Widgets Magazine
Widgets Magazine

ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡಿದ ಮುಸ್ಲಿಮರು

ಪಾಟ್ನಾ, ಶುಕ್ರವಾರ, 5 ಮೇ 2017 (18:20 IST)

Widgets Magazine

ದ್ವೇಷದ ಅಪರಾಧಗಳು ಹೆಚ್ಚುತ್ತಿರುವ ಸಮಯದಲ್ಲಿ, ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯದ ಉನ್ನತೀಕರಣಕ್ಕಾಗಿ ತಮ್ಮ ಭೂಮಿಯನ್ನು ದಾನ ಮಾಡಿದೆ ಎಂದು ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.
 
ಗೋಪಾಲ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಅಹಿರುಲಿ ದುಬೌಲಿ ಟೋಲಾ ತಕಿಯ ನಿವಾಸಿಗಳಾದ ತಬಾರಕ್ ದಿವಾನ್ ಮತ್ತು ಅವರ ಪುತ್ರ ಮನು ದಿವಾನ್, ಬಥಾಕುಟಿಯ ಐತಿಹಾಸಿಕ ದೇವಾಲಯದ ಮುಖ್ಯ ಗೇಟ್ ನಿರ್ಮಾಣಕ್ಕಾಗಿ ಎನ್ಎಚ್ 28 ಸಮೀಪ ತಮ್ಮ ಭೂಮಿ ದಾನ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
 
ತಬರಕ್ ದಿವಾನ್ ಉದ್ಯಮದ ಘಟಕವನ್ನು ಸ್ಥಾಪಿಸಲು ಕೆಲವು ತಿಂಗಳುಗಳ ಹಿಂದೆ 12 ಲಕ್ಷ ರೂಪಾಯಿಗಳನ್ನು ನೀಡಿ ಭೂಮಿಯನ್ನು ಖರೀದಿಸಿದ್ದರು.  
 
ತಮ್ಮ ದುಬಾರಿ ಭೂಮಿ ದೇಣಿಗೆ ನೀಡುವ ಮೂಲಕ, ಮುಸ್ಲಿಮರ ಕುಟುಂಬವು ಬಾತಕುಟಿಯ ಐತಿಹಾಸಿಕ ದೇವಾಲಯವನ್ನು ಸುಧಾರಿಸಲು ಸಹಾಯ ಮಾಡಿತು, ಅದು ನವೀಕರಣದ ಹಂತದಲ್ಲಿದೆ.ಅವರು ತಮ್ಮ ಭೂಮಿಯನ್ನು ದಾನ ಮಾಡಲು ನಿರಾಕರಿಸಿದರೆ, ದೇವಾಲಯದ ಮುಖ್ಯ ದ್ವಾರವನ್ನು ನಿರ್ಮಿಸಲು ಅಸಾಧ್ಯವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
 
ದೇವಸ್ಥಾನದ ಮುಖ್ಯ ದ್ವಾರಕ್ಕಾಗಿ ಭೂಮಿ ದೇಣಿಗೆಗೆ ಧನ್ಯವಾದಗಳು. ಅವರು ನೀಡಿದ ಭೂಮಿಯಲ್ಲಿ ಮುಖ್ಯ ದ್ವಾರ ನಿರ್ಮಿಸಲಾಗುವುದು ಎಂದು ಕುಚಾಯ್ಕೋಟ್ ಜೆಡಿ-ಯು ಶಾಸಕ ಅಮರೇಂದ್ರ ಕುಮಾರ್ ಅಲಿಯಾಸ್ ಪಪ್ಪು ಪಾಂಡೆ ಹೇಳಿದರು.
 
ಮತ್ತೊಬ್ಬ ಮುಸ್ಲಿಂ ಮುಖಂಡ ಪಾಂಡೆ ಪ್ರಕಾರ, ಆಲಿ ರಾಝಾ ಅದೇ ದೇವಾಲಯವನ್ನು ನಿರ್ಮಿಸಲು ಸಹ ಭೂಮಿ ನೀಡಿದರು. ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ರಾಮೈನ ಗ್ರಾಮದ ನಿವಾಸಿಯಾದ ರಾಝಾ, ಇದನ್ನು ಸಾಮುದಾಯಿಕ ಸಾಮರಸ್ಯದ ಸಂಕೇತ ಎಂದು ಬಣ್ಣಿಸಿದ್ದಾರೆ.
 
ನಾವು ದಶಕಗಳ ಕಾಲ ಇಲ್ಲಿ ವಾಸಿಸುತ್ತಿದ್ದೇವೆ ಮತ್ತು ಪರಸ್ಪರರು ಒಂದಾಗಿ ಜೀವಿಸುತ್ತಿದ್ದೇವೆ.ಇದು ಸಾಮುದಾಯಿಕ ಸಾಮರಸ್ಯಕ್ಕೆ ಒಂದು ಸಂಕೇತವಾಗಿತ್ತು. ಒಂದು ಒಳ್ಳೆಯ ಕಾರಣಕ್ಕಾಗಿ ನಾವು ಭೂಮಿ ದಾನ ಮಾಡಲು ನಿರ್ಧರಿಸಿದ್ದೇವೆ.ಎಲ್ಲಾ ಧರ್ಮಗಳು ಒಂದೇ ಆಗಿವೆ" ಎಂದು ಮನು ದಿವಾನ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸೇನಾ ದ್ವೇಷ ಭಾಷಣ: ಪ್ರಧಾನಿ ನವಾಜ್ ಷರೀಫ್ ವಿರುದ್ಧ ಎಫ್‌ಐಆರ್ ದಾಖಲು

ಇಸ್ಲಾಮಾಬಾದ್: ಸಶಸ್ತ್ರ ಪಡೆಗಳ ವಿರುದ್ಧ ದ್ವೇಷ ಭಾವನೆ ಸಷ್ಟಿಸುವಂತಹ ಮತ್ತು ಜನತೆಯನ್ನು ಪ್ರಚೋದಿಸುವಂತಹ ...

news

ನಿರ್ಭಯಾ ತೀರ್ಪಿಗೆ ಸಚಿವ ಉಮಾಶ್ರೀ ಸ್ವಾಗತ

ಬೆಂಗಳೂರು: ನಿರ್ಭಯಾ ಅತ್ಯಾಚಾರಿಗಳಿಗೆ ಸುಪ್ರೀಂಕೋರ್ಚ್ ಮರಣದಂಡನೆ ವಿಧಿಸಿರುವುದು ಸ್ವಾಗತಾರ್ಹ ಎಂದು ...

news

ಅತೃಪ್ತ ನಾಯಕ ಈಶ್ವರಪ್ಪಗೆ ಯಡಿಯೂರಪ್ಪ ಭರ್ಜರಿ ಟಾಂಗ್

ಮೈಸೂರು: ನಾಳೆ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಡೆಯಲಿರುವ ವಿವಿಧಗೋಷ್ಠಿಗಳಲ್ಲಿ ಈಶ್ವರಪ್ಪಗೆ ...

news

ನಾನು ಎಲ್ಲಿಗೆ ಬೇಕಾದ್ರೂ ಹೋಗ್ತೇನೆ, ಫಾಲೋ ಮಾಡಿದ್ರೆ ಸರಿ ಇರಲ್ಲ: ಈಶ್ವರಪ್ಪ

ಬೆಂಗಳೂರು: ನಾನು ಎಲ್ಲಿಗೆ ಬೇಕಾದ್ರೂ ಹೋಗ್ತೇನೆ, ಫಾಲೋ ಮಾಡಿದ್ರೆ ಸರಿ ಇರಲ್ಲ ಎಂದು ವಿಧಾನಪರಿಷತ್ ...

Widgets Magazine Widgets Magazine Widgets Magazine