ಉತ್ತರಪ್ರದೇಶದ ಬಿಜೆಪಿ ಗೆಲುವಿನ ಹಿಂದೆ ಇರುವುದು ಅಮಿತ್ ಶಾ, ಮೋದಿಯಲ್ಲ..!

ಲಖನೌ, ಭಾನುವಾರ, 12 ಮಾರ್ಚ್ 2017 (12:48 IST)

Widgets Magazine

ಉತ್ತರಪ್ರದೇಶದಲ್ಲಿ ಬಿಜೆಪಿ ಇತಿಹಾಸ ಬರೆದಿದೆ. 37 ವರ್ಷಗಳ ಬಳಿಕ ಪಕ್ಷವೊಂದು 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ದೇಶಾದ್ಯಂತ ಕೆಳಿಬರುತ್ತಿರುವ ಒಂದೇ ಮಾತು ಇದು ಅಮಿತ್ ಶಾ ಮತ್ತು ಮೋದಿ ಮೇನಿಯಾ. ಆದರೆ, ಅಸಲಿ ಕಥೆಯೇ ಬೇರೆ.ಉತ್ತರಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಹಿಂದಿರುವ ಮಾಸ್ಟರ್ ಮೈಂಡ್ ಸುನಿಲ್ ಬನ್ಸಾಲ್.
 


ಜೈಪುರದ ಎಬಿವಿಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುನಿಲ್ ಬನ್ಸಾಲ್ ರನ್ನ 2014ರ ಚುನಾವಣೆಗೂ ಮುನ್ನ ಅಮಿತ್ ಶಾ ಸಹಾಯಕ್ಕೆ ಆರೆಸ್ಸೆಸ್ ಉತ್ತರಪ್ರದೇಶಕ್ಕೆ ಕಳುಹಿಸಿತ್ತು.ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಜಕೀಯದ ಅನುಭವ ಪಡೆದ ಬನ್ಸಾಲ್, ಈ ರಾಜ್ಯದ ಗಾಳಿಯಲ್ಲೂ ರಾಜಕೀಯ ಇದೆ ಎಂದು ಅರಿತಿದ್ದರು.
 
ಬಳಿಕ ಅಖಾಡಕ್ಕೀಳಿದ ಬನ್ಸಾಲ್ ಬೂತ್ ಮಟ್ಟದಿಂದ 1000 ಕಾರ್ಯಕರ್ತರನ್ನ ಬಿಜೆಪಿ ಕಚೇರಿಗೆ ನೇಮಿಸಿಕೊಂಡರು. ಕಚೇರಿಯಲ್ಲಿ ಕೇವಲ ಮೇಲ್ವರ್ಗದ ಜನರನ್ನ ತುಂಬಿಸಿಕೊಳ್ಳದೆ ಓಬಿಸಿ, ಎಂಬಿಸಿ ಮತ್ತು ದಲಿತರಿಗೆ ಅವಕಾಶ ಕೊಟ್ಟರು.
 
ಪಕ್ಷಕ್ಕಾಗಿ ದುಡಿಯುವ ಆಸಕ್ತಿ ಇರುವ ಉತ್ತರಪ್ರದೇಶದವರಾದ  150 ಕಾರ್ಯಕರ್ತರನ್ನ ಪಕ್ಷದ ದೈನಂದಿನ ಕಾರ್ಯಚಟುವಟಿಕೆ ನಿರ್ವಹಣೆಗೆ ನೇಮಿಸಿಕೊಂಡರು.
 
ಉತ್ತರಪ್ರದೇಶದಲ್ಲಿ ಬಿಜೆಪಿ 2 ಕೋಟಿ ಸದಸ್ಯರನ್ನ ನೋಂದಣಿ ಮಾಡಿಕೊಂಡ ಬಳಿಕ ರಾಜ್ಯದ 1.47 ಲಕ್ಷ ಬೂತ್`ಗಳನ್ನೊಳಗೊಂಡ ಬೂತ್ ಕಮಿಟಿಯನ್ನ ರಚಿಸಿದರು. ಅದರಲ್ಲಿ ಸುಮಾರು 1.08 ಲಕ್ಷದಷ್ಟು ಬೂತ್`ಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಾಯ್ತು. ಬಿಜೆಪಿಗೆ ಇದ್ದ ನಗರದ ಪಕ್ಷ ಎಂಬ ಹಣೆಪಟ್ಟಿ ತೆಗೆದು ಅಭಿವೃದ್ಧಿ ಮರೀಚಿಕೆಯಾಗಿರುವ ಉತ್ತರಪ್ರದೇಶದ ಹಳ್ಳಿಗಾಡಿನ ಜನರ ಮನವೊಲಿಸುವಲ್ಲಿ ಯಶಸ್ವಿಯಾದರು. ಪಂಚಾಯ್ತಿಗಳಲ್ಲೂ ಸ್ಪರ್ಧಿಸಿ ಪಕ್ಷದ ಕಾರ್ಯಕರ್ತರು ಅಧಿಕಾರಕ್ಕೆ ಬಂದರು. ಬಳಿಕ ಯುವಕರು, ದಲಿತರ ಮನೆ ಮನೆಗೆ ತೆರಳಿ ಮೂಲಮಟ್ಟದಿಂದ ಪಕ್ಷದ ಬಲವರ್ಧನೆ ಮಾಡಿದರು. ಸೋಶಿಯಲ್ ಮೀಡಿಯಾ ಮೂಲಕ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಿದರು.
 
6 ತಿಂಗಳ ಹಿಂದೆಯೇ ಉತ್ತರಪ್ರದೇಶದಲ್ಲಿ ಸರ್ವೆ ನಡೆಸಿ ಪ್ರತೀ ಕ್ಷೇತ್ರದಲ್ಲಿ ಜನಪ್ರಿಯ ಅಭ್ಯರ್ಥಿಯನ್ನ ಗುರ್ತಿಸಿದ್ದರು. ಎಷ್ಟೇ ವಿರೋಧ ವ್ಯಕ್ತವಾದರೂ ಅದೇ ಅಭ್ಯರ್ಥಿಗೆ ಬನ್ಸಾಲ್ ಟಿಕೆಟ್ ಕೊಡಿಸಿದ್ದರು.

ಬನ್ಸಾಲ್ ಮೇಲೆ ನಂಬಿಕೆ ಇಟ್ಟಿದ್ದ ಅಮಿತ್ ಶಾ ಸಗ ಸೊಲ್ಲೆತ್ತದೆ ಬೆಂಬಲ ನನೀಡಿದ್ದರು. ಇದರ ಪರಿಣಾಮವೇ ಬಿಜೆಪಿ ಉತ್ತರಪ್ರದೇಶದ ಆಡಳಿತದ ಚುಕ್ಕಾಣಿ ಹಿಡಿದಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸುನಿಲ್ ಬನ್ಸಾಲ್ ನರೇಂದ್ರಮೋದಿ ಬಿಜೆಪಿ Bjp Narendra Modi Sunil Bansal

Widgets Magazine

ಸುದ್ದಿಗಳು

news

ಸೆಕ್ಸ್ ಮಾಡುವಾಗ ಗಂಡ ಸತ್ತಾನೆಂಬ ಭಯದಲ್ಲಿ ಡಿವೋರ್ಸ್`ಗೆ ಮುಂದಾದ ನಟಿ

ನಾಂಗ್ ನಾಟ್.. ಏಷ್ಯಾದ ಪೋರ್ನ್ ಇಂಡಸ್ಟ್ರೀಯಲ್ಲಿ ಸಂಚಲನ ಸೃಷ್ಟಿಸಿದ್ದ ಥೈಲ್ಯಾಂಡ್ ನಟಿ. 2012ರಲ್ಲಿ 72 ...

news

ಮಾಯಾವತಿಗೆ ಟಾಂಗ್ ಕೊಟ್ಟ ಬಿಜೆಪಿ

ನವದೆಹಲಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗದ ಸಹಾಯದಿಂದ ಗೆದ್ದಿದೆ ಎಂದು ಆರೋಪ ಮಾಡಿದ ...

news

ರಾಹುಲ್ ಗಾಂಧಿ ಟ್ವೀಟ್ ಗೆ ಪ್ರಧಾನಿ ಮೋದಿ ನೀಡಿದ ಪ್ರತಿಕ್ರಿಯೆಯಿದು

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಪ್ರಧಾನಿ ಮೋದಿಗೆ ಟ್ವಿಟರ್ ಮೂಲಕ ಅಭಿನಂದನೆ ...

news

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂತಿದೆ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ...

Widgets Magazine