ದೇಶಕ್ಕೇ ಬೆಂಕಿ ಬಿದ್ದಿದೆ: ರಾಹಲ್ ಗಾಂಧಿ

ನವದೆಹಲಿ, ಗುರುವಾರ, 25 ಜನವರಿ 2018 (10:26 IST)


ನವದೆಹಲಿ: ಪದ್ಮಾವತ್ ಸಿನಿಮಾ ಬಿಡುಗಡೆ ವಿರೋಧಿಸಿ ಗುರ್ ಗಾಂವ್ ನಲ್ಲಿ ಶಾಲಾ ಬಸ್ ಒಂದಕ್ಕೆ ಬೆಂಕಿ ಹಚ್ಚಿರುವ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯಿಂದಾಗಿ ದೇಶಕ್ಕೇ ಬೆಂಕಿ ಬಿದ್ದಿದೆ ಎಂದಿದ್ದಾರೆ.
 

‘ಮಕ್ಕಳ ಮೇಲಿನ ದೌರ್ಜನ್ಯವನ್ನು ಸಮರ್ಥಿಸಲು ಯಾವುದೇ ಕಾರಣಗಳಿಲ್ಲ. ಬಿಜೆಪಿ ದೇಶದೆಲ್ಲೆಡೆ, ಧ್ವೇಷ, ಹಿಂಸೆ ಹರಡುತ್ತಿದೆ. ದೇಶವೇ ಈ ಬೆಂಕಿಯಲ್ಲಿ ಉರಿಯುತ್ತಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
 
ಪದ್ಮಾವತ್ ಸಿನಿಮಾ ಇಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರಜಪೂತ ವೀರ ಮಹಿಳೆ ಪದ್ಮಾವತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಲೇ ಇವೆ.  ಇವೆಲ್ಲದರ ಮಧ್ಯೆ ಇಂದು ಚಿತ್ರ ಬಿಡುಗಡೆಯಾಗಿದೆ. ಇದನ್ನು ವಿರೋಧಿಸಿ ನಿನ್ನೆ ಪ್ರತಿಭಟನಾಕಾರರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಗುರ್ ಗಾಂವ್ ನಲ್ಲಿ ಕಿಡಿಗೇಡಿಗಳು ಶಾಲಾ ಮಕ್ಕಳಿದ್ದ ಬಸ್ ಗೆ ಬೆಂಕಿ ಹಚ್ಚಿದ ವಿಡಿಯೋ ಭಾರೀ ವೈರಲ್ ಆಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಮ, ಸೀತೆ ಗೋಮಾಂಸ ಭಕ್ಷಕರು- ನಿಡುಮಾಮಿಡಿ ಶ್ರೀ

ರಾಮ ಸೀತೆ ಗೋಮಾಂಸ ಸೇವನೆ ಮಾಡುತ್ತಿದ್ದರು ಎಂಬುದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ ಎಂದು ...

news

ಕರ್ನಾಟಕ ಬಂದ್: ದ.ಕ. ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?

ಮಂಗಳೂರು: ಮಹದಾಯಿ ನದಿ ನೀರಿಗಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ದ.ಕ. ಜಿಲ್ಲೆಯಲ್ಲಿ ...

news

ಗೋವಾ ಕಾರಿನ ಅಟ್ಟಾಡಿಸಿ ಕಲ್ಲು ಹೊಡೆದ ಹೋರಾಟಗಾರರು!

ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹೋರಾಟಗಾರರ ಕಿಚ್ಚು ಗೋವಾ ಕಡೆಗೆ ...

news

ಬಿಜೆಪಿ ವ್ಯಾಪಾರಿ ಪಕ್ಷ- ರಾಯರೆಡ್ಡಿ ಟೀಕೆ

ಬಿಜೆಪಿ ವ್ಯಾಪಾರಿ ಪಕ್ಷವಾಗಿದ್ದು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ಬಸವರಾಜ ...

Widgets Magazine
Widgets Magazine