ಪತಿ ಸುಂದರವಾಗಿಲ್ಲವೆಂದು ಕಲ್ಲಿನಿಂದ ಜಜ್ಜಿ ಹತ್ಯೆಗೈದ ಪತ್ನಿ

ಕಡಲೂರು, ಮಂಗಳವಾರ, 11 ಏಪ್ರಿಲ್ 2017 (17:33 IST)

Widgets Magazine

ಪತಿ ಸುಂದರವಾಗಿಲ್ಲವೆಂದು ಆಕ್ರೋಶಗೊಂಡ ನವವಿವಾಹಿತ ಮಹಿಳೆಯೊಬ್ಬಳು ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಂದು ಹಾಕಿದ ಹೇಯ ಘಟನೆ ವರದಿಯಾಗಿದೆ.  
 
ಆಘಾತಕಾರಿ ಘಟನೆಯಲ್ಲಿ, ಮಹಿಳೆ ಪತಿ ಸುಂದರವಾಗಿಲ್ಲವೆಂದು ಅಸಮಾಧಾನಗೊಂಡಿದ್ದಳು. ಅಂತಹ ವ್ಯಕ್ತಿಯೊಂದಿಗೆ ಬಾಳಲು ಸಾಧ್ಯವಿಲ್ಲ ಎಂದು ತಿಳಿದು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.  
 
ನಿಜವಾಗಿ ಏನಾಯ್ತು?
 
ಕಳೆದ ವಾರವಷ್ಟೆ ವಿವಾಹವಾಗಿದ್ದ 22 ವರ್ಷದ ಮಹಿಳೆ, ಪತಿಯೊಂದಿಗೆ ನಡೆದ ವಾಗ್ವಾದ ವಿಕೋಪಕ್ಕೆ ತೆರಳಿದಾಗ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  
 
ಗೆಳತಿಯರು ಮತ್ತು ಸಂಬಂಧಿಕರು ವರ ನಿನಗೆ ತಕ್ಕವನಲ್ಲ ಎಂದು ಟೀಕಿಸಿದ್ದರಿಂದ ಮಹಿಳೆ ಪತಿಯ ಬಗ್ಗೆ ವಿವಾಹದ ದಿನದಿಂದಲೇ ದ್ವೇಷ ಬೆಳೆಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
 
ಪತಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ನಂತರ ಮನೆಯಿಂದ ಹೊರಬಂದ ಮಹಿಳೆ, ತನ್ನ ಪತಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ರೋಧಿಸುವ ನಾಟಕವಾಡಿದ್ದಾಳೆ. ಆದರೆ, ಪೊಲೀಸರು ತನಿಖೆ ನಡೆಸಿದಾಗ ಸತ್ಯ ಸಂಗತಿ ಬಹಿರಂಗವಾಗಿದೆ. 
 
ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಬದ್ಧ: ಸಿಎಂ

ಬೆಂಗಳೂರು: ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲು ನಾನು ಸಿದ್ದ. ಆದರೆ, ಅಲ್ಲಿರುವ ಪುರುಷ ಶಾಸಕರ ...

news

ಮಹಿಳೆಯರಿಗೆ 2 ಸಚಿವ ಸ್ಥಾನ ನೀಡಲು ಸಿದ್ಧ: ಸಿಎಂ ಸಿದ್ದರಾಮಯ್ಯ

ಸಂಪುಟ ವಿಸ್ತರಣೆಯಲ್ಲಿ 2 ಸಚಿವ ಸ್ಥಾನಗಳನ್ನ ಮಹಿಳೆಯರಿಗೆ ನೀಡಲು ಸಿದ್ಧವಿದ್ದೇನೆ, ಇದರಿಂದ ...

news

ಮದುವೆಗೆ ನಿರಾಕರಿಸಿದ ಯುವತಿಯನ್ನ ಚಾಕುವಿನಿಂದ ಚುಚ್ಚಿ ಕೊಂದ ಪಾಗಲ್ ಪ್ರೇಮಿ

ಮದುವೆಗೆ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಬೆಂಗಳೂರಿನ ...

news

ಐವರು ಪತ್ರಕರ್ತರ ಹತ್ಯೆಗೆ ಸಂಚು: ಎನ್‌ಐಎ ತನಿಖೆಯಿಂದ ಬಹಿರಂಗ

ಬೆಂಗಳೂರು: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳು ಐವರು ಪತ್ರಕರ್ತರ ಹತ್ಯೆಗೆ ಸಂಚು ...

Widgets Magazine