Widgets Magazine
Widgets Magazine

ಮತ್ತೊಂದು ನೋಟ್ ಬ್ಯಾನ್ ಮಾಡ್ತಾರಾ ಮೋದಿ..? 2000 ರೂ. ನೋಟು ತೆರೆಮರೆಗೆ ಸರಿಯುತ್ತಾ..?

ನವದೆಹಲಿ, ಶುಕ್ರವಾರ, 21 ಜುಲೈ 2017 (09:46 IST)

Widgets Magazine

ನೋಟ್ ಬ್ಯಾನ್ ಬಳಿಕ ಹಣ ಬದಲಾವಣೆಗೆ ಪರದಾಡಿದ್ದನ್ನ ದೇಶದ ಜನ ಇನ್ನೂ ಮರೆತಿಲ್ಲ. ಅದಾಗಲೇ ಮತ್ತೊಂದು ನೋಟ್ ಬ್ಯಾನ್`ಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಸಿದ್ಧತೆ ನಡೆಸಿದ್ದಾರಾ..? ಎಂಬ ಅನುಮಾನ ಮೂಡತೊಡಗಿದೆ.


ಹೌದು, ಕಪ್ಪುಹಣದ ಬೇಟೆಯಾಡಲು ನರೇಂದ್ರ ಮೋದಿ ಸೂಚನೆ ಮೇರೆಗೆ 2000ಿ ರೂ. ನೋಟುಗಳನ್ನ ಚಲಾವಣೆಗೆ ತರಲಾಗಿತ್ತು. ಇದರಿಂದ ನೋಟು ಬದಲಾವಣೆ ಸರಳವಾಗಿತ್ತು. ಆದರೆ, ದಿನನಿತ್ಯದ ವ್ಯವಹಾರಕ್ಕೆ 2000 ರೂ. ನೋಟು ತೊಡಕಾಗಿರುವುದು ಸುಳ್ಳಲ್ಲ. ಹಾಲು, ತರಕಾರಿ, ದಿನಸಿ ತರಲು ಹೋದಾಗ ಚಿಲ್ಲರೆ ಸಿಗದೇ ಜನ ಪರಿತಪಿಸುತ್ತಿದ್ಧಾರೆ. ಇವೇ ಮುಂತಾದ ಕಾರಣಗಳಿಗಾಗಿ 2000 ರೂ. ನೋಟಿಗೆ ಗುಡ್ ಬೈ ಹೇಳಲು ಮೋದಿ ಚಿಂತಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮಾತಿಗೆ ಇಂಬು ನೀಡುವಂತೆ ಹಲವೆಡೆ 2000 ರೂ. ನೋಟುಗಳು ಸಹ ಕಡಿಮೆಯಾಗಿವೆ. ಬ್ಯಾಂಕ್ ಮತ್ತು ಎಟಿಎಂಗಳಲ್ಲೂ 2000 ರೂ. ನೋಟು ಅತ್ಯಂತ ಕಡಿಮೆಯಾಗಿ 500 ರೂ. ನೋಟು ಸಿಗುತ್ತಿವೆ. 2000 ರೂ. ನೋಟು ಹಿಂಪಡೆದು 500 ಮತ್ತು 200 ರೂ. ನೋಟುಗಳನ್ನ ಚಲಾವಣೆಗೆ ಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ 200 ರೂ. ನೋಟು ಮುದ್ರಣವಾಗುತ್ತಿರುವ ಬಗ್ಗೆ ಮೂಲಗಳೇ ಮಾಧ್ಯಮಗಳಿಗೆ ಮಾಹಿ ನೀಡಿರುವುದನ್ನ ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಭಾರತದ ಹಿಂದೂ ರಾಷ್ಟ್ರೀಯವಾದಕ್ಕೆ ನಮ್ಮ ಜತೆ ಯುದ್ಧ ಬೇಕು ಎಂದ ಚೀನಾ

ಬೀಜಿಂಗ್: ಭಾರತದಲ್ಲಿರುವ ಹಿಂದೂ ರಾಷ್ಟ್ರೀಯವಾದಿಗಳಿಗೆ ನಮ್ಮೊಂದಿಗೆ ಯುದ್ಧ ಬೇಕು. ಅದಕ್ಕಾಗಿಯೇ ಸಿಕ್ಕಿಂ ...

news

ಬೆಂಗಳೂರಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಐವರ ಬಂಧನ

ಉದ್ಯಾನ ನಗರಿ ಬೆಂಗಳೂರಿನಲ್ಲಿ ಮತ್ತೊಮ್ಮೆ ನಾಗರಿಕ ಸಮಾಜ ತಲೆತಗ್ಗಿಸುವಂತಾ ಘಟನೆ ನಡೆದಿದೆ. 11 ವರ್ಷದ ...

news

ಲಿಂಗಾಯುತ ಸ್ವತಂತ್ರ ಧರ್ಮ ಅನ್ನೋದು ಸರಿ: ಸಿಎಂ

ಧಾರವಾಡ: ಲಿಂಗಾಯುತ ಧರ್ಮ ಸ್ವತಂತ್ರ ಧರ್ಮ ಅನ್ನೋದು ಸರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

news

ಇಂದಿರಾ ಕ್ಯಾಂಟಿನ್ ಅವ್ಯವಹಾರ ಆರೋಪ: ಯಾವುದೇ ತನಿಖೆಗೆ ಸಿದ್ದ ಎಂದ ಪರಮೇಶ್ವರ್

ಬೆಂಗಳೂರು: ಇಂದಿರಾ ಕ್ಯಾಂಟಿನ್ ಯೋಜನೆಯಲ್ಲಿ ಅವ್ಯವಹಾರವಾಗಿ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ...

Widgets Magazine Widgets Magazine Widgets Magazine