ಪ್ರಧಾನಿ ಮೋದಿಗೆ ಇನ್ನು ಹೂಗುಚ್ಛ ನೀಡುವಂತಿಲ್ಲ!

NewDelhi, ಮಂಗಳವಾರ, 18 ಜುಲೈ 2017 (09:27 IST)

ನವದೆಹಲಿ: ವಿಐಪಿಗಳು ಕಾರ್ಯಕ್ರಮಕ್ಕೆ ಆಗಮಿಸುವಾಗ ಅವರನ್ನು ನೀಡಿ ಸ್ವಾಗತಿಸುವುದು ನಮ್ಮಲ್ಲಿ ಸಾಮಾನ್ಯ. ಆದರೆ ಪ್ರಧಾನಿ ಮೋದಿಗೆ ಇನ್ನು ಮುಂದೆ ಹೂಗುಚ್ಛ ನೀಡಿ ಸ್ವಾಗತಿಸುವಂತಿಲ್ಲ.


 
ಹಾಗೆಂದು ಖುದ್ದು ಕೇಂದ್ರ ಸರ್ಕಾರವೇ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಪ್ರಧಾನಿ ಮೋದಿಯನ್ನು ಸ್ವಾಗಿತಿಸುವಾಗ ಹೂಗುಚ್ಛ ನೀಡಬೇಡಿ. ಅದರ ಬದಲಿಗೆ, ಪುಸ್ತಕ, ಖಾದಿ ವಸ್ತುಗಳು ಅಂತಹದ್ದೇನಾದರೂ ಕೊಡಬೇಕು ಎಂದು ಸುತ್ತೋಲೆಯಲ್ಲಿ ಖಡಕ್ ಆಗಿ ಸೂಚಿಸಲಾಗಿದೆ. ಪ್ರಧಾನಿ ಎಲ್ಲೇ ಹೋದರೂ ಈ ಪದ್ಧತಿಯನ್ನು ಅನುಸರಿಸಬೇಕು ಎಂದು ಗೃಹ ಖಾತೆ ರಾಜ್ಯ ಸಚಿವಾಲಯ ಸಂದೇಶ ನೀಡಿದೆ.
 
ಕೆಲವು ದಿನಗಳ ಹಿಂದೆ ಕೇರಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ವಾಗತಿಸುವಾಗ ಹೂಗುಚ್ಛದ ಬದಲು ಪುಸ್ತಕ ಕೊಡಿ. ಯುವಕರಲ್ಲಿ ನಿರಂತರವಾಗಿ ಓದುವ ಹವ್ಯಾಸ ಬೆಳೆಸಬೇಕು ಎಂದಿದ್ದರು. ಅದರ ಪರಿಣಾಮವೇ ಈ ಸುತ್ತೋಲೆ.
 
ಇದನ್ನೂ ಓದಿ.. ಶ್ರೀಲಂಕಾ ಸರಣಿಗೆ ಮೊದಲು ಅರ್ಧ ತಲೆ ಬೋಳಿಸಿಕೊಂಡ ಹಾರ್ದಿಕ್ ಪಾಂಡ್ಯ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಹೂಗುಚ್ಛ ಗೃಹ ಸಚಿವಾಲಯ ಕೇಂದ್ರ ಸರ್ಕಾರ ರಾಷ್ಟ್ರೀಯ ಸುದ್ದಿಗಳು Pm Modi Flower Bouqe Home Ministry Central Govt National News

ಸುದ್ದಿಗಳು

news

ರಾಷ್ಟ್ರಪತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋಲಬಹುದು: ಪರಮೇಶ್ವರ್

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಮೀರಾಕುಮಾರ್ ...

news

ಎನ್`ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ

ಎನ್`ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರನ್ನ ಆಯ್ಕೆ ...

news

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಗುಪ್ತಾಂಗದಲ್ಲಿ ಕಲ್ಲು ತೂರಿದ ದುಷ್ಕರ್ಮಿಗಳು

ಮುಂಬೈ: ಮೂವರು ದುಷ್ಕರ್ಮಿಗಳು 40 ವರ್ಷದ ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಲ್ಲದೇ ಲೈಂಗಿಕ ...

news

ಮಲಮಗಳ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ ಮಲತಂದೆ ಅರೆಸ್ಟ್

ಫತೇಹಬಾದ್: ಮಲತಂದೆಯೊಬ್ಬ ತನ್ನ ಮಲಮಗಳ ಮೇಲೆ ಮೂರು ತಿಂಗಳುಗಳಿಂದ ನಿರಂತರವಾಗಿ ಅತ್ಯಾಚಾರೆವೆಸಗಿದ ಹೇಯ ...

Widgets Magazine