ಪಾಸ್ ಪೋರ್ಟ್ ಪಡೆಯಲು ಜನನ ಪ್ರಮಾಣ ಪತ್ರದ ಅಗತ್ಯವಿಲ್ಲ

ನವದೆಹಲಿ, ಸೋಮವಾರ, 24 ಜುಲೈ 2017 (13:47 IST)

ನವದೆಹಲಿ: ಇನ್ನುಮುಂದೆ ಪಾಸ್ ಪೋರ್ಟ್ ಪಡೆಯುವುದಕ್ಕೆ ಜನನ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 
 
ಈ ಕುರಿತು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದ್ದು, ಭಾರತೀಯ ನಾಗರಿಕರಿಗೆ ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಬೇಕಿರುವವರು ಜನನ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಜನ್ಮ ದಿನಾಂಕದ ಧೃಢೀಕರಣಕ್ಕಾಗಿ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಗಳನ್ನು ನೀಡಿದರೆ ಸಾಕು ಎಂದು ಸ್ಪಷ್ಟಪಡಿಸಿದೆ. 
 
1980 ರ ಪಾಸ್ ಪೋರ್ಟ್ ನಿಯಮಗಳ ಪ್ರಕಾರ 26/01/1989 ರ ನಂತರ ಜನಿಸಿದವರು, ಪಾಸ್ ಪೋರ್ಟ್ ಪಡೆಯಬೇಕಿದ್ದರೆ ಜನನ ಪ್ರಮಾಣ ಪತ್ರಗಳನ್ನು ನೀಡುವುದು ಕಡ್ಡಾಯವಾಗಿತ್ತು. ಈಗ ಟಿಸಿ, ಮಾನ್ಯತೆ ಪಡೆದ ಸಂಸ್ಥೆಗಳಿಂದ ಇತ್ತೀಚೆಗೆ ಪೂರ್ಣಗೊಳಿಸಿರುವ ಶಿಕ್ಷಣ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಮತದಾರ ಗುರುತಿನ ಚೀಟಿ, ಎಲ್ಐಸಿ ಬಾಂಡ್ ಗಳನ್ನೂ ನೀಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ ವೇಳೆ ವಿಚ್ಛೇದನ ತೀರ್ಪಿನ ಪ್ರತಿ, ದತ್ತು ಪ್ರಮಾಣಪತ್ರಗಳನ್ನು ಸಹ ಇನ್ನು ಮುಂದೆ ಪಾಸ್ ಪೋರ್ಟ್ ಪಡೆಯುವ ವೇಳೆಯಲ್ಲಿ ನೀಡುವ ಅಗತ್ಯವಿಲ್ಲ ಎಂದೂ ತಿಳಿಸಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಪಾಸ್ ಪೋರ್ಟ್ ಜನನ ಪ್ರಮಾಣ ಪತ್ರ ಅನಗತ್ಯ Passport No Birth Certificate Needed

ಸುದ್ದಿಗಳು

news

ಜಂತಕಲ್ ಹಗರಣ: ಮಾಜಿ ಸಿಎಂ ಧರ್ಮಸಿಂಗ್‍‌ಗೆ ಎಸ್‌ಐಟಿ ನೋಟಿಸ್

ಬೆಂಗಳೂರು: ಜಂತಕಲ್ ಗಣಗಾರಿಕೆ ಅಕ್ರಮ ನವೀಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ...

news

ಕಾರ್ಗಿಲ್ ಯುದ್ಧದಲ್ಲಿ ಕೂದಲೆಳೆಯಲ್ಲಿ ಪ್ರಾಣ ಉಳಿಸಿಕೊಂಡಿದ್ದ ಮುಷರಫ್, ನವಾಜ್ ಷರೀಫ್

ನವದೆಹಲಿ: 1999 ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತದ ವಾಯುಸೇನಾ ಹೆಲಿಕಾಪ್ಟರ್ ನ ಪೈಲಟ್ ಆ ಒಂದು ...

news

ಅಧಿವೇಶನ: ಲೋಕಸಭೆಯಲ್ಲಿ ಗದ್ದಲ ಕೋಲಾಹಲ

ಲೋಕಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಮತ್ತು ಅಡಳಿತ ಪಕ್ಷಗಳ ನಡುವೆ ಗದ್ದಲ, ಕೋಲಾಹಲ ...

news

ಕಾಬೂಲ್ ನಲ್ಲಿ ಉಗ್ರರಿಂದ ಆತ್ಮಾಹುತಿ ಕಾರ್ ಬಾಂಬ್ ದಾಳಿ: 24 ಜನರ ದುರ್ಮರಣ

ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಬೆಳಗ್ಗೆ ನಡೆದ ...

Widgets Magazine