ಅರ್ಧದಷ್ಟು ಸಂಪತ್ತು ದಾನ ಮಾಡಲಿದ್ದಾರೆ ನಂದನ್ ನೀಲೇಕಣಿ

ಬೆಂಗಳೂರು, ಮಂಗಳವಾರ, 21 ನವೆಂಬರ್ 2017 (08:56 IST)

ಬೆಂಗಳೂರು: ಜಗತ್ತಿನ ಅತೀ ಶ್ರೀಮಂತರಾದ ವಾರೆನ್ ಬಫೆಟ್, ಬಿಲ್ ಗೇಟ್ಸ್ ತಾವು ಸಂಪಾದಿಸಿದ ಬಹುಪಾಲನ್ನು ಬಡವರಿಗಾಗಿ ವಿನಿಯೋಗಿಸಿ ಸುದ್ದಿ ಮಾಡಿದ್ದರು. ಇದೀಗ ಭಾರತದ ಶ್ರೀಮಂತ ಉದ್ಯಮಿ ಇನ್ಫೋಸಿಸ್ ಸಿಇಒ ನಂದನ್ ನೀಲೇಕಣ್ ಇದೇ ದಾರಿಯಲ್ಲಿದ್ದಾರೆ.
 

ನಂದನ್ ನೀಲೇಕಣಿ ಕೂಡಾ ತಮ್ಮ ಅರ್ಧದಷ್ಟು ಸಂಪತ್ತನ್ನು ಬಡವರಿಗಾಗಿ ವಿನಿಯೋಗಿಸಲಾಗಿದೆ. ಇದನ್ನು ಹೇಗೆ ಬಳಸಬೇಕು, ಯಾರಿಗೆ ಕೊಡಬೇಕು ಎಂಬ ಬಗ್ಗೆ ಅವರ ಪತ್ನಿ ರೋಹಿಣಿ ನೀಲೇಕಣಿ ಯೋಜನೆ ರೂಪಿಸಲಿದ್ದಾರಂತೆ.
 
ಹಾಗಂತ ಸ್ವತಃ ನೀಲೇಕಣಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಪ್ರಪಂಚದ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ ಬೆಂಗಳೂರಿನಲ್ಲಿ ನೀಲೇಕಣಿ ದಂಪತಿಯನ್ನು ಭೇಟಿಯಾಗಿದ್ದು. ಬಿಲ್ ಗೇಟ್ಸ್ ಪ್ರೇರಣೆಯಿಂದ ನೀಲೇಕಣಿ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಭಗವದ್ಗೀತೆಯ ಸಾಲಿನಂತೆ ಫಲಾಪೇಕ್ಷೆಯಿಲ್ಲದೇ ಸೇವೆ ಮಾಡಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ನೀಲೇಕಣಿ ದಂಪತಿಯ ತೀರ್ಮಾನಕ್ಕೆ ಬಿಲ್ ಗೇಟ್ಸ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಂದನ್ ನೀಲೇಕಣಿ ಬಿಲ್ ಗೇಟ್ಸ್ ಸಂಪತ್ತು ದಾನ ರಾಷ್ಟ್ರೀಯ ಸುದ್ದಿಗಳು Donation Bil Gates Nandan Nilekani National News

ಸುದ್ದಿಗಳು

news

ಪ್ರಧಾನಿ ಮೋದಿ ವಿರುದ್ಧ ಸೋನಿಯಾ ಗಾಂಧಿ ಆರೋಪ

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ...

news

ದೇವಸ್ಥಾನಕ್ಕೆ 2 ಲಕ್ಷ ರೂ ದೇಣಿಗೆ ನೀಡಿದ ಭಿಕ್ಷುಕಿ...!

ಮೈಸೂರು: ಅಸಾಮಾನ್ಯ ಘಟನೆಯೊಂದರಲ್ಲಿ ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ...

news

ಸಿಎಂ ಹೊಗಳುವ ಭರದಲ್ಲಿ ಜಮೀರ್ ಅಹ್ಮದ್ ಮಾಡಿದ ಯಡವಟ್ಟು..!

ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು ಹೊಗಳುವ ಭರದಲ್ಲಿ ಬಂಡಾಯ ಜೆಡಿಎಸ್ ಮುಖಂಡ ಜಮೀರ್ ಅಹ್ಮದ್ ನೀಡಿದ ...

news

ವಿಧಾನಸಭೆಯಲ್ಲಿ ಗಣಪತಿ ಗದ್ದಲ: ಸಿಎಂ, ಜಾರ್ಜ್ ರಾಜೀನಾಮೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಕುರಿತ ಪ್ರಕರಣ ಸದನದಲ್ಲಿ ...

Widgets Magazine