ಪುತ್ರಿಗೆ ವಿವಾಹದ ಉಡುಗೊರೆಯಾಗಿ ಗೋವು ನೀಡಿದ ಮುಸ್ಲಿಂ ತಂದೆ

ರೋಹ್ಟಕ್, ಮಂಗಳವಾರ, 11 ಏಪ್ರಿಲ್ 2017 (13:57 IST)

Widgets Magazine

ಗೋವು ರಕ್ಷಕರು ಕೆಲವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಸಂದರ್ಭದಲ್ಲಿಯೇ ಮುಸ್ಲಿಂ ತಂದೆಯೊಬ್ಬ ತನ್ನ ಪುತ್ರಿಗೆ ವಿವಾಹದ ವಿಶೇಷ ಕೊಡುಗೆಯಾಗಿ ಗೋವು ನೀಡಿ ಅಚ್ಚರಿ ಮೂಡಿಸಿದ್ದಾನೆ. 
 
ಹರಿಯಾಣಾದ ಸೋನಿಪತ್ ಜಿಲ್ಲೆಯಲ್ಲಿ ಮುಸ್ಲಿಂ ತಂದೆ, ಪುತ್ರಿಗೆ ವಿವಾಹದ ಕೊಡುಗೆಯಾಗಿ ಗೋವು ನೀಡಿದ ಘಟನೆ ವರದಿಯಾಗಿದೆ.   
 
ಮುಸ್ಲಿಂ ಸಮುದಾಯದ ನೂರ್ ಖಾನ್ ಎನ್ನುವವರು ಖಾರ್ಕೋಡಾ ಗ್ರಾಮದಲ್ಲಿ ನಡೆದ ತನ್ನ ಪುತ್ರಿ ಗುಲ್ಶಾನಾ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಉಡುಗೊರೆಯಾಗಿ ಗೋವು ನೀಡಿದ್ದಾರೆ.      
 
ನೂರ್ ಖಾನ್, ಪುತ್ರಿಗೆ 13 ಸಾವಿರ ರೂಪಾಯಿ ಮೌಲ್ಯದ ದೇಶಿಯ ತಳಿಯ ಗೋವು ನೀಡಿದ್ದಾರೆ. ಪುತ್ರಿಗೆ ಗೋವುಗಳ ಮೇಲೆ ತುಂಬಾ ಪ್ರೀತಿ. ಮನೆಯ ಮುಂದೆ ಗೋವುಗಳು ಬಂದಲ್ಲಿ ಅವುಗಳಿಗೆ ಬ್ರೆಡ್ ಮತ್ತು ಬೆಲ್ಲ ನೀಡುತ್ತಿದ್ದಳು.ನನ್ನ ಮನೆಯಲ್ಲಿ ಸ್ಥಳದ ಕೊರತೆಯಿಂದಾಗಿ ಗೋವು ಸಾಕಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.     
 
ಹರಿಯಾಣಾದಲ್ಲಿಯೇ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಪುತ್ರಿಯ ವಿವಾಹದ ಕೊಡುಗೆಯಾಗಿ ಗೋವು ನೀಡಿರುವುದು ಮೊದಲನೆಯ ಘಟನೆಯಾಗಿರಬಹುದು ಎನ್ನಲಾಗಿದೆ. 
 
ತಂದೆಯ ಕೊಡುಗೆಯಿಂದ ತುಂಬಾ ಸಂತೋಷಗೊಂಡಿರುವ ಗುಲ್ಶಾನಾ, ನಮ್ಮ  ಅತ್ತೆ ಮಾವನ ಮನೆಯಲ್ಲಿ ಪ್ರೀತಿಯಿಂದ ಹಸುವನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾಳೆ.    
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಂಗಳೂರು-ಬೆಂಗಳೂರು ಬಸ್ ಅಪಘಾತ: 30 ಕ್ಕೂ ಹೆಚ್ಚು ಜನರಿಗೆ ಗಾಯ

ಬೆಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಮಂಡ್ಯ ಜಿಲ್ಲೆಯ ನಾಗಮಂಗಲ ಬಳಿ ಲಾರಿಗೆ ...

news

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿ ಸಂಕಷ್ಟಕ್ಕೀಡಾದ ಸಿಎಂ ಕೇಜ್ರಿವಾಲ್

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ...

news

ಬೆಂಗಳೂರು ಒನ್ ನಲ್ಲಿ ಇನ್ನು ಕಸ ಹಾಕಬಹುದು!

ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದೇ ಚಿಂತೆ. ದೆಹಲಿ ಮತ್ತು ಮುಂಬೈ ನಂತರ ಅತೀ ಹೆಚ್ಚು ...

news

ಸುಖದ ಸುಪ್ಪತ್ತಿಗೆ ಬಿಟ್ಟು ಸನ್ಯಾಸದತ್ತ ಮುಖಮಾಡಿದ ಶ್ರೀಮಂತನ ಪುತ್ರಿ

ವೈರಾಗ್ಯ ಎನ್ನುವುದೇ ಹಾಗೆ. ಅದು ಯಾವ ವಯಸ್ಸಿಗೆ ಬರುತ್ತದೆಯೆಂದು ಹೇಳುವುದು ಅಸಾಧ್ಯ. ಕೇವಲ 24 ವರ್ಷದ ...

Widgets Magazine Widgets Magazine