯಾಚಾರ

ಗ್ವಾಲಿಯರ್: ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕಾಗಿ ಆರೋಪಿಗಳು 18 ವರ್ಷದ ಯುವತಿಯನ್ನು ಅಪಹರಿಸಿ ನಾಲ್ಕು ...

news

ಪಕ್ಷದ ಹೆಸರು ಅಧಿಕೃತವಾಗಿ ಘೋಷಿಸಿದ ರಿಯಲ್ ಸ್ಟಾರ್ ಉಪ್ಪಿ

ಬೆಂಗಳೂರು: ರಿಯಲ್ ರಾಜಕೀಯಕ್ಕೆ ಬರುವುದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ...

Widgets Magazine
Widgets Magazine