ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಸ್ನೇಹಿತನ ಮನೆಯ ಫ್ರಿಡ್ಜ್ ನಲ್ಲಿ ಪತ್ತೆ….!

ನವದೆಹಲಿ, ಭಾನುವಾರ, 15 ಅಕ್ಟೋಬರ್ 2017 (10:40 IST)

ನವದೆಹಲಿ: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿರುವ ಘಟನೆ ದೆಹಲಿಯ ಸೈದುಲಾಜಾಬ್‌ನಲ್ಲಿ ನಡೆದಿದೆ.


ಉತ್ತರಾಖಂಡ್‌‌ ಮೂಲದ ವಿಪಿನ್‌ ಜೋಷಿ(26) ಕೊಲೆಯಾದ ವ್ಯಕ್ತಿ. ವಿಪಿನ್‌ ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದ. ವಿಪಿನ್‌ ಗಾಗಿ ಆತನ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಪತ್ತೆಯಾಗದಿದ್ದ ಕಾರಣ ಆತನ ಸ್ನೇಹಿತ ಬಾದಲ್‌ ಮಂಡಲ್‌ ಮನೆಯಲ್ಲಿರಬಹುದು ಎಂದು ಅಲ್ಲಿಗೆ ಬಂದಿದ್ದಾರೆ.

ಆದರೆ ಬಾದಲ್ ಮನೆ ಬೀಗ ಹಾಕಿತ್ತು. ಅಲ್ಲದೆ ಮನೆ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ವಿಪಿನ್ ಕುಟುಂಬಸ್ಥರು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಬಾಗಿಲು ಮುರಿದು ಒಳಹೊಕ್ಕಿದಾಗ ಫ್ರಿ‍ಡ್ಜ್ ನಲ್ಲಿ ವಿಪಿನ್ ಜೋಷಿ ಕತ್ತರಿಸಿ ತುಂಡಾದ ಸ್ಥಿತಿಯಲ್ಲಿ ಕಂಡು ಬಂದಿದೆ.

ವಿಪಿನ್ ಜೋಷಿ ಕತ್ತು ಸೀಳಿ ಹತ್ಯೆ ಮಾಡಿದ್ದು, ನಂತರ ದೇಹದ ಭಾಗಗಳನ್ನು ತುಂಡು ಮಾಡಿ ಫ್ರಿಡ್ಜ್ ನಲ್ಲಿಟ್ಟು ಬಾದಲ್ ಪರಾರಿಯಾಗಿದ್ದಾನೆ.  ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಬಾದಲ್ ಗಾಗಿ ಶೋಧ ನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರಿನಲ್ಲಿ ಗುಂಡಿಗಳಿಗೆ ಸವಾರರು ಬಲಿ: ವರದಿ ಕೇಳಿದ ರಾಹುಲ್ ಗಾಂಧಿ

ಬೆಂಗಳೂರು: ಭಾರೀ ಮಳೆಯಿಂದ ನಗರದ ಹಲವು ರಸ್ತೆಗಳು ಗುಂಡಿಮಯವಾಗಿವೆ. ಹೀಗಾಗಿ ಇದರಿಂದ ಸಾವನ್ನಪ್ಪಿರುವ ಹಾಗೂ ...

news

ರಾಹುಲ್ ಗಾಂಧಿಗೆ ಸಚಿವೆ ಸ್ಮೃತಿ ಇರಾನಿಯ ವಿಶಿಷ್ಟ ತಿರುಗೇಟು

ನವದೆಹಲಿ: ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತ ಶೋಚನೀಯ ಪರಿಸ್ಥಿತಿಗೆ ತಲುಪಿದ ಹಿನ್ನಲೆಯಲ್ಲಿ ...

news

ಸಚಿವ ರೋಷನ್ ಬೇಗ್ ಮೇಲೆ ನಟ ಜಗ್ಗೇಶ್ ಕಿಡಿ

ಬೆಂಗಳೂರು: ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಕೊನೆಗೆ ಕ್ಷಮೆ ಯಾಚಿಸಿದ ಸಚಿವ ರೋಷನ್ ...

news

ಮುಂಬೈ ದಾಳಿ ಸಂದರ್ಭ ಭಾರತದಲ್ಲಿದ್ದ ಪಾಕ್ ಸಚಿವರಿಗೆ ಪ್ರಣಬ್ ಮುಖರ್ಜಿ ಹೇಳಿದ್ದೇನು?

ನವದೆಹಲಿ: 2008 ರಲ್ಲಿ ಮುಂಬೈ ಮೇಲೆ ಪಾಕ್ ಮೂಲದ ಉಗ್ರರು ದಾಳಿ ನಡೆಸುವಾಗ ಭಾರತದಲ್ಲಿದ್ದ ಪಾಕಿಸ್ತಾನ ...

Widgets Magazine
Widgets Magazine