`ಮುನ್ನಾ ಭಾಯ್’ ಸಂಜಯ್ ದತ್ ಗೆ ಮತ್ತೆ ಸಂಕಷ್ಟ

ಉತ್ತರ ಪ್ರದೇಶ, ಗುರುವಾರ, 26 ಅಕ್ಟೋಬರ್ 2017 (17:52 IST)

ಉತ್ತರ ಪ್ರದೇಶ: ಬಾಲಿವುಡ್‌ ನಟ ಸಂಜಯ್‌ ದತ್‌ ಗೆ ಹೊಸ ಸಂಕಷ್ಟ ಎದುರಾಗಿದೆ. 2009ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಬಿಎಸ್‌ಪಿ ನಾಯಕಿ ಮಾಯಾವತಿಗೆ "ಜಾದೂ ಕೀ ಝಪ್ಪಿ' ಎಂದು ಹೇಳಿದ್ದ ಸಂಜಯ್‌ ದತ್‌ ಗೆ ಉತ್ತರ ಪ್ರದೇಶ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.


ಸಮಾಜವಾದಿ ಪಕ್ಷದ ಅಭ್ಯರ್ಥಿ ಪರ ಸಾರ್ವಜನಿಕ ಭಾಷಣದಲ್ಲಿ ಮಾಯಾವತಿಯನ್ನು ಹೀಗಳೆಯುತ್ತಾ ತನ್ನ ಜನಪ್ರಿಯ "ಜಾದೂ ಕೀ ಝಪ್ಪಿ' ಡೈಲಾಗ್ ಹೇಳುವ ಮೂಲಕ ನಟ ಸಂಜಯ್‌ ದತ್‌, ಭಾರೀ ದೊಡ್ಡ ಜನಸ್ತೋಮವನ್ನು ನಗೆಗಡಲಲ್ಲಿ ತೇಲಿಸಿದ್ದರು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೂ ನಾನು ಜಾದೂ ಕೀ ಝಪ್ಪಿ ನೀಡಬಯಸುತ್ತೇನೆ ಎಂದು ದತ್‌ ಹೇಳಿದ್ದರು.

ಕಾರ್ಯಕ್ರಮದ ವಿಡಿಯೋವನ್ನು ಜಿಲ್ಲಾಡಳಿತ ಚಿತ್ರೀಕರಿಸಿತ್ತು. ಇದರ ಆಧಾರದಲ್ಲಿ ದೂರು ದಾಖಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರು ಆದೇಶಿಸಿದ್ದರು. ಮಾಸೋಲಿ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ವಿನಯ್‌ ಮಿಶ್ರಾ, ಸಂಜಯ್‌ ದತ್‌ ವಿರುದ್ಧ ದೂರು ದಾಖಲಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಅರೆಸ್ಟ್ ವಾರಂಟ್

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಪದೇ ಪದೇ ಗೈರುಹಾಜರಾಗುತ್ತಿರುವ ಹಿನ್ನೆಲೆಯಲ್ಲಿ, ...

news

ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ತೆಲಗಿ ಸಾವು

ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ(56)ಮೃತಪಟ್ಟಿದ್ದಾನೆ.

news

ನಕಲಿ ಛಾಪಾ ಕಾಗದ: ಅಬ್ದುಲ್ ಕರೀಂ ಲಾಲ್ ತೆಲಗಿ ನಿಧನ

ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿಯಾಗಿದ್ದ 56 ವರ್ಷ ವಯಸ್ಸಿನ ಅಬ್ದುಲ್ ಕರೀಂ ಲಾಲ್ ...

news

ಮೊದಲ ಪತ್ನಿಗಾಗಿ ಎರಡನೇ ಪತ್ನಿಯನ್ನೇ ಕೊಂದ ಪತಿ ಮಹಾಶಯ..!?

ನವದೆಹಲಿ: ಎರಡು ದಿನದ ಹಿಂದೆ ವಾಯುವ್ಯ ದೆಹಲಿಯ ರೋಹಿಣಿಯಲ್ಲಿ ನಡೆದಿದ್ದ ಗೃಹಿಣಿ ಹತ್ಯೆ ಪ್ರಕರಣಕ್ಕೆ ...

Widgets Magazine
Widgets Magazine