ನಿತಾರಿ ಸರಣಿ ಹತ್ಯೆ: ಆರೋಪಿ ಪಂಧೇರ್, ಸುರೀಂದರ್ ಕೋಲಿಗೆ ಗಲ್ಲು

ಗಾಜಿಯಾಬಾದ್, ಸೋಮವಾರ, 24 ಜುಲೈ 2017 (15:32 IST)

ನಿತಾರಿ ಸರಣಿ ಹತ್ಯೆ ಖ್ಯಾತಿಯ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಮತ್ತು ಆತನ ಸಹಾಯಕ ಸುರೀಂದರ್ ಕೋಲಿಗೆ ಸಿಬಿಐ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪಿಂಕಿ ಸರ್ಕಾರ್ ಹತ್ಯೆ ಪ್ರಕರಣದಲ್ಲಿ ಪಂಧೇರ್ ಮತ್ತು ಕೋಲಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ. 
 
ನಿತಾರಿ ಸರಣಿ ಹತ್ಯೆಗಳು ಅಪರೂಪದಲ್ಲಿಯೇ ಅಪರೂಪವಾಗಿದ್ದರಿಂದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಮೂರ್ತಿ ಪವನ್ ಕುಮಾರ್ ತಿವಾರಿ ಆದೇಶದಲ್ಲಿ ತಿಳಿಸಿದ್ದಾರೆ.
 
ಪಂಧೇರ್ ಮತ್ತು ಆತನ ಸಹಾಯಕ ಕೋಲಿ ವಿರುದ್ಧ ಪಿಂಕಿ ಸರ್ಕಾರ ಪ್ರಕರಣದಲ್ಲಿ ಅಪಹರಣ, ರೇಪ್ ಮತ್ತು ಹತ್ಯೆ ಕೇಸ್ ದಾಖಲಾಗಿತ್ತು. ಕಳೆದ 2006ರ ಡಿಸೆಂಬರ್ 29 ರಂದು ಪಂಧೇರ್ ಮನೆಯಲ್ಲಿ 19 ಅಸ್ಥಿಪಂಜರಗಳು ಪತ್ತೆಯಾಗಿದ್ದವು.
 
ಪಂಧೇರ್ ಮತ್ತು ಕೋಲಿ ವಿರುದ್ಧದ 19 ಪ್ರಕರಣಗಳಲ್ಲಿ 16 ಪ್ರಕರಣಗಳಲ್ಲಿ ಆರೋಪಿ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಮೂರು ಪ್ರಕರಣಗಳನ್ನು ಸಾಕ್ಷ್ಯಗಳ ಕೊರತೆಯಿಂದ ಮುಚ್ಚಿಹಾಕಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ನಿತಾರಿ ಹತ್ಯೆ ನೋಯಿಡಾ ಮೊನಿಂದರ್ ಸಿಂಗ್ ಪಂಧೇರ್ ಸುರೀಂದರ್ ಕೋಲಿ ಪಿಂಕಿ ಸರ್ಕಾರ್ Nithari Killings Noida Moninder Singh Pandher Surinder Koli Pinki Sarkar

ಸುದ್ದಿಗಳು

news

ಸಂಸತ್ ಅಧಿವೇಶನ: ಐವರು ಕಾಂಗ್ರೆಸ್ ಸದಸ್ಯರು ಅಮಾನತು

ನವದೆಹಲಿ: ಸಂಸತ್ ಅಧಿವೇಶನದಲ್ಲಿ ಕೋಲಾಹಲ ಗದ್ದಲಕ್ಕೆ ಕಾರಣವಾದ ಐವರು ಕಾಂಗ್ರೆಸ್ ಪಕ್ಷದ ಸಂಸದರನ್ನು ...

ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ನಕಾರ

1989-90 ರ ಅವಧಿಯಲ್ಲಿ ಕಾಶ್ಮೀರದಲ್ಲಿ ನಡೆದ 700 ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದ 215 ಪ್ರಕರಣಗಳ ...

news

ಕಿಡ್ನ್ಯಾಪ್ ಮಾಡಿ ವ್ಯಾಟ್ಸಪ್ ನಲ್ಲಿ 100 ಕೋಟಿಗೆ ಬೇಡಿಕೆಯಿಟ್ಟರು!

ನವದೆಹಲಿ: ಉದ್ಯಮಿಯೊಬ್ಬರನ್ನು ಅಪಹರಿಸಿ ವ್ಯಾಟ್ಸಪ್ ನಲ್ಲಿ 100 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ...

news

ಪ್ರತ್ಯೇಕ ಸ್ವತಂತ್ರ ಧರ್ಮ: ಸಿಎಂ ಬಳಿಗೆ ನಿಯೋಗ

ಬೆಂಗಳೂರು: ಲಿಂಗಾಯುತ ಪ್ರತ್ಯೇಕ ಧರ್ಮ ಸ್ಥಾಪಿಸಲು ನೆರವಾಗುವಂತೆ ಮಠಾಧೀಶರು ಸಿಎಂ ಸಿದ್ದರಾಮಯ್ಯರನ್ನು ...

Widgets Magazine