Widgets Magazine
Widgets Magazine

ಮುಂಬೈ ಸ್ಫೋಟ: ಇಬ್ಬರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ, ಮತ್ತೊಬ್ಬನಿಗೆ 10 ವರ್ಷ ಶಿಕ್ಷೆ

ಮುಂಬೈ, ಗುರುವಾರ, 7 ಸೆಪ್ಟಂಬರ್ 2017 (13:10 IST)

Widgets Magazine

1993 ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭೂಗತ ಪಾತಕಿ ಅಬು ಸಲೇಂಗೆ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 
ಮುಂಬೈನ ಟಾಡಾ ಕೋರ್ಟ್, 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
 
ಮತ್ತೊಬ್ಬ ದೋಷಿ ಕರಿಮುಲ್ಲಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತರ ಮೂವರು ದೋಷಿಗಳಾದ ಫಿರೋಜ್ ಖಾನ್, ಮೊಹಮ್ಮದ್ ತಾಹೀರ್ ಮರ್ಚಂಟ್ ತಾಹೀರ್ ಟಕ್ಲ್ಯಾ, ರಿಯಾಜ್ ಅಹ್ಮದಿ ಸಿದ್ದೀಕಿ ವಿರುದ್ಧ ಕೋರ್ಟ್ ಇಂದು ತೀರ್ಪು ನೀಡಲಾಗಿದೆ.
 
ಫಿರೋಜ್ ಖಾನ್‌, ಮೊಹಮ್ಮದ್ ತಾಹೀರ್ ಮರ್ಚಂಟ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ರಿಯಾಜ್ ಅಹ್ಮದ್ ಸಿದ್ದಿಕಿಗೆ 10 ವರ್ಷ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. 
 
ಮುಸ್ತಪಾ ದೊಸ್ಸಾ ಎನ್ನುವ ಉಗ್ರ, ಕೋರ್ಟ್‌ನಿಂದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಾನೆ. ಆತನ ಮೇಲಿದ್ದ ಪ್ರಕರಣವನ್ನು ರದ್ದುಗೊಳಿಸಲಾಗಿತ್ತು.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗೌರಿ ಲಂಕೇಶ್ ಕುಟುಂಬದಿಂದ ಒತ್ತಾಯ ಬಂದರೆ ಸಿಬಿಐ ತನಿಖೆಗೆ ವಹಿಸಲು ಸಿದ್ಧ: ಸಿದ್ದರಾಮಯ್ಯ

ಕುಟುಂಬ ವರ್ಗದವರಿಂದ ಒತ್ತಾಯ ಕೇಳಿಬಂದರೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಲು ...

news

ಕೊಲೆಗಡುಕ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ: ಯಡಿಯೂರಪ್ಪ

ಮಂಗಳೂರು: ಕೊಲೆಗಡುಕ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿ ಭಾಷಣ ಆರಂಭಿಸಿದ ಬಿಜೆಪಿ ...

news

ನಾಪತ್ತೆಯಾಗಿದ್ದ ಸೋನಿಯಾ ಗಾಂಧಿ ಎಸ್`ಪಿಜಿ ಕಮಾಂಡೋ ಪತ್ತೆ

ಸೆಪ್ಟೆಂಬರ್ 1ರಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಎಸ್`ಪಿಜಿಯ ಪೇದೆ ರಾಕೇಶ್ ...

news

ಸಚಿವ ರಮಾನಾಥ್ ರೈಗೆ ಈ ಜನ್ಮದಲ್ಲಿ ಅನ್ನ ಸಿಗಲ್ಲ: ಆರ್.ಅಶೋಕ್

ಮಂಗಳೂರು: ಶಾಲಾ ಮಕ್ಕಳ ಅನ್ನವನ್ನು ಕಸಿದ ರಮಾನಾಥ್ ರೈಗೆ ಈ ಜನ್ಮದಲ್ಲಿ ಅನ್ನ ಸಿಗಲ್ಲ ಎಂದು ಮಾಜಿ ಡಿಸಿಎಂ ...

Widgets Magazine Widgets Magazine Widgets Magazine