ಮಹಿಳೆಯರಿಗೆ ಈತ ಕೊಡುತ್ತಿರುವ ಕಾಟ ಕೇಳಿದರೆ ಬೆಚ್ಚಿಬೀಳುತ್ತೀರಿ..!

ನವದೆಹಲಿ, ಸೋಮವಾರ, 31 ಜುಲೈ 2017 (20:05 IST)

ದೆಹಲಿ ಪೊಲೀಸರಿಗೆ ಬಂದಿರುವ ಮೂರು ದೂರುಗಳು ಅಕ್ಷರಶಃ ಅಚ್ಚರಿ ಹುಟ್ಟಿಸಿವೆ. ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರು ಜಡೆಯನ್ನ ಕತ್ತರಿಸಿರುವ ಬಗ್ಗೆ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಆ ವ್ಯಕ್ತಿ ಯಾರೆಂಬುದು ಯಾರಿಗೂ ಗೊತ್ತಿಲ್ಲ.
 


ದ್ವಾರಕಾ ಬಳಿ 12 ಗಂಟೆಗಳ ಅವಧಿಯಲ್ಲಿ ಈ ಮೂರೂ ಘಟನೆಗಳು ನಡೆದಿದ್ದು, ಸ್ಥಳೀಯರಿಗೆ ತೀವ್ರ ಭಯ ಹುಟ್ಟಿಸಿವೆ.  ಬೆಳಗ್ಗೆ 10.30ರ ವೇಳೆಗೆ ಮೊದಲ ಘಟನೆ ನಡೆದಿದ್ದು, ಜಾನುವಾರುಗಳಿಗೆ ಮೇವು ಹಾಕಿದ ಬಳಿಕ ಮುನಿಶ್ ಎಂಬ ಮಹಿಳೆ ಮನೆಗೆ ಬಂದು ಮಲಗಿದಾಗ ಆಕೆಯ ಕೂದಲು ಕೆಳಗೆ ಬಿದ್ದದ್ದನ್ನ ಮೊಮ್ಮಗ ಗುರ್ತಿಸಿದ್ದಾನೆ. ಈ ಸಂದರ್ಭ ಮನೆಯ ಸದಸ್ಯರೆಲ್ಲ ಗಾಬರಿಯಾಗಿದ್ದಾರೆ. ಕೂದಲನ್ನ ಕತ್ತರಿಸಿದ್ದು ಯಾರು ಎಂಬ ಬಗ್ಗೆ
 

ಈ ಘಟನೆ ನಡೆದ ಕೂಗಳತೆ ದೂರದಲ್ಲಿ ಸಂಜೆ ಮತ್ತೊಂದು ಘಟನೆ ನಡೆದಿದೆ. ಶರೀದೇವಿ ಎಂಬ 40 ವರ್ಷದ ಮಹಿಳೆ ಹಾಲು ಕರೆದುಕೊಂಡು ಮನೆಗೆ ಬಂದು ತಲೆನೋವೆಂದು ಪರಿತಪಿಸುತ್ತಿದ್ದಾಗ ಆಕೆಯ ಕೂದಲು ನೆಲದ ಮೇಲೆ ಬಿದ್ದಿದ್ದನ್ನ ಮಗ ಕಂಡಿದ್ದಾನೆ.

ರಾತ್ರಿ 10.30ರ ಸುಮಾರಿಗೆ ಮತ್ತೊಂದು ಘಟನೆ ನಡೆದಿದ್ದು, ಆಕೆ ಮನೆಯ ಬಾಗಿಲು ಹಾಕಲು ಹೋದಾಗ ಆಕೆಯ ಜಡೆ ತುಂಡಾಗಿ ಬಿದ್ದಿದೆ. ಮಹಿಳೆ ತೀವ್ರವಾಗಿ ಭಯ ಬಿದ್ದು ಒಳಗೆ ಓಡಿ ಬಂದಿದ್ದಾರೆ.  ಈ ಕುರಿತು, ಪ್ರತಿಕ್ರಿಯಿಸಿರುವ ಪೊಲೀಸರು ಇದು ಮಾಟ ಮಂತ್ರದ ರೀತಿ ಕಾಣುತ್ತಿಲ್ಲ. ಯಾರೋ ಖದೀಮರು ಸುಲಭವಾಗಿ ರಾಬರಿ ಮಾಡಬಹುದಾದ ಮಹಿಳೆಯರನ್ನ ಕೂದಲು ತುಂಡರಿಸಿ ಗುರುತು ಮಾಡುತ್ತಿದ್ದಾರೆ ಕೂಡಲೇ ಸಿಸಿಟಿವಿ ವಿಡಿಯೋ ಆಧರಿಸಿ ಅವರನ್ನ ಬಂಧಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನವದೆಹಲಿ ಆಗಂತುಕ ಮಹಿಳೆಯರ ಕೂದಲಿಗೇ ಕನ್ನ Mystery Man New Delhi Cutting Hair

ಸುದ್ದಿಗಳು

news

ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಧಾರವಾಡ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ...

news

ಮಾತೆ ಮಹಾದೇವಿಗೆ ಅವಮಾನ: ರಂಭಾಪುರಿ ಶ್ರೀಗಳ ವಿರುದ್ಧ ದೂರು

ಬೆಂಗಳೂರು: ರಂಭಾಪುರಿ ಶ್ರೀಗಳು ಮಾತೆ ಮಹಾದೇವಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ...

news

ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಣೆ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನ ಕೇಂದ್ರ ತೆರಿಗೆ ಇಲಾಖೆ ಆಗಸ್ಟ್ 5ರವರೆಗೆ ವಿಸ್ತರಿಸಿದೆ. ...

news

ಕೇಂದ್ರ ಸರಕಾರದಿಂದ ಬರಪರಿಹಾರ ಹಣ ಬಿಡುಗಡೆ

ನವದೆಹಲಿ: ಕೇಂದ್ರ ಸರಕಾರ ರಾಜ್ಯದ ಬರಗಾಲ ಪರಿಹಾರಕ್ಕಾಗಿ 782 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಿ ...

Widgets Magazine