ಮೋದಿ ಗೆಲುವು ಮುಸ್ಲಿಮರು ಜಾತ್ಯಾತೀತರೆಂಬುದನ್ನು ತೋರಿಸುತ್ತದೆ : ಅಜಂ ಖಾನ್

ರಾಂಪುರ, ಮಂಗಳವಾರ, 20 ಮೇ 2014 (11:26 IST)

Widgets Magazine

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅಭೂತಪೂರ್ಣ ಗೆಲುವಿಗೆ ಮುಸ್ಲಿಮರು ಸಹ ಕಾರಣರಾಗಿದ್ದಾರೆ, ಈ ಮೂಲಕ ಮುಸ್ಲಿಮರು ತಾವು ಜಾತ್ಯತೀತರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಗಮನ ಸೆಳೆಯುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿದ್ದಾರೆ.  
 
ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಲು ಮುಸ್ಲಿಂ ಯೋಧರು ಕಾರಣ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಸಪಾ ನಾಯಕ ಅಜಂ ಖಾನ್, ಚುನಾವಣೆಯ ಸಮಯದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ಪದೇ ಪದೇ  ಪ್ರಚೋದನಕಾರಿ ಮಾತುಗಳನ್ನಾಡಿ ಚುನಾವಣಾ ಆಯೋಗದಿಂದ ಬಿಸಿ ಮುಟ್ಟಿಸಿ ಕೊಂಡಿದ್ದರು. ಅವರ ಮಾತುಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸ ಬಹುದೆಂಬ ಕಾರಣದಿಂದ ಆಯೋಗ ಅವರ ಪ್ರಚಾರ ಸಭೆಗಳಿಗೆ ನಿಷೇಧ ಹೇರಿತ್ತು. 
 
ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುವಂತೆ  ಅಲ್ಪಸಂಖ್ಯಾತ ಸಮುದಾಯಕ್ಕೆ ಮನವಿ ಸಲ್ಲಿಸಿದ್ದ ಖಾನ್, 2002 ಗೋಧ್ರಾ ಹಿಂಸಾಚಾರದ ಕುರಿತಂತೆ ಮೋದಿಯವರನ್ನು ಪದೇ ಪದೇ ಹೀಗಳೆಯುತ್ತಿದ್ದರು. ಒಮ್ಮೆ ಮೋದಿಯನ್ನು ದೂಷಿಸುತ್ತ "ಬಿಜೆಪಿ ಪ್ರಧಾನಿ ಅಭ್ಯರ್ಥಿ ನಾಯಿಮರಿಗಳ ಹಿರಿಯ ಸಹೋದರ" ಎಂದಿದ್ದರು. 
 
ಸೋಮವಾರ ಉತ್ತರಪ್ರದೇಶದಲ್ಲಿ ಮಾತನಾಡುತ್ತಿದ್ದ ಖಾನ್, ನರೇಂದ್ರ ಮೋದಿಯವರ ಗೆಲುವು ಭಾರತೀಯ ಮುಸ್ಲಿಮರು ಜಾತ್ಯತೀತರು ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ.
 
"ಮುಸ್ಲಿಂ ಮತದಾರರು ಯಾರನ್ನು ಸೋಲಿಸ ಬೇಕೆಂಬ ರಾಜಕೀಯ ಅಜೆಂಡಾವನ್ನು ಹೊಂದಿರಲಿಲ್ಲ.  ಕಾರಣ,  ಸುಳ್ಳು ಭರವಸೆಗಳನ್ನು ನಂಬಿದ ಅವರು ಇಂತಹ ರಾಜಕೀಯ ಪಕ್ಷಕ್ಕೂ  ಬೆಂಬಲ ನೀಡಿದರು" ಎಂದು ಖಾನ್ ಅಭಿಪ್ರಾಯ ಪಟ್ಟಿದ್ದಾರೆ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರೆಡ್ಡಿ ಬಿಡುಗಡೆಯನ್ನು ನ್ಯಾಯಾಲಗಳು ನಿರ್ಧರಿಸುತ್ತವೆ: ಶ್ರೀರಾಮುಲು

ನವದೆಹಲಿ: ಜನಾರ್ದನ ರೆಡ್ಡಿ ಒಬ್ಬರೇ ಅಲ್ಲ, ನನ್ನ ಎಲ್ಲಾ ಶಾಸಕರು ಜೈಲಿನಲ್ಲಿದ್ದಾರೆ. ಅವರೆಲ್ಲರ ...

news

ಮಂಗಳೂರು ವಿಶ್ವವಿದ್ಯಾಲಯ: ಇಬ್ಬರು ಉದ್ಯೋಗಿಗಳ ಅನುಮಾನಾಸ್ಪದ ಸಾವು

ಮಂಗಳೂರು ವಿಶ್ವವಿದ್ಯಾನಿಲಯದ ಇಬ್ಬರು ಉದ್ಯೋಗಿಗಳು ಭಾನುವಾರ ವಿಶ್ವವಿದ್ಯಾಲಯದ ಆವರಣದಲ್ಲಿನ ತಮ್ಮ ...

news

ಪ್ರತಿಪಕ್ಷ ರಚನೆಗೆ ಅಮ್ಮನ ಬೆಂಬಲ ಕೋರಿದ ದೀದಿ

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳದ ...

news

ಸೊಸೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ ಅತ್ತೆ

ಕುಂದಾಪುರ: ಅತ್ತೆ, ಸೊಸೆ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಭೀಕರ ಘಟನೆ ಶಿರೂರಿನ ಮೋಗ್ಲಿಯಲ್ಲಿ ...

Widgets Magazine