ತ್ರಿವಳಿ ತಲಾಖ್ ನಿಲ್ಲಿಸಲು ಹನುಮಾನ್ ಚಾಲೀಸಾ ಓದಿದ ಮುಸ್ಲಿಂ ಮಹಿಳೆ!

Varanasi, ಗುರುವಾರ, 11 ಮೇ 2017 (09:48 IST)

Widgets Magazine

ವಾರಣಾಸಿ: ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕುರಿತಂತೆ ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಲಿದೆ. ಈ ಪದ್ಧತಿ ನಿಲ್ಲಲು ಮುಸ್ಲಿಂ ಮಹಿಳೆಯೊಬ್ಬರು ಹನುಮಾನ್ ಚಾಲೀಸಾ ಓದಿ ಪ್ರಾರ್ಥನೆ ಸಲ್ಲಿಸಿದ್ದಾರೆ!


 
ಶಬಾನಾ ಎಂಬ ಮುಸ್ಲಿಂ ಮಹಿಳೆ ಹಿಂದೂಗಳ ಆರಾಧ್ಯ ದೇವರಾದ ಹನುಮಾನ್ ಚಾಲೀಸಾ ಓದಿ ಗಮನ ಸೆಳೆದಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಎರಡೂ ಒಂದೇ. ಈ ಅನಿಷ್ಠ ಪದ್ಧತಿ ನಿಲ್ಲಲಿ ಎಂದು ಹನುಮಾನ್ ಚಾಲೀಸಾ ಓದುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.
 
ಐದು ಮಂದಿ ವಿವಿಧ ಧರ್ಮಕ್ಕೆ ಸೇರಿದ ನ್ಯಾಯಾಧೀಶರುಗಳ ಪೀಠ ಇಂದಿನಿಂದ ತ್ರಿವಳಿ ತಲಾಖ್ ಪದ್ಧತಿ ನಿಷೇಧದ ಕುರಿತಂತೆ ವಿಚಾರಣೆ ನಡೆಸಲಿದ್ದಾರೆ. ಒಟ್ಟು ಏಳು ಅರ್ಜಿಗಳ ವಿಚಾರಣೆ ನಡೆಯಲಿದೆ. ಇದರಲ್ಲಿ ಐದು ಅರ್ಜಿಗಳು ಮುಸ್ಲಿಂ ಮಹಿಳೆಯರಿಂದ ಬಂದಿದೆ ಎನ್ನುವುದು ವಿಶೇಷ.
 
ತ್ರಿವಳಿ ತಲಾಖ್ ನಿಷೇಧಿಸುವ ಬಗ್ಗೆ ಸ್ವತಃ ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿತ್ತು. ಇದೀಗ ಇದನ್ನು ಒಂದು ವಿಶೇಷ ಪ್ರಕರಣವೆಂದು ಭಾವಿಸಿ ಮುಖ್ಯ ನ್ಯಾಯಾಮೂರ್ತಿ ಕೇದಾರ್ ಜಾದವ್ ನೇತೃತ್ವದಲ್ಲಿ ವಿಚಾರಣೆಗೊಳಪಡಿಸಲಾಗುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಭಾರೀ ಮಳೆಗೆ ಮದುವೆ ಮನೆಯೇ ಕುಸಿದು ಆಪತ್ತು ಬಂತು!

ರಾಜಸ್ತಾನ್: ಭಾರೀ ಮಳೆ ಎಂತೆಂತಹಾ ಅನಾಹುತ ತರುತ್ತದೆ ನೋಡಿ. ಇಲ್ಲೊಂದು ಕಡೆ ವರುಣ ಮದುವೆ ಮನೆಯನ್ನೇ ಮಸಣದ ...

news

ಸಂಸತ್ತಿನಲ್ಲಿ ಸ್ತನ ಪಾನ ಮಾಡಿದ ಸಂಸದೆ!

ಸಿಡ್ನಿ: ಆಸ್ಟ್ರೇಲಿಯಾದ ಸಂಸದೆಯೊಬ್ಬಳು ಸಂಸತ್ತಿನಲ್ಲೇ ತನ್ನ ಮಗುವಿಗೆ ಸ್ತನ ಪಾನ ಮಾಡಿ ಹೀಗೆ ಮಾಡಿದ ಮೊದಲ ...

news

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ ಶಾಸಕನಿಗೆ ಸಿಎಂ ಯೋಗಿ ಕರೆ

ಲಕ್ನೋ: ಸೇವಾ ನಿಯಮ ಉಲ್ಲಂಘಿಸಿದ ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ...

news

ಪನ್ನೀರ್ ಸೆಲ್ವಂ ಬಣ ಸೇರಲಿರುವ 35 ಶಾಸಕರು: ಸೆಮ್ಮಾಲೈ

ಚೆನ್ನೈ: ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಣದ 35 ಶಾಸಕರು ಪನ್ನೀರ್‌ಸೆಲ್ವಂ ಬಣಕ್ಕೆ ಸೇರಲಿದ್ದಾರೆ. ...

Widgets Magazine