Widgets Magazine
Widgets Magazine

ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ

ನವದೆಹಲಿ, ಶುಕ್ರವಾರ, 5 ಮೇ 2017 (14:59 IST)

Widgets Magazine

ದೇಶಾದ್ಯಂತ ಕುತೂಹಲ ಕೆರಳಿಸಿದ್ದ ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
 
ಸುಪ್ರೀಂಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ಒಮ್ಮತದ ತೀರ್ಪು ಪ್ರಕಟಿಸಿ, ಪ್ರಕರಣ ತೀವ್ರ ಗಂಭೀರತೆಯಿಂದ ಕೂಡಿದೆ. ಇದೊಂದು ಅಮಾನವೀಯ, ಬರ್ಬರ ಕೃತ್ಯದಿಂದ ಕೂಡಿರುವುದರಿಂದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.
 
ನಿರ್ಭಯಾ ಅತ್ಯಾಚಾರಿಗಳಾದ ಮುಕೇಶ್ ಸಿಂಗ್, ವಿನಯ್ ಶರ್ಮಾ ಪವನ್ ಗುಪ್ತಾ ಮತ್ತು ಅಕ್ಷಯ್ ಠಾಕೂರ್‌ಗೆ ಮರಣದಂಡನೆ ಖಾಯಂಗೊಳಿಸಿದಂತಾಗಿದೆ. ಇದರಿಂದ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪು ಎತ್ತಿಹಿಡಿದಂತಾಗಿದೆ.
 
ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆ ಕೋರ್ಟ್ ಹಾಲ್‌ನಲ್ಲಿ ಉಪಸ್ಥಿತರಿದ್ದವರು "ಸುಪ್ರೀಂ" ತೀರ್ಪನ್ನು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.   
 
ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಭಯಾ ತಾಯಿ, ಕಾನೂನಿನಲ್ಲಿ ವಿಳಂಬವಿದೆ. ಆದರೆ, ಕತ್ತಲಿಲ್ಲ ಎಂದು ಸುಪ್ರೀಂ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

‘ಮನಮೋಹನ್ ಸಿಂಗ್ ವಿದೇಶಕ್ಕೆ ಹೋದರೂ ಗೊತ್ತೇ ಆಗುತ್ತಿರಲಿಲ್ಲ’

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ವಿದೇಶಗಳಿಗೆ ಹೋಗುತ್ತಿದ್ದರು. ಆದರೆ ಯಾರಿಗೂ ...

news

ಉತ್ತರ ಪ್ರದೇಶದಲ್ಲಿ ಅಪ್ಪನಿಗೊಂದು ಮಗನಿಗೊಂದು ಪಕ್ಷ

ಲಕ್ನೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ಒಟ್ಟಾಗಿ ರಾಜಕಾರಣ ಮಾಡಿದ ತಂದೆ-ಮಗ ಇನ್ನು ಪ್ರತ್ಯೇಕ ಪಕ್ಷ ...

news

ಅತೃಪ್ತರಿಗೆ ತಿರುಗೇಟು ನೀಡಲು ಬಿಎಸ್‌ವೈ ಪ್ಲ್ಯಾನ್

ಮೈಸೂರು: ನಾಳೆ ನಡೆಯಲಿರುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಅತೃಪ್ತ ನಾಯಕರಿಗೆ ತಿರುಗೇಟು ನೀಡಲು ಬಿಜೆಪಿ ...

news

ಸಚಿವರು, ಮುಖಂಡರು, ಶಾಸಕರ ಮಧ್ಯೆ ಹೊಂದಾಣಿಕೆಯಿಲ್ಲ: ದಿನೇಶ್ ಗುಂಡೂರಾವ್

ಶಿವಮೊಗ್ಗ: ಸಚಿವರು, ಮುಖಂಡರು, ಶಾಸಕರ ಮಧ್ಯೆ ಹೊಂದಾಣಿಕೆಯಿಲ್ಲದಿರುವುದರಿಂದ ನಮ್ಮಲ್ಲಿರುವ ಸಮಸ್ಯೆಗಳ ...

Widgets Magazine Widgets Magazine Widgets Magazine