ವೈವಾಹಿಕ ಅತ್ಯಾಚಾರ ಅಪರಾಧೀಕರಣ ಪ್ರಸ್ತಾವ ಇಲ್ಲ: ಕೇಂದ್ರ

ನವದೆಹಲಿ, ಶುಕ್ರವಾರ, 11 ಮಾರ್ಚ್ 2016 (16:47 IST)

ನವದೆಹಲಿ: ಭಾರತದಲ್ಲಿ ಸಂಬಂಧದೊಳಗಿನ ಪರಿಕಲ್ಪನೆಯನ್ನು ಅಪರಾಧೀಕರಣಗೊಳಿಸುವ ಪ್ರಸ್ತಾವವಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
ಭಾರತದಲ್ಲಿ ವೈವಾಹಿಕ ಸಂಬಂಧದೊಳಗಿನ ಅತ್ಯಾಚಾರ ಪರಿಕಲ್ಪನೆಯನ್ನು ಅನ್ವಯಿಸುವುದು ಕ್ಲಿಷ್ಟಕರ ಸಂಗತಿ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ, ಸಂಸತ್‌ಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
 
ಅಂತಾರಾಷ್ಟ್ರೀಯವಾಗಿ ವಿವಾಹ ಸಂಬಂಧದಲ್ಲಿ ಅತ್ಯಾಚಾರದ ಪರಿಕಲ್ಪನೆ ಇದೆ. ಆದರೆ ಅದನ್ನು ಭಾರತದಲ್ಲಿ  ಅನ್ವಯಿಸಲು ಸಾಧ್ಯವಿಲ್ಲ. ಶೈಕ್ಷಣಿಕ ಮಟ್ಟ/ ಅನಕ್ಷರತೆ, ಬಡತನ, ವೈವಿಧ್ಯಮಯವಾದ ಸಾಮಾಜಿಕ ಕಟ್ಟಳೆಗಳು, ಮೌಲ್ಯಗಳು, ಧಾರ್ಮಿಕ ನಂಬಿಕೆ, ವೈವಾಹಿಕ ಜೀವನವನ್ನು ಪವಿತ್ರ ಧಾರ್ಮಿಕ ಬಂಧನವೆಂದು ಪರಿಗಣಿಸಿರುವುದು ಇದಕ್ಕೆ ಅಡ್ಡಿಯಾಗಿವೆ ಎಂದು ಸಚಿವೆ ಮೇನಕಾ ಗಾಂಧಿ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕನ್ಹಯ್ಯಾಗೆ ಸವಾಲೆಸೆದ ಬಾಲಕಿಗೆ ಜೀವ ಬೆದರಿಕೆ

ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ದೇಶದ್ರೋಹದ ಆರೋಪವನ್ನೆದುರಿಸುತ್ತಿರುವ ...

news

ತಾಯಿ ಮೇಲೆ ಅತ್ಯಾಚಾರ, ಪುಟ್ಟತಮ್ಮನ ಸಾವು: ಎಳೆಎಳೆಯಾಗಿ ಬಿಚ್ಚಿಟ್ಟ 3ವರ್ಷದ ಮಗು

ಉತ್ತರ ಪ್ರದೇಶದ ಬರೇಲಿಯಲ್ಲಿ ಸೋಮವಾರ ರಾತ್ರಿ ನಡೆದ ಹಸಿ ಬಾಣಂತಿ ಮೇಲಿನ ಅತ್ಯಾಚಾರ ಮತ್ತು ಆಕೆಯ ಹಸುಗೂಸಿನ ...

news

ಮ್ಯಾನ್ಮಾರ್ ಅಧ್ಯಕ್ಷೀಯ ಚುನಾವಣೆ ಕಣದಲ್ಲಿ ಸೂಕಿ ನಿಷ್ಠ ಹಟಿನ್ ಕೈವ್

ಆಂಗ್ ಸಾನ್ ಸೂಕಿ ಅವರ ಬಹುಕಾಲದ ಆಪ್ತ ಹಟಿನ್ ಕೈವ್ ಅವರು ಮ್ಯಾನ್ಮಾರ್ ಅಧ್ಯಕ್ಷೀಯ ಚುನಾವಣೆಯಲ್ಲಿ ...

news

ಮತ್ತಷ್ಟು ಅಣ್ವಸ್ತ್ರ ಪರೀಕ್ಷೆ ನಡೆಸಲು ಕಿಮ್ ಜಾಂಗ್ ಉನ್ ಆದೇಶ

ಸಿಯೋಲ್: ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಪಡೆಗಳು ನಡೆಸುತ್ತಿರುವ ದೊಡ್ಡ ಮಟ್ಟದ ಜಂಟಿ ಸಮರಾಭ್ಯಾಸವನ್ನು ...